ಸಿಟಿ ಟ್ಯಾಕ್ಸಿಗಳಿಗೆ ದರ ಹೆಚ್ಚಿಸಿ ಸರ್ಕಾರ ಆದೇಶ
Team Udayavani, Jan 11, 2018, 7:50 AM IST
ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿಗಳು ಸೇರಿ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಪಡಿಸಿ ಬುಧವಾರ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗರಿಷ್ಠ ದರವನ್ನು ಹೆಚ್ಚಳ ಮಾಡಿದೆ.
ಕಾರುಗಳ ಬೆಲೆಗಳನ್ನು ಆಧರಿಸಿ ಟ್ಯಾಕ್ಸಿ ಸೇವೆಗಳ ದರಗಳನ್ನು ಸೂಚಿಸಿದ್ದು, “ಎ’ ವರ್ಗವು ಹೆಚ್ಚು ಹಾಗೂ “ಡಿ’ ವರ್ಗವು ಕಡಿಮೆ ಬೆಲೆಬಾಳುವ ವಾಹನಗಳು ಎಂದು ವರ್ಗೀಕರಿಸಿ ದರ ನಿಗದಿಪಡಿಸಲಾಗಿದೆ. ಈ ಪೈಕಿ “ಡಿ’ ವರ್ಗದಲ್ಲಿ ಬರುವ ಇಂಡಿಕಾ, ಮಾರುತಿ ಅಲ್ಟೊ ಮಾದರಿಯ ಕಾರುಗಳಿಗೆ 4 ಕಿ.ಮೀ.ಗೆ ಕನಿಷ್ಠ 44 ರೂ.ನಿಗದಿಪಡಿಸಲಾಗಿದೆ. ಅಂದರೆ, ಟ್ಯಾಕ್ಸಿಯನ್ನು ಹತ್ತಿ ಇಳಿದರೆ 44 ರೂ. ತೆರಬೇಕಾಗುತ್ತದೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ.
ತದನಂತರದ ಪ್ರತಿ ಕಿ.ಮೀ.ಗೆ ದರಗಳನ್ನು ವಾಹನಗಳ ಮೌಲ್ಯಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿದೆ. “ಡಿ’ ವರ್ಗದ (5 ಲಕ್ಷ ರೂ.ವರೆಗಿನ) ವಾಹನಗಳಿಗೆ ಪ್ರತಿ ಕಿ.ಮೀ.ಗೆ ಕನಿಷ್ಠ 11 ರೂ. ಹಾಗೂ ಗರಿಷ್ಠ 22 ರೂ. ನಿಗದಿಪಡಿಸಲಾಗಿದೆ. “ಸಿ’ ವರ್ಗದ (5ರಿಂದ 10 ಲಕ್ಷ ರೂ.ಒಳಗಿನ) ವಾಹನಗಳಿಗೆ ಕನಿಷ್ಠ 12 ಮತ್ತು ಗರಿಷ್ಠ 24 ರೂ.,”ಬಿ’ ವರ್ಗ (10ರಿಂದ 16 ಲಕ್ಷದೊಳಗಿನ) ಕನಿಷ್ಠ 16 ಹಾಗೂ ಗರಿಷ್ಠ 34 ರೂ. ಮತ್ತು “ಎ’ ವರ್ಗದ (16 ಲಕ್ಷ ಮೇಲ್ಪಟ್ಟ) ವಾಹನಗಳಿಗೆ ಕನಿಷ್ಠ 20 ರೂ. ಹಾಗೂ ಗರಿಷ್ಠ 45 ರೂ. ನಿಗದಿಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.