ಪತಿ ಅನುಮಾನಕ್ಕೆ ಪತ್ನಿ ನೇಣಿಗೆ ಶರಣು
Team Udayavani, Nov 23, 2018, 11:30 AM IST
ಬೆಂಗಳೂರು: ಮೂರು ತಿಂಗಳ ಹಿಂದಷ್ಟೇ ಪ್ರೀತಿಸಿ ವಿವಾಹವಾಗಿದ್ದ ಜೋಡಿಯ ದಾಂಪತ್ಯ “ಅನುಮಾನ’ವೆಂಬ ಭೂತಕ್ಕೆ ಸಿಲುಕಿ ದುರಂತ ಅಂತ್ಯಗೊಂಡಿರುವ ಘಟನೆ ಬ್ಯಾಟರಾಯನಪುರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಗಂಡನ ಅನುಮಾನ ಕಿರುಕುಳಕ್ಕೆ ಬೇಸತ್ತು ರೋಜಾ (18) ನೇಣಿಗೆ ಶರಣಾಗಿದ್ದಾರೆ. ಮಗಳ ಸಾವಿಗೆ ಅಳಿಯನ ಕಿರುಕುಳವೇ ಕಾರಣ ಎಂದು ಆಕೆಯ ಪೋಷಕರು ನೀಡಿದ ದೂರಿನ ಮೇರೆಗೆ ರೋಜಾಳ ಗಂಡನನ್ನು ಬಾಬಾಜಾನ್ ಎಂಬಾತನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದ್ವೀತಿಯ ಪಿಯುಸಿ ವಿಧ್ಯಾಭ್ಯಾಸ ಮಾಡಿರುವ ಬಾಗೇಪಲ್ಲಿ ಮೂಲದ ರೋಜಾಳನ್ನು ಸ್ಥಳೀಯ ಯುವಕ ಬಾಬಾಜಾನ್ ಪ್ರೀತಿಸಿದ್ದು, ಕಳೆದ ಮೂರು ತಿಂಗಳ ಹಿಂದಷ್ಟೇ ವಿವಾಹ ಮಾಡಿಕೊಂಡು ಆಕೆಯನ್ನು ಬೆಂಗಳೂರಿಗೆ ಕರೆ ತಂದಿದ್ದ. ಬ್ಯಾಟರಾಯನಪುರದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಬಾಬಾಜಾನ್ ಸ್ವಿಗಿ ಕಂಪನಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ರೋಜಾ ಮನೆಯಲ್ಲಿಯೇ ಇರುತ್ತಿದ್ದಳು.
ಪರಸ್ಪರ ಅನುಮಾನ!: ವಿವಾಹವಾದ ಕೆಲದಿನಗಳ ಕಾಲ ಇಬ್ಬರೂ ಅನ್ಯೊನ್ಯವಾಗಿದ್ದರು. ಆದರೆ, ಬಾಬಾಜಾನ್‌ಗೆ ರೋಜಾಳ ಮೇಲೆ ಅನುಮಾನಿಸಲು ಶುರುಮಾಡಿದ, ಸರಿಯಾಗಿ ಮನೆಗೆ ಹೋಗುತ್ತಿರಲಿಲ್ಲ. ರೋಜಾ ಕೂಡ ಬಾಬಾಜಾನ್ ನನಗೆ ಮೋಸ ಮಾಡುತ್ತಿದ್ದಾನೆ ಎಂದು ನೊಂದುಕೊಂಡಿದ್ದಳು.ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಬುಧವಾರ ಬೆಳಗ್ಗೆ ರೋಜಾ ತನ್ನ ತಾಯಿಗೆ ದೂರವಾಣಿ ಕರೆ ಮಾಡಿ, ನಾನು ಇವನನ್ನು ನಂಬಿಕೊಂಡು ಬಂದಿದ್ದೆ. ಆದರೆ ಈತ ಮೋಸ ಮಾಡುತ್ತಿದ್ದಾನೆ ಎಂದು ನೋವು ತೋಡಿಕೊಂಡಿದ್ದಾಳೆ. ಸಂಜೆ ಬಾಬಾಜಾನ್ ಮನೆಗೆ ಬಂದ ಬಳಿಕ ಮತ್ತೆ ಜಗಳ ನಡೆದಿದೆ. ಆತನೇ ರಾತ್ರಿ ರೋಜಾ ತಾಯಿಗೆ ಕರೆಮಾಡಿ ನಿಮ್ಮ ಮಗಳು ಆಸ್ಪತ್ರೆಯಲ್ಲಿದ್ದಾಳೆ ಬೇಗ ಬನ್ನಿ ಎಂದು ಮಾಹಿತಿ ನೀಡಿದ್ದಾನೆ.
ಗಾಬರಿಯಿಂದ ಆಕೆಯ ತಾಯಿ ಹೇಮಾವತಿ ರಾತ್ರಿ 12 ಗಂಟೆ ಸುಮಾರಿಗೆ ಮಗಳ ಮನೆಗೆ ಬಂದು ನೋಡಿದಾಗ, ಮನೆಯ ಹಾಲ್‌ನಲ್ಲಿ ಕಬ್ಬಿಣದ ಸರಳಿಗೆ ಆಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಮಗಳನ್ನು ಪ್ರೀತಿಯ ನಾಟಕವಾಡಿ ಮೋಸದಿಂದ ಮದುವೆಯಾಗಿರುವ ಬಾಬಾಜಾನ್ ಆಕೆಗೆ ಮಾನಸಿಕ ಕಿರುಕುಳ ನೀಡಿದ್ದು, ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಮಗಳು ನನ್ನ ಬಳಿ ಹೇಳಿಕೊಂಡಿದ್ದಳು. ಬಾಬಾಜಾನ್‌ನೇ ಮಗಳನ್ನು ಕೊಲೆಮಾಡಿದ್ದಾನೆ ಎಂದು ಆರೋಪಿಸಿ ರೋಜಾ ತಾಯಿ ಹೇಮಾವತಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಕೂಲಿ ಮಾಡಿ ಮಗಳನ್ನು ಓದಿಸಿದ್ದೆ.. : ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮಗಳ ಭವಿಷ್ಯ ಚೆನ್ನಾಗಿರಲಿ ಎಂದು ಓದಿಸುತ್ತಿದ್ದೆ. ಆದರೆ, ಮಗಳ ತಲೆ ಕೆಡಿಸಿದ ಬಾಬಾಜಾನ್ ಆಕೆಯನ್ನು ಮೋಸದಿಂದ ಮದುವೆಯಾದ ಬಳಿಕ ನಮಗೆ ವಿಷಯ ಗೊತ್ತಾಯಿತು.
ಮಗಳು ಆತ ಹೊಡೆಯುತ್ತಾನೆ, ಕಷ್ಟ ಕೊಡುತ್ತಿದ್ದಾನೆ ಎಂದು ಹಲವು ಬಾರಿ ಹೇಳಿದ್ದಳು ಆಗಾಗ್ಗೆ ಹಣದ ಸಹಾಯವೂ ಮಾಡುತ್ತಿದ್ದರು. ಆದರೆ, ಆತ ಮಗಳನ್ನು ಕೊಲೆಮಾಡಿಬಿಟ್ಟಿದ್ದಾನೆ. ಮಗಳು ಮನೆಗೆ ವಾಪಾಸ್ ಬಂದು ಬಿಟ್ಟಿದ್ದರೆ ನಾನೇ ನೋಡಿಕೊಳ್ಳುತ್ತಿದ್ದೆ ಎಂದು ರೋಜಾಳ ತಾಯಿ ಹೇಮಾವತಿ ಕಣ್ಣೀರು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.