ಜೀವದ ಗೆಳತಿ ನೆನಪಲ್ಲೇ ನೇಣಿಗೆ ಶರಣು
Team Udayavani, Oct 6, 2017, 11:45 AM IST
ಬೆಂಗಳೂರು: ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಪ್ರಾಣ ಸ್ನೇಹಿತೆಯ ನೆನಪಲ್ಲೇ ಮಾನಸಿಕ ಖನ್ನತೆಗೆ ಒಳಗಾಗಿದ್ದ ಬಿಕಾಂ ಪದವೀಧರೆ ಕೂಡ ನೇಣಿಗೆ ಕೊರಳೊಡ್ಡಿರುವ ಘಟನೆ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭುವನೇಶ್ವರಿ (20) ನೇಣಿಗೆ ಶರಣಾದವರು.
ಲಕ್ಷ್ಮೀನಾರಾಯಣಪುರದ 5ನೇ ಕ್ರಾಸ್‌ನಲ್ಲಿ ಪೋಷಕರ ಜತೆ ವಾಸವಿದ್ದ ಭುವನೆಶ್ವರಿ, ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ದಿನಸಿ ತರಲು ಹೋಗಿದ್ದ ತಾಯಿ ರಾಣಿ ಅವರು ವಾಪಸ್ ಬಂದು ನೋಡಿದಾಗ. ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮಗಳನ್ನು ಹಲವು ಬಾರಿ ಕರೆದರೂ ಸ್ಪಂದಿಸದಿದ್ದಾಗ ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.
ಮೃತ ಭುವನೇಶ್ವರಿ ದ್ವಿತೀಯ ಪಿಯುಸಿಯಿಂದ ತನ್ನ ಸ್ನೇಹಿತೆ ರಶ್ಮಿ ಜತೆ ಗಾಢವಾದ ಸ್ನೇಹ ಹೊಂದಿದ್ದರು. ಹೀಗಾಗಿ ಬಿಕಾಂ ಪದವಿ ವ್ಯಾಸಂಗಕ್ಕಾಗಿ ಇಬ್ಬರೂ ಒಟ್ಟಿಗೇ ಶೇಷಾದ್ರಿಪುರಂ ಕಾಲೇಜು ಸೇರಿದ್ದರು. 6 ತಿಂಗಳ ಹಿಂದಷ್ಟೇ ಪದವಿ ಪೂರ್ಣಗೊಳಿಸಿದ ಗೆಳತಿಯರಿಬ್ಬರೂ, ಕೆಲಸ ಹುಡುಕುವ ಪ್ರಯತ್ನದಲ್ಲಿದ್ದರು. ಓದು ಮುಗಿದ ನಂತರವೂ ಆಗಾಗೆ ರಶ್ಮಿಯನ್ನು ಭುವನೇಶ್ವರಿ ಭೇಟಿ ಮಾಡುತ್ತಿದ್ದರು.
ಈ ಮಧ್ಯೆ ಕಳೆದ ಮೂರು ತಿಂಗಳ ಹಿಂದೆ ರಶ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಅಂತ್ಯಸಂಸ್ಕಾರಕ್ಕೆ ಹೋಗಿಬಂದಿದ್ದ ಭುವನೇಶ್ವರಿ ಗೆಳತಿಯನ್ನು ಕಳೆದುಕೊಂಡ ಬಗ್ಗೆ ತಾಯಿ ಹಾಗೂ ತಂದೆಯ ಬಳಿ ಹೇಳಿಕೊಂಡು ಅಳುತ್ತಿದ್ದರು. ರಶ್ಮಿಯನ್ನು ಕಳೆದುಕೊಂಡಿದ್ದ ನೋವಿನಲ್ಲಿ ಖನ್ನತೆಗೊಳಗಾಗಿದ್ದ ಭುವನೇಶ್ವರಿ, ನಿದ್ರೆ ಮಾಡುವಾಗಲೂ ಕನವರಿಸುತ್ತಿದ್ದರು. ಹೀಗಾಗಿ ರಶ್ಮಿಯನ್ನು ಸಮಾಧಾನಪಡಿಸಿ, ಇತ್ತೀಚೆಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಆಕೆಯ ಪೋಷಕರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.