Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Team Udayavani, May 17, 2024, 12:28 PM IST

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

ಬೆಂಗಳೂರು: ಪದೇ ಪದೆ ತವರು ಮನೆಗೆ ಹೋಗುವುದು, ಸ್ನೇಹಿತರ ಜತೆ ಫೋನ್‌ನಲ್ಲಿ ಹೆಚ್ಚು ಮಾತನಾ ಡುತ್ತಿದ್ದಕ್ಕೆ ಬೇಸರಗೊಂಡ ಜಿಮ್‌ ತರಬೇತುದಾರನೊಬ್ಬ, ಪತ್ನಿಗೆ ವಿಡಿಯೋ ಕರೆ ಮಾಡಿ ನೇಣು ಬಿಗಿದುಕೊಳ್ಳುತ್ತೇನೆ ಎಂದು ಬೆದರಿಸಲು ಯತ್ನಿಸಿ ಕೊನೆಗೆ ಅದೇ ನೇಣು ಕುಣಿಕೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿ ರುವ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಅಮಿತ್‌ ಕುಮಾರ್‌ ಸಾಹು(28) ಮೃತ ದುರ್ದೈವಿ. ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿರುವ ಅಮಿತ್‌ ಕುಮಾರ್‌ ಸಾಹು, ದಾಸರಹಳ್ಳಿಯಲ್ಲಿರುವ ಜಿಮ್‌ವೊಂದರಲ್ಲಿ ತರಬೇತುದಾರನಾಗಿದ್ದ. ಒಂದು ವರ್ಷದ ಹಿಂದೆ ದಾಸರಹಳ್ಳಿ ನಿವಾಸಿ ಯುವತಿಯನ್ನು ಪ್ರೀತಿಸಿ, ಆಕೆಯ ಪೋಷಕರ ವಿರೋಧದ ನಡುವೆಯೇ ಮದುವೆಯಾಗಿದ್ದ. ದಂಪತಿ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಈ ಮಧ್ಯೆ ನರ್ಸಿಂಗ್‌ ಕೋರ್ಸ್‌ಗೆ ಸೇರಿದ್ದ ಪತ್ನಿ ತನಗೆ ಸಮಯ ನೀಡುತ್ತಿಲ್ಲ. ಸೇಹಿತರೊಂದಿಗೆ ಹೆಚ್ಚು ಮಾತನಾಡುತ್ತಿದ್ದಳು ಎಂದು ಪತಿ ಸಾಹು, ಆಕೆ ಜತೆ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಮೊದಲಿನಿಂದಲೂ ಬ್ಲ್ಯಾಕ್‌ವೆುàಲ್‌: ಪತಿಯ ವರ್ತನೆಯಿಂದ ಬೇಸತ್ತಿದ್ದ ಪತ್ನಿ ಸಮೀಪದಲ್ಲಿರುವ ತವರು ಮನೆಗೆ ಹೆಚ್ಚು ಹೋಗುತ್ತಿದ್ದಳು. ಅದರಿಂದ ತನ್ನೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಸಮಯ ಕೂಡ ಕೊಡುತ್ತಿರಲಿಲ್ಲ ಎಂದು ಕೋಪಗೊಂಡಿದ್ದ ಅಮಿತ್‌ ಕುಮಾರ್‌, ಪತ್ನಿ ತವರು ಮನೆಗೆ ಹೋದಾಗಲೆಲ್ಲ, ಆಕೆಗೆ ವಿಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬ್ಲ್ಯಾಕ್‌ವೆುàಲ್‌ ಮಾಡಿ, ಮನೆಗೆ ಕರೆಸಿಕೊಳ್ಳುತ್ತಿದ್ದ. ಬುಧವಾರ ಕೂಡ ತವರು ಮನೆಗೆ ಹೋಗಿದ್ದ ಪತ್ನಿಗೆ ನಾಲ್ಕೈದು ಬಾರಿ ಕರೆ ಮಾಡಿದ್ದಾನೆ. ಆದರೆ, ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ವಿಡಿಯೋ ಕಾಲ್‌ ಮಾಡಿ, ಕೂಡಲೇ ಮನೆಗೆ ಬಾರದಿದ್ದರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಹಗ್ಗವನ್ನು ಫ್ಯಾನ್‌ಗೆ ಹಾಕಿಕೊಂಡು ನೇಣು ಕುಣಿಕೆಗೆ ಕೊರಳು ಹಾಕಿಕೊಂಡು ಹೆದರಿಸಿದ್ದಾನೆ. ಅದರಿಂದ ಗಾಬರಿಗೊಂಡ ಪತ್ನಿ ಕೂಡಲೇ ಮನೆ ಬಳಿ ಬಂದಾಗ ಕೋಣೆಯೊಂದರ ಬಾಗಿಲನ್ನು ಒಳಭಾಗದಿಂದ ಅಮಿತ್‌ ಕುಮಾರ್‌ ಸಾಹು, ಲಾಕ್‌ ಮಾಡಿಕೊಂಡಿರುವುದು ಗೊತ್ತಾಗಿದೆ. ಎಷ್ಟೇ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸ್ಥಳೀಯರ ನೆರವು ಪಡೆದು ಬಾಗಿಲು ಒಡೆದು ನೋಡಿದಾಗ ಅಮಿತ್‌ ಕುಮಾರ್‌ ಸಾಹು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾಗಿ ಎಂದು ಪೊಲೀಸರು ಮಾಹಿತಿ ನೀಡಿದರು.

ಅಚಾನಕ್‌ ಆಗಿ ಸಾವು: ವಿಡಿಯೋ ಕಾಲ್‌ ಮಾಡಿ ಪತ್ನಿಗೆ ಹೆದರಿಸುವ ವೇಳೆ ಮೊಬೈಲ್‌ ಕೈ ಜಾರಿ ಬಿದ್ದಿದ್ದು, ಅದನ್ನು ಹಿಡಿಯಲು ಹೋದಾಗ ಅಚಾನಕ್‌ ಆಗಿ ನೇಣು ಕುಣಿಕೆಯಲ್ಲಿದ್ದ ಕೊರಳಿಗೆ ಉರುಳು ಬಿಗಿದುಕೊಂಡು ಅಮಿತ್‌ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಸದ್ಯ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮೃತರು ಮತ್ತು ಆತನ ಪತ್ನಿಯ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಈ ಘಟನೆ ಅಚಾತುರ್ಯ ಅಥವಾ ಅಚಾನಕ್‌ ಆಗಿ ಸಾವು ಸಂಭವಿಸಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಆತ ಮೊದಲೇ ರೂಮ್‌ ಬಾಗಿಲನ್ನು ಒಳಗಿನಿಂದ ಲಾಕ್‌ ಮಾಡಿಕೊಂಡಿದ್ದ. ಪ್ರಾಥಮಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಹೆಚ್ಚಿನ ತನಿಖೆ ಬಳಿಕ ನಿಖರ ಕಾರಣ ತಿಳಿಯಲಿದೆ. ಸೈದುಲು ಅದಾವತ್‌, ಉತ್ತರ ವಿಭಾಗದ ಡಿಸಿಪಿ

ಟಾಪ್ ನ್ಯೂಸ್

ಸಂತೋಷ್ ಲಾಡ್

Shiggavi Bypoll; ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ: ಸಂತೋಷ್ ಲಾಡ್

ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ ?: ಜೀವನದ ಪ್ರಯಾಣದಲ್ಲಿ ಎಲ್ಲವನ್ನು ಅನುಭವಿಸಬೇಕು

INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ

INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ

Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ

Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐಗೆ 2 ರೂ. ಲಕ್ಷ ದಂಡ

Bengaluru: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐಗೆ 2 ರೂ. ಲಕ್ಷ ದಂಡ

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

Dengue

Bengaluru: ಡೆಂಘೀ ತಡೆಗೆ ಮನೆ ಮನೆ ಸಮೀಕ್ಷೆ- ಮುಖ್ಯ ಆಯುಕ್ತ

Prajwal Revanna ಗೆ ಮತ್ತೆ ಜೈಲು… ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Prajwal Revanna ಗೆ ಜೈಲೇ ಗತಿ… ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Ramachandrapura-matha

Sri Raghaweshwara Swamiji: 29ಕ್ಕೆ ಭಾವರಾಮಾಯಣ ರಾಮಾವತರಣ ಕೃತಿ ಬಿಡುಗಡೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Bengaluru: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐಗೆ 2 ರೂ. ಲಕ್ಷ ದಂಡ

Bengaluru: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐಗೆ 2 ರೂ. ಲಕ್ಷ ದಂಡ

Ramnagar: ಇಯರ್‌ ಫೋನ್‌ ಹಾಕಿದ್ದ ಯುವಕನಿಗೆ ರೈಲು ಡಿಕ್ಕಿ; ಸಾವು

Ramnagar: ಇಯರ್‌ ಫೋನ್‌ ಹಾಕಿದ್ದ ಯುವಕನಿಗೆ ರೈಲು ಡಿಕ್ಕಿ; ಸಾವು

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

ಸಂತೋಷ್ ಲಾಡ್

Shiggavi Bypoll; ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ: ಸಂತೋಷ್ ಲಾಡ್

ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ ?: ಜೀವನದ ಪ್ರಯಾಣದಲ್ಲಿ ಎಲ್ಲವನ್ನು ಅನುಭವಿಸಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.