ರಾಜಧಾನಿಯಾದ್ಯಂತ ವೈಕುಂಠ ಏಕಾದಶಿ ವೈಭವ
Team Udayavani, Dec 30, 2017, 12:05 PM IST
ಬೆಂಗಳೂರು: ಕೊರೆಯುವ ಚಳಿ ನಡುವೆಯೂ ಸಿಲಿಕಾನ್ ಸಿಟಿಯ ಹಲವು ದೇವಾಲಗಳು ಶುಕ್ರವಾರ ವೈಭವದ ವೈಕುಂಠ ಏಕಾದಶಿ ಸಂಭ್ರಮಕ್ಕೆ ಸಾಕ್ಷಿಯಾದವು. ವೈಕುಂಠ ಏಕಾದಶಿ ದಿನದಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಪ್ರತಿತಿ ಇದೆ. ಈ ಹಿನ್ನೆಲೆಯಲ್ಲಿ ನಗರದ ದೇವಾಲಯಗಳು ಭಕ್ತರಿಂದ ತುಂಬಿದ್ದವು.
ಒಂದೆಡೆ ಮಬ್ಬುಗತ್ತಲು, ಮತ್ತೂಂದೆಡೆ ಚಳಿ. ಇದರ ನಡುವೆ ದೇವರ ದರ್ಶನ ಪಡೆಯಲು ಕಿಲೋಮೀಟರ್ ಗಟ್ಟಲೆ ಸಾಲು. ಇದ್ಯಾವುದನ್ನು ಲೆಕ್ಕಿಸದ ಅಸಂಖ್ಯಾತ ಭಕ್ತ ಸಮೂಹ ಮುಂಜಾನೆ 3 ಗಂಟೆಯಿಂದಲೇ ದೇವರ ದರ್ಶನ ಪಡೆಯಲು ಮುಂದಾಗಿದ್ದರು. ಅಸಂಖ್ಯ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ನಗರದ ದೇವಾಲಯಗಳಲ್ಲಿ ಭಕ್ತರ ಸುಗಮ ದರ್ಶನಕ್ಕಾಗಿ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಡರಾತ್ರಿಯೇ ಸರತಿ ಸಾಲು: ಚಾಮರಾಜಪೇಟೆಯ ಕೆ.ಆರ್.ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಜಾತ್ರೆ ಚಿತ್ರಣ ಕಂಡುಬಂತು. ಪ್ರತಿ ವರ್ಷ ದೇವಾಲಯಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಹಿನ್ನೆಯಲ್ಲಿ ಈ ಬಾರಿ ಗುರುವಾರ ಮಧ್ಯರಾತ್ರಿಯೇ ನೂರಾರು ಭಕ್ತರು ದೇವಾಲಯದೆದುರು ಸಾಲುಗಟ್ಟಿ ನಿಂತಿದ್ದರು.
ಬೆಳಗಾಗುತ್ತಿದ್ದಂತೆ ಈ ಸಾಲು ದೊಡ್ಡದಾಗುತ್ತಾ ಸಾಗಿತು. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ, ಭಕ್ತರ ಸುಗಮ ದರ್ಶನಕ್ಕಾಗಿ ಎರಡು ಸಾಲುಗಳ ವ್ಯವಸ್ಥೆ ಮಾಡಿತ್ತು. ಶುಕ್ರವಾರ ದೇವಾಲಯಕ್ಕೆ 80 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾಗಿ ಆಡಳಿತ ಮಂಡಳಿ ಸದಸ್ಯರೊಬ್ಬರು ತಿಳಿಸಿದರು.
ತಿರುಮಲ ಗಿರಿಯಲ್ಲಿ ಭಕ್ತರ ದಂಡು: ಜೆ.ಪಿ.ನಗರ 2ನೇ ಹಂತದಲ್ಲಿರುವ ಶ್ರೀ ತಿರುಮಲಗಿರಿ ಲಕ್ಷಿವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲೂ ನಸುಕಿನ 3 ಗಂಟೆಯಿಂದಲೇ ವಿಶೇಷ ಪೂಜೆಗಳು ಆರಂಭವಾಗಿದ್ದವು. ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ನೆರೆದಿತ್ತು.
ಒಂದೆಡೆ ಪುರೋಹಿತರ ಮಂತ್ರ ಘೋಷಗಳು ಮತ್ತೂಂದೆಡೆ ಭಕ್ತರ ಸಾಲಿನಿಂದ ವೆಂಕಟೇಶ್ವರನ ಭಜನೆ ಕೇಳಿಬರುತ್ತಿತ್ತು. ಬಿಟಿಎಂ ಲೇಔಟ್, ಬನ್ನೆರುಘಟ ರಸ್ತೆ, ಜಯನಗರ, ಬನಶಂಕರಿ, ಹೊರಮಾವು, ಕುಮಾರ ಸ್ವಾಮಿ ಲೇಔಟ್, ಕೋಣನಕುಂಟೆ, ಪುಟ್ಟೇನಹಳ್ಳಿ ಸೇರಿ ವಿವಿಧ ಭಾಗಗಳ ನಿವಾಸಿಗಳು ನಸುಕಿನಿಂದಲೇ ದರ್ಶನಕ್ಕೆ ನಿಂತಿದ್ದಿ, 60 ಸಾವಿರ ಭಕ್ತರು ದರ್ಶನ ಪಡೆದಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ಭಕ್ತರು ಸೆಲ್ಫಿಯಲ್ಲಿ ಬ್ಯುಸಿ: ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಶುಕ್ರವಾರ ನಸುಕಿನ 3 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ವಿಶೇಷ ಪೂಜೆಗಳು ನೆರವೇರಿದವು. ಬೆಳಗ್ಗೆ 5 ಗಂಟೆಗೆ ವೈಕುಂಠ ದ್ವಾರಕ್ಕೆ ಶ್ರೀಲಕ್ಷಿನಾರಾಯಣ ಅಲಂಕಾರದಲ್ಲಿ ಶ್ರೀರಾಧಾ ಕೃಷ್ಣ ಚಂದ್ರರ ಪಲ್ಲಕ್ಕಿ ಉತ್ಸವ, ವೈಕುಂಠ ದ್ವಾರ ಪೂಜೆ,
ಕಲ್ಯಾಣೋತ್ಸವದ ಜತೆಗೆ ತೋಮಾಲೆ ಸೇವೆ, ಲಕ್ಷಾರ್ಚನೆ ಸೇರಿ ಹಲವು ಪೂಜಾ ವಿಧಿಗಳು ನೆರವೇರಿದವು. ವೈಕುಂಠ ದ್ವಾರ ಹಾಗೂ ದೇವಾಲಯದ ಹೊರಾಂಗಣದಲ್ಲಿ ಸೆಲ್ಪಿ ತೆಗೆದುಕೊಳ್ಳುವಲ್ಲಿ ಭಕ್ತರು ಬ್ಯುಸಿಯಾಗಿದ್ದರು. ಇದೇ ವೇಳೆ ಭಕ್ತರಿಗೆ 10 ಟನ್ ಸಕ್ಕರೆ ಪೊಂಗಲ್ ಮತ್ತು 1 ಲಕ್ಷ ಲಡ್ಡು ಪ್ರಸಾದ ವಿತರಿಸಲಾಯಿತು.
ಮಲ್ಲೇಶ್ವರದಲ್ಲಿ ಕಲ್ಯಾಣೋತ್ಸವ: ಮಲ್ಲೇಶ್ವರದ ಶ್ರೀ ಪಾಂಡುರಂಗ ವಿಷ್ಣುಸಹಸ್ರಾನಾಮ ಮಂಡಳಿಯಿಂದ ಮಲ್ಲೇಶ್ವರ ಆಟದ ಮೈದಾನದ ಎದುರು ಶ್ರೀನಿವಾಸ ಕಲ್ಯಾಣೋತ್ಸವದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶುಕ್ರವಾರ ಮುಂಜಾನೆ 5 ಗಂಟೆೆಯಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಆರಂಭವಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆವರೆಗೂ ನಡೆಯಲಿದೆ.
ರಾಜಾಜಿನಗರದ 5ನೇ ಬ್ಲಾಕ್‌ನ, ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ, ಮಹಾಲಕ್ಷಿಪುರದ ಶ್ರೀ ಶ್ರೀನಿವಾಸ ದೇವಸ್ಥಾನ, ಜಯಮಹಲ್ ಬಡಾವಣೆಯ ಬಂಡೆ ಶ್ರೀ ಸತ್ಯ ಆಂಜನೇಯಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಶ್ರೀವಿನಾಯಕ ಶ್ರೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮುಗಿಲು ಮುಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.