ನ್ಯೂನತೆ ಹೊಂದಿರುವ ಭ್ರೂಣ ತೆಗೆಸಲು ಹೈಕೋರ್ಟ್ ಒಪ್ಪಿಗೆ
Team Udayavani, Dec 18, 2018, 12:18 PM IST
ಬೆಂಗಳೂರು: ಅಸಮರ್ಪಕ ಬೆಳವಣಿಗೆ ಹಾಗೂ ದೈಹಿಕ ನ್ಯೂನತೆ ಹೊಂದಿರುವ 21 ವಾರದ ಭ್ರೂಣ ತೆಗೆಸಲು (ಗರ್ಭಪಾತ) 29 ವರ್ಷ ಮಹಿಳೆಯೊಬ್ಬರಿಗೆ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ. ವೈದ್ಯಕೀಯ ಕಾರಣಗಳಿಗಾಗಿ ತನ್ನ ಗರ್ಭದಲ್ಲಿರುವ 21 ವಾರ ಮೂರು ದಿನ ತುಂಬಿದ ಭ್ರೂಣ ತೆಗೆಸಲು ಅನುಮತಿ ಕೊಡಬೇಕು ಎಂದು ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿತು.
ಈ ಸಂಬಂಧ ವಾಣಿ ವಿಲಾಸ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಮಹಿಳೆಯ ಪರೀಕ್ಷೆ ನಡೆಸಿ ನೀಡಿದ್ದ ವರದಿಯನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು ” ಗರ್ಭಪಾತವನ್ನು ಮಹಿಳೆ ತಮ್ಮ ಸ್ವಂತ ವೆಚ್ಚದಲ್ಲಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ಗರ್ಭಪಾತದಿಂದ ಅರ್ಜಿದಾರ ಮಹಿಳೆಗೆ ಭವಿಷ್ಯದಲ್ಲಿ ಯಾವುದಾದರೂ ತೊಂದರೆ ಎದುರಿಸಬೇಕಾಗಿ ಬಂದರೆ; ಅದಕ್ಕೆ ತಜ್ಞ ವೈದ್ಯರ ತಂಡ ಹೊಣೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಿಲೇವಾರಿ ಮಾಡಿತು.
ಇದಕ್ಕೂ ಮೊದಲು ವಿಚಾರಣೆ ವೇಳೆ, ತಜ್ಞ ವೈದ್ಯರ ತಂಡ ವರದಿ ನ್ಯಾಯಪೀಠಕ್ಕೆ ಸಲ್ಲಿಸಿದ ಸರ್ಕಾರ ಪರ ವಕೀಲರು, 20 ವಾರಗಳ ನಂತರದ ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ಪ್ರಕರಣದಲ್ಲಿ ಮಗುವಿನ ಸ್ಥಿತಿ ಸಂಕೀರ್ಣ ಮತ್ತು ಗಂಭೀರವಾಗಿದೆ. ಇಂತಹ ವಿಷಯಗಳಲ್ಲಿ ತಜ್ಞ ವೈದ್ಯರ ತಂಡದ ವರದಿಯೇ ಅಂತಿಮ ಎಂದು ಹೇಳಿದರು.
ಅನ್ನನಾಳ, ಬೆನ್ನುಮೂಳೆ ಬೆಳವಣಿಗೆಯಿಲ್ಲ: ಶಿಶುವಿನ ಅನ್ನನಾಳದ ಬೆಳವಣಿಗೆಯೇ ಆಗಿಲ್ಲ. ಮಗು ಜನಿಸಿದ ಮೇಲೆ ಅದು ಬೆಳೆಯಬಹುದು. ಆದರೆ, ಜನಿಸಿದ ಕೂಡಲೇ ಅದಕ್ಕೆ ಹಾಲು ಕುಡಿಯಲೂ ಆಗುವುದಿಲ್ಲ. ಹೀಗಾಗಿ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ.
ಈ ಶಸ್ತ್ರಚಿಕಿತ್ಸೆ ತುಂಬಾ ಕ್ಲಿಷ್ಟಕರ ಮತ್ತು ವೆಚ್ಚದಾಯಕವಾಗಲಿದೆ. ಅದೇ ರೀತಿ ಮಗುವಿಗೆ ಬೆನ್ನುಮೂಳೆ ಇಲ್ಲ. ಹೀಗಾಗಿ ಅದು ಜನಿಸಿದ ನಂತರ ಮಲಗಿದ ಸ್ಥಿತಿಯಲ್ಲೇ ಇರಬೇಕಾಗುತ್ತದೆ. ಈ ಎಲ್ಲಾ ಅಂಶಗಳಿಂದ ತಾಯಿಗೆ ಮಾನಸಿಕ ಆಘಾತಗಳಾಗುವ ಸಾಧ್ಯತೆಗಳೂ ಇವೆ ಎಂದು ಸರ್ಕಾರ ಪರ ವಕೀಲರು ಪೀಠಕ್ಕೆ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.