ಅಸಮರ್ಪಕ ಸೇವೆಯಿತ್ತ ಏರ್‌ ಇಂಡಿಯಾಗೆ ಹೈ ತಲೆದಂಡ


Team Udayavani, Mar 14, 2018, 12:08 PM IST

highcourt2.jpg

ಬೆಂಗಳೂರು: ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ವ್ಹೀಲ್‌ ಚೇರ್‌ (ಗಾಲಿ ಕುರ್ಚಿ) ಸಿಗದೇ ಎರಡು ದಿನ ದೂರದ ಲಂಡನ್‌ ವಿಮಾನ ನಿಲ್ದಾಣದಲ್ಲೇ ಉಳಿದುಕೊಂಡು ಇನ್ನಿಲ್ಲದ್ದ ಕಷ್ಟ ಅನುಭವಿಸಿದ ವಿಕಲಚೇತನ ವೈದ್ಯೆಯೊಬ್ಬರಿಗೆ ಹೈಕೋರ್ಟ್‌ ನ್ಯಾಯ ಒದಗಿಸಿದೆ.

ವೈದ್ಯರ ಸಂಕಷ್ಟಕ್ಕೆ ಕಾರಣವಾದ ಏರ್‌ ಇಂಡಿಯಾ ಸಂಸ್ಥೆಯ ಕಾರ್ಯವೈಖರಿಗೆ ಅಸಮಧಾನ ವ್ಯಕ್ತಪಡಿಸಿ, ಪರಿಹಾರ ರೂಪದಲ್ಲಿ 5 ಲಕ್ಷ ರೂ. ಮೊತ್ತವನ್ನು ಠೇವಣಿ ಇಡುವಂತೆ ಸೂಚಿಸಿದೆ. ಬೆಂಗಳೂರಿನ ಮುನೇಶ್ವರ ಬ್ಲಾಕ್‌ ನಿವಾಸಿ ಡಾ. ರಾಜಲಕ್ಷ್ಮೀ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಈ ನಿರ್ದೇಶನ ನೀಡಿತು.

ಎಚ್ಚರಿಕೆ: ವಿಚಾರಣೆ ವೇಳೆ ಅರ್ಜಿದಾರರು ವಿಶೇಷ ಚೇತನರಾಗಿದ್ದು, ದೂರದ ಊರಲ್ಲಿ ತಮಗಾದ ಅನ್ಯಾಯವನ್ನು ತೋಡಿಕೊಂಡರು. ಅಲ್ಲದೆ, ಅರ್ಜಿದಾರರು, ಏರ್‌ ಇಂಡಿಯಾ ಸಂಸ್ಥೆಯ ಅಸಮರ್ಪಕ ಸೇವೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದನ್ನು ವಿವರಿಸಿದರು.

ಇದೊಂದು ಗಂಭೀರ ವಿಚಾರವಾಗಿದ್ದು ಅವರು ಕೋರಿರುವ ಪರಿಹಾರ ಸಂಬಂಧ ಪ್ರತಿವಾದಿಯಾಗಿರುವ ಏರ್‌ಇಂಡಿಯಾ ಸಂಸ್ಥೆ ಮುಂದಿನ ಎರಡು ವಾರಗಳಲ್ಲಿ ಐದು ಲಕ್ಷ ರೂ.ಗಳನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಬಳಿ ಠೇವಣಿ ಇಡಬೇಕು. ಒಂದು ವೇಳೆ ಈ ಆದೇಶ ಉಲ್ಲಂ ಸಿದರೆ ಸಂಸ್ಥೆಯ ನಿರ್ದೇಶಕರ ಖುದ್ದು ಹಾಜರಿಗೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಸಿದ ನ್ಯಾಯಪೀಠ, ವಿಚಾರಣೆಯನ್ನು ಏ.3ಕ್ಕೆ ಮುಂದೂಡಿತು.

ಎರಡು ದಿನ ಏರ್‌ಪೋರ್ಟ್‌ನಲ್ಲಿಯೇ ಸಂಕಷ್ಟ!: ವಿಶೇಷ ಚೇತನ (ಎರಡೂ ಕಾಲು ಅಂಗವೈಕಲ್ಯ) ಆಗಿರುವ ನಾನು ಡಾ. ಎಸ್‌.ಜೆ ರಾಜಲಕ್ಷ್ಮೀ ಮತ್ತು ನನ್ನ ತಾಯಿ 2016ರ ಜುಲೈನಲ್ಲಿ  ಯುರೋಪ್‌ ಪ್ರವಾಸ ಯೋಜನೆ ಹಾಕಿಕೊಂಡಿದ್ದು, ಅದರಂತೆ, ಇಬ್ಬರೂ ಏರ್‌ ಇಂಡಿಯಾ ವಿಮಾನದ ಮೂಲಕ ಜುಲೈ 19ರಂದು ಲಂಡನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೇವು. ನನ್ನ  ಸ್ಪೆಷಲ್‌ ವ್ಹೀಲ್‌ ಚೇರನ್ನು  ವಿಮಾನ ಸಿಬ್ಬಂದಿ ಇಲ್ಲಿಯೇ ಬಿಟ್ಟಿದ್ದರು.

ಹೀಗಾಗಿ, ವಿಮಾನ ಇಳಿದ ಕೂಡಲೇ ವ್ಹೀಲ್‌ ಚೇರ್‌ ನೀಡುವಂತೆ ಕೇಳಿದರೂ, ಸ್ಪಂದಿಸಲಿಲ್ಲ. ಪರಿಣಾಮ ಸ್ಪೆಷಲ್‌ ಚೇರ್‌ ಸಿಗದೇ, ಎರಡು ದಿನಗಳ ಕಾಲ ಲಂಡನ್‌ ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಯಿತು. ಇದರಿಂದ ಸ್ಕಾಟ್ಲೆಂಡ್‌ ಪ್ರವಾಸ ಮೊಟಕುಗೊಳಿಸಬೇಕಾಯಿತು. ಇದೇ ವೇಳೆ ನಾನು ಅನಾರೋಗ್ಯಕ್ಕೆ ತುತ್ತಾದೆ. ಇದಕ್ಕೆಲ್ಲ ವಿಮಾನ ನಿಲ್ದಾಣದ ಬೇಜವಾಬ್ದಾರಿತನವೇ ಕಾರಣ. ಹೀಗಾಗಿ ವಿಮಾನ ಸಂಸ್ಥೆಯಿಂದ ಪರಿಹಾರ ಕೊಡಿಸಬೇಕು ಎಂದು ಕೋರಿದ್ದಾರೆ. 

ಅಲ್ಲದೇ ವಿಮಾನ ಪ್ರಯಾಣಕ್ಕೆ ಟಿಕೆಟ್‌ ಬುಕ್‌ ಮಾಡಿಕೊಟ್ಟು, ಲಂಡನ್‌ಲ್ಲಿ ಸರಿಯಾದ ಹೋಟೆಲ್‌ ವ್ಯವಸ್ಥೆ ಕಲ್ಪಿಸದೆ ತೊಂದರೆ ನೀಡಿರುವ ಈಜಿ ಡ್ರೈವ್‌ ಟೂರ್ ಅಂಡ್‌ ಟ್ರಾವೆಲ್ಸ್‌ ಸಂಸ್ಥೆಯನ್ನೂ ಸಹ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಿದ್ದು, ಅವರಿಂದಲೂ ಪರಿಹಾರ ಕೊಡಿಸುವಂತೆ ಕೋರಲಾಗಿದೆ.

ಟಾಪ್ ನ್ಯೂಸ್

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.