“ವಿಶೇಷ ಪಾಲನಾ ಯೋಜನೆ’ಗೆ ಸರ್ಕಾರ ಅನಾದರ
Team Udayavani, Aug 17, 2017, 6:20 AM IST
ಬೆಂಗಳೂರು: ಎಚ್‌ಐವಿ ಬಾಧಿತ ಮತ್ತು ಸೋಂಕಿತ ಮಕ್ಕಳ ಪೋಷಣೆಗೆ ಜಾರಿಗೆ ತಂದಿರುವ “ವಿಶೇಷ ಪಾಲನಾ ಯೋಜನೆ’ ಸರ್ಕಾರದ ಅನಾದರಕ್ಕೊಳಗಾಗಿದೆ. ಯೋಜನೆಗೆ ಸರ್ಕಾರ ಕೊಡುತ್ತಿರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಸಹಸ್ರಾರು ಮಕ್ಕಳು ಈ ಯೋಜನೆಯಿಂದ ವಂಚಿತರಾಗುತ್ತಿದ್ದು, ಹೆಚ್ಚುವರಿ ಅನುದಾನದ ಬೇಡಿಕೆ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸಿದೆ.
ರಾಜ್ಯದಲ್ಲಿ ಎಚ್‌ಐವಿ ಬಾಧಿತ 10 ಸಾವಿರ ಹಾಗೂ ಸೋಂಕು ಇರುವ ಪೋಷಕರ 15 ಸಾವಿರ ಮಕ್ಕಳು ಸೇರಿ ರಾಜ್ಯದಲ್ಲಿ ಒಟ್ಟು 25 ಸಾವಿರ ಎಚ್‌ಐವಿ ಬಾಧಿತ ಮತ್ತು ಸೋಂಕಿತ ಮಕ್ಕಳಿದ್ದಾರೆ. ಇವರ ಪೋಷಣೆಗಾಗಿ ರಾಜ್ಯ ಸರ್ಕಾರ 2010ರಲ್ಲಿ ವಿಶೇಷ ಪಾಲನಾ ಯೋಜನೆಯನ್ನು ಜಾರಿಗೆ ತಂದಿತ್ತು.
ಯೋಜನೆಯಡಿ ಎಚ್‌ಐವಿ ಬಾಧಿತ ಮತ್ತು ಸೋಂಕಿತರಿಗೆ ಪ್ರತಿ ತಿಂಗಳಿಗೆ 1 ಸಾವಿರ ರೂ. ಅನ್ನು ಇಡೀ ವರ್ಷ ಸಹಾಯಧನ ಕೊಡುತ್ತದೆ. ಇದಕ್ಕಾಗಿ ಅಂದಾಜು 60 ಕೋಟಿ ರೂ. ಬೇಕಾಗುತ್ತದೆ. ಅದಾಗ್ಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ವರ್ಷದ ಬಜೆಟ್‌ನಲ್ಲಿ ಕನಿಷ್ಠ 40 ಕೋಟಿ ರೂ. ಒದಗಿಸುವಂತೆ ಬೇಡಿಕೆ ಇಟ್ಟಿತ್ತು. ಆದರೆ, ಸರ್ಕಾರ ಕೊಟ್ಟಿದ್ದು ಬರೀ 15 ಕೋಟಿ ರೂ. ಮಾತ್ರ. ಈ ಹಣ 6 ತಿಂಗಳೂ ಸಾಲದು.
ಹಾಗೆ ನೋಡಿದರೆ ಸರ್ಕಾರ ಪ್ರತಿ ವರ್ಷ ಅನುದಾನ ಹೆಚ್ಚಿಸುತ್ತಲೇ ಇದೆ. ಆದರೆ, ಫಲಾನುಭವಿಗಳ ಸಂಖ್ಯೆಯೂ ಏರುತ್ತಲೇ ಇದೆ. ಫಲಾನುಭವಿಗಳ ಸಂಖ್ಯೆಗೆ ತಕ್ಕಂತೆ ಅನುದಾನ ಸಿಗದೇ ಇರುವ ಕಾರಣಕ್ಕೆ ಅನುದಾನದ ಕೊರತೆ ಎದುರಾಗುತ್ತಲೇ ಇದೆ. ಸರ್ಕಾರ ಕೊಡುವ ಅನುದಾನದಲ್ಲಿ ಎಚ್‌ಐವಿ ಬಾಧಿತ ಮತ್ತು ಸೋಂಕಿತ ಎಲ್ಲಾ ಮಕ್ಕಳಿಗೂ ಸಹಾಯಧನ ಕೊಡಲು ಸಾಧ್ಯವಿಲ್ಲ. ಹೀಗಾಗಿ ಸಾವಿರಾರು ಮಕ್ಕಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಯೋಜನೆ ಆರಂಭವಾದ ಮೊದಲ ವರ್ಷ ಕೇವಲ 50 ಲಕ್ಷ ರೂ. ಅನುದಾನ ನೀಡಲಾಗಿತ್ತು. ಅನಂತರ ಕ್ರಮೇಣ ಹೆಚ್ಚಿಸಲಾಯಿತು. ಕಳೆದ ವರ್ಷ 9 ಕೋಟಿ ರೂ. ಇದ್ದ ಅನುದಾನ ಈ ವರ್ಷ 15 ಕೋಟಿ ರೂ. ಆಗಿದೆ. ಅಲ್ಲದೇ ಒಬ್ಬ ಫಲಾನುಭವಿಗೆ ನೀಡಲಾಗುತ್ತಿದ್ದ 800 ರೂ. ಸಹಾಯ ಧನವನ್ನು ಈ ವರ್ಷ 1 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಅನುದಾನದ ಕೊರತೆ ಆಗಿರಲಿಲ್ಲ. ಏಕೆಂದರೆ, ಫಲಾನುಭವಿಗಳ ಸಂಖ್ಯೆ ಕಡಿಮೆ ಇತ್ತು. ಹಾಗಾಗಿ ಲಭ್ಯ ಅನುದಾನದಲ್ಲಿ ಎಲ್ಲರಿಗೂ ಸೌಲಭ್ಯ ದೊರಕುತ್ತಿತ್ತು. ಆದರೆ, 7 ಸಾವಿರ ಇದ್ದ ಫಲಾನುಭವಿಗಳ ಸಂಖ್ಯೆ ಕಳೆದೆರಡು ವರ್ಷಗಳಲ್ಲಿ ಏಕಾಏಕಿ 12ರಿಂದ 13 ಸಾವಿರ ಆಗಿದೆ. ಹೀಗಾಗಿ ಸರ್ಕಾರ ಅನುದಾನ ಹೆಚ್ಚಿಸಿದ್ದರೂ, ಕೊರತೆ ಎದುರಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ಹಣ?: ಈ ಮಧ್ಯೆ ಕಳೆದ ವರ್ಷದಿಂದ ಕೇವಲ ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ವಿಶೇಷ ಪಾಲನಾ ಯೋಜನೆಯಡಿ ಸೌಲಭ್ಯ ನೀಡಲಾಗುತ್ತಿದೆ. ಹೀಗಾಗಿ ಎಚ್‌ಐವಿ ಬಾಧಿತ, ಸೋಂಕಿತ ಮತ್ತು ಪೋಷಕರ 4 ಸಾವಿರ ಎಸ್ಸಿ, ಎಸ್ಟಿ ಮಕ್ಕಳು ಮಾತ್ರ ಸಹಾಯ ಧನ ಪಡೆದುಕೊಳ್ಳುತ್ತಿದ್ದು, ಇತರ ಮಕ್ಕಳಿಗೆ ಈ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪವಿದೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಅಧಿಕಾರಿ ಗಳು, ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ಹಣ ಕೊಡಲಾಗುತ್ತಿದೆ ಎಂಬುದು ಸುಳ್ಳು. ಕಳೆದ ವರ್ಷ ಸರ್ಕಾರ ನೀಡಿದ್ದ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ಉಳಿಕೆ ಹಣವನ್ನು ಎಸ್ಸಿ, ಎಸ್ಟಿ ಮಕ್ಕಳಿಗೆ ನೀಡಿದ್ದೇವೆ. ಇನ್ನು ನಮಗೆ ಸಿಕ್ಕ ಫೂರ್ಣ ಅನುದಾನವನ್ನು ಬೇರೆ ಮಕ್ಕಳಿಗೆ ಹಂಚಿದ್ದೇವೆ ಎಂದು ಹೇಳುತ್ತಾರೆ.
ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಬಾಧಿತ ಮಕ್ಕಳಿಗೆ ಅವರ ಪೋಷಕರ ಪೋಷಣೆಯ ಜೊತೆಗೆ ಸರ್ಕಾರ ಹೆಚ್ಚುವರಿಯಾಗಿ ಸಹಾಯಧನ ನೀಡುತ್ತದೆ. ಲಭ್ಯವಿರುವ ಅನುದಾನದಲ್ಲಿ ಎಷ್ಟು ತಿಂಗಳು ಸಾಧ್ಯವೋ ಅಷ್ಟು ತಿಂಗಳು ಹಣ ನೀಡುತ್ತೇವೆ. ಹಾಗಂತ, ಮಕ್ಕಳ ಪೋಷಣೆ ನಿಲ್ಲುತ್ತದೆ ಎಂದರ್ಥವಲ್ಲ. ಅದಾಗ್ಯೂ ಈಗಿರುವ ಅನುದಾನದಲ್ಲಿ ಎಲ್ಲ ಮಕ್ಕಳಿಗೂ ಸೌಲಭ್ಯ ನೀಡಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು.
– ನರ್ಮದಾ ಆನಂದ್, ಯೋಜನಾ ನಿರ್ದೇಶಕಿ
ಎಲ್ಲ ಮಕ್ಕಳಿಗೂ ಪೂರ್ಣ ಪ್ರಮಾಣದ ಪೋಷಣಾ ಭತ್ಯೆ ಸಿಗಬೇಕು. ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ಸಹಾಯಧನ ನೀಡುವ ಮಾತುಗಳು ಕೇಳಿ ಬರುತ್ತಿವೆ. ಇದು ಸರಿಯಲ್ಲ. ಈ ವಿಚಾರದಲ್ಲಿ ಶೀಘ್ರದಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡುತ್ತೇವೆ
– ಚಂದ್ರಿಕಾ, ಬೆಂಗಳೂರು ಎಚ್‌ಐವಿ ಏಡ್ಸ್ ಫೋರಂ
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.