ಬಿಎಂಟಿಸಿಯ ಸಾಮಾನ್ಯ ಬಸ್ಸಲ್ಲೂ ವೈ ಫೈ


Team Udayavani, May 12, 2017, 11:31 AM IST

bmtc-bus.jpg

ಬೆಂಗಳೂರು: ಪ್ರಯಾಣಿಕರ ಆಕರ್ಷಣೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತು ನೀಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗ ಒಂದು ಹೆಜ್ಜೆ ಮುಂದೆ ಹೋಗಿ,  ಸಾಮಾನ್ಯ ಬಸ್‌ಗಳಲ್ಲೂ ಉಚಿತ ವೈ-ಫೈ ಸೇವೆ ನೀಡಲು ನಿರ್ಧರಿಸಿದೆ. 

ಈ ಸಂಬಂಧ ಈಗಾಗಲೇ ಟೆಂಡರ್‌ ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ಒಂದೆರಡು ತಿಂಗಳಲ್ಲಿ ಪ್ರಯಾಣಿಕರಿಂದ ತುಂಬಿತುಳುಕುವ ಸಾಮಾನ್ಯ ಬಸ್‌ಗಳಲ್ಲೂ ಉಚಿತ ವೈ-ಫೈ ಸೇವೆ ಸಿಗಲಿದೆ. ಹೊಸದಾಗಿ ರಸ್ತೆಗಿಳಿಯಲಿರುವ ಸಾವಿರ ಸಾಮಾನ್ಯ ಬಸ್‌ಗಳಲ್ಲಿ ಈ ಹೈಟೆಕ್‌ ಸೇವೆ ಲಭ್ಯವಾಗಲಿದೆ. 

ಬಸ್‌ಗಳಲ್ಲಿ ಪ್ರಯಾಣಿಸುವ ಮೊದಲ ಹಂತದಿಂದ ಕೊನೆಯ ಹಂತದವರೆಗಿನ ಎಲ್ಲ ಪ್ರಯಾಣಿಕರಿಗೆ, ಇಡೀ ದಿನ ಗರಿಷ್ಠ 30 ಎಂಬಿಯಷ್ಟು ಉಚಿತ ವೈ-ಫೈ ಸೇವೆ ಪಡೆಯಲು ಅವಕಾಶ ಇರುತ್ತದೆ. ಒಂದೇ ಲಾಗ್‌ಇನ್‌ ಮತ್ತು ಪಾಸ್‌ವರ್ಡ್‌ ನೀಡಲಿದ್ದು, ಇದರ ವೇಗ ಕನಿಷ್ಠ 7.2 ಎಂಬಿಪಿಎಸ್‌ ಇರಲಿದೆ. ಮೆಜೆಸ್ಟಿಕ್‌, ಶಿವಾಜಿನಗರ, ಶಾಂತಿನಗರ ಸೇರಿದಂತೆ ನಗರದ ಬಹುತೇಕ ಎಲ್ಲ ಮಾರ್ಗಗಳಲ್ಲೂ ನೂತನ ಸಾಮಾನ್ಯ ಬಸ್‌ಗಳು ಸಂಚರಿಸಲಿದ್ದು, ಅವುಗಳಲ್ಲಿ ಈ ಸೇವೆ ಲಭ್ಯವಾಗಲಿದೆ.   

ಪ್ರಯಾಣಿಕರು ಒಂದು ಬಸ್‌ನಿಂದ ಮತ್ತೂಂದು ಬಸ್‌ಗೆ ಪ್ರಯಾಣಿಸಿದರೂ ವೈ-ಫೈ ಸೇವೆಯಲ್ಲಿ ವ್ಯತ್ಯಯ ಆಗುವುದಿಲ್ಲ. ಹಾಗೂ ನಿಗದಿಗಿಂತ ಹೆಚ್ಚು ಬಳಕೆಗೂ ಅವಕಾಶ ಇರುವುದಿಲ್ಲ ಎಂದು ಬಿಎಂಟಿಸಿ ವಾಣಿಜ್ಯ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.  ಮೆಟ್ರೋ ಮೊದಲ ಹಂತ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಪ್ರಯಾಣಿಕರು ಬಿಎಂಟಿಸಿಯಿಂದ ವಿಮುಖರಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈಚೆಗೆ ಎರಡನೇ ಹಂತದ ಪ್ರಯಣ ದರವನ್ನು 2 ರೂ. ಇಳಿಕೆ ಮಾಡಲಾಯಿತು.

ಈಗ ಹೊಸದಾಗಿ ಸೇರ್ಪಡೆಗೊಳ್ಳಲಿರುವ ಬಸ್‌ಗಳಿಗೆ ವೈ-ಫೈ ಸೇವೆ ಕಲ್ಪಿಸುವ ಮೂಲಕ ಜನರನ್ನು ಆಕರ್ಷಿಸಲು ನಿಗಮ ಮುಂದಾಗಿದೆ. ಈ ಯೋಜನೆಯಲ್ಲಿ ಬಿಎಂಟಿಸಿ ಯಾವುದೇ ಖರ್ಚು ಮಾಡುವುದಿಲ್ಲ. ಬದಲಿಗೆ ಏಜೆನ್ಸಿಗಳಿಗೆ ಟೆಂಡರ್‌ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಆ ಏಜೆನ್ಸಿಗಳಿಗೆ ಬಸ್‌ಗಳಲ್ಲಿ ಜಾಹೀರಾತು ಪ್ರಸಾರ ಮಾಡಲು ಅವಕಾಶ ನೀಡಲಾಗುತ್ತದೆ. 

ನಿಲ್ದಾಣಗಳಲ್ಲೂ ವೈ-ಫೈ: ವೋಲ್ವೊ ಬಸ್‌ಗಳು ಮತ್ತು ಆಯ್ದ ಪ್ರಮುಖ ನಿಲ್ದಾಣಗಳಲ್ಲೂ ಉಚಿತ ವೈ-ಫೈ ನೀಡಲಾಗುತ್ತಿದೆ. ಈ ಸಂಬಂಧದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಪಿಐಟಿ ಎಂಬ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. 

ಹಳೆಯ 200 ಮತ್ತು ಹೊಸದಾಗಿ ಬಂದಿರುವ 150 ಸೇರಿ ಒಟ್ಟಾರೆ 350 ವೋಲ್ವೊ ಬಸ್‌ಗಳಲ್ಲಿ ಈ ಸೇವೆ ಇರಲಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಜನರಿಗೆ ಸೇವೆ ಲಭ್ಯವಾಗಲಿದೆ. ಮುಖ್ಯವಾಗಿ ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ವಿಮಾನ ನಿಲ್ದಾಣ ಮಾರ್ಗಗಳಲ್ಲಿ ಈ ಇಂಟರ್‌ನೆಟ್‌ ಸೇವೆ ಪಡೆಯಬಹುದು. ಆದರೆ, ಇಲ್ಲಿಯೂ ಒಂದು ದಿನಕ್ಕೆ 30 ಎಂಬಿ ಡಾಟಾ ಬಳಕೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದಲ್ಲದೆ, ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್‌), ಶಿವಾಜಿನಗರ, ಶಾಂತಿನಗರ, ದೊಮ್ಮಲೂರು, ವೈಟ್‌ಫೀಲ್ಡ್‌, ಯಶವಂತಪುರ, ವಿಜಯನಗರ, ಕೆಂಗೇರಿ, ಬನಶಂಕರಿ, ಜಯನಗರ, ಬನ್ನೇರುಘಟ್ಟ, ಕೋರಮಂಗಲ ನಿಲ್ದಾಣಗಳಲ್ಲಿ ಉಚಿತ ಇಂಟರ್‌ನೆಟ್‌ ಸೇವೆ ಲಭ್ಯವಾಗಲಿದೆ. ಉದ್ದೇಶಿತ ನಿಲ್ದಾಣಗಳು ಅಥವಾ ಬಸ್‌ಗಳನ್ನು ಏರಿದ ತಕ್ಷಣ ಮೊಬೈಲ್‌ನಲ್ಲಿ ವೈ-ಫೈ ಆನ್‌ ಮಾಡಬೇಕು. ಆಗ ಪಾಸ್‌ವರ್ಡ್‌ ಕೇಳುತ್ತದೆ. ಆ ಬಸ್‌ ಅಥವಾ ನಿಲ್ದಾಣಗಳಲ್ಲಿ ಸೂಚಿಸಲಾದ ನಿರ್ದೇಶನಗಳ ಮೂಲಕ ಪ್ರಯಾಣಿಕರು ಈ ಸೇವೆ ಪಡೆಯಬಹುದು. 

ಆಯಾ ನಿಲ್ದಾಣಗಳಲ್ಲಿನ ಜನಸಾಂದ್ರತೆಗೆ ಅನುಗುಣವಾಗಿ ವೈ-ಫೈ ಸೇವೆ ಇರುತ್ತದೆ. ಉದಾಹರಣೆಗೆ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರದಟ್ಟಣೆ ಹೆಚ್ಚಿರುವುದರಿಂದ ಗರಿಷ್ಠ 500 ಪ್ರಯಾಣಿಕರು ಒಟ್ಟಿಗೆ ಈ ಸೇವೆ ಪಡೆಯಬಹುದು. ಅದೇ ರೀತಿ, ಶಿವಾಜಿನಗರ, ಶಾಂತಿನಗರದಲ್ಲಿ ಈ ಸೇವೆಯನ್ನು 100 ಜನ ಮಾತ್ರ ಒಟ್ಟಿಗೆ ಪಡೆಯಲು ಸಾಧ್ಯವಾಗಲಿದೆ. ಇದಕ್ಕಿಂತ ಹೆಚ್ಚು ಜನ ಈ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದೂ ಸ್ಪಷ್ಪಪಡಿಸುತ್ತಾರೆ. 

ಓಲಾ-ಉಬರ್‌ಗೂ ಸೆಡ್ಡು?
ಆ್ಯಪ್‌ ಆಧಾರಿತ ಓಲಾ-ಉಬರ್‌ ಟ್ಯಾಕ್ಸಿಗಳು ಹವಾನಿಯಂತ್ರಿತ ಜತೆಗೆ ಉಚಿತ ಇಂಟರ್‌ನೆಟ್‌ ಸೇವೆ ಕಲ್ಪಿಸಲು ಸಿದ್ಧತೆ ನಡೆಸಿವೆ. ಇದಕ್ಕೆ ಪ್ರತಿಯಾಗಿ ಬಿಎಂಟಿಸಿ ಕೂಡ ಪ್ರಯಾಣಿಕರಿಗೆ ಉಚಿತ ವೈ-ಫೈ ಸೇವೆ ನೀಡಲು ಮುಂದಾಗಿದೆ ಎನ್ನಲಾಗಿದೆ.   ಈಗಾಗಲೇ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಿಂದಲೂ ಬಿಎಂಟಿಸಿ ಬಸ್‌ಗಳಿಂದ ಪ್ರಯಾಣಿಕರು ವಿಮುಖರಾಗಿದ್ದಾರೆ. ಈ ಮಧ್ಯೆ ಟ್ಯಾಕ್ಸಿಗಳಲ್ಲಿ ವೈ-ಫೈ ಸೇವೆಯನ್ನೂ ಆರಂಭಿಸಿದರೆ ಮತ್ತಷ್ಟು ಹೊಡೆತ ಬೀಳಲಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಬಸ್‌ಗಳಲ್ಲೂ ವೈ-ಫೈ ನೀಡುವ ಮೂಲಕ ಪ್ರತಿಸ್ಪರ್ಧೆಗೆ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ವೋಲ್ವೊ ಬಸ್‌ಗಳಲ್ಲಿ ವೈ-ಫೈ  ಸೇವೆ ನೀಡುವ ಸಂಬಂಧ ಈಗಾಗಲೇ ಟೆಂಡರ್‌ ಪೂರ್ಣಗೊಂಡಿದೆ. ಮಿಡಿ ಬಸ್‌ಗಳು ಸೇರಿದಂತೆ ಹೊಸದಾಗಿ ಬಿಎಂಟಿಸಿಗೆ ಸೇರ್ಪಡೆಗೊಳ್ಳಲಿರುವ ಸಾವಿರ ಸಾಮಾನ್ಯ ಬಸ್‌ಗಳಲ್ಲೂ ಉಚಿತ ವೈ-ಫೈ ನೀಡಲಾಗುವುದು. ಇದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಲಿದೆ. ಜತೆಗೆ ನಿಗಮಕ್ಕೆ ಆದಾಯವೂ ಬರಲಿದೆ.
-ಡಾ.ಏಕರೂಪ್‌ ಕೌರ್‌, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

1-neemo

ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.