ಕರಗದ ವಿಧಿವಿಧಾನಕ್ಕೆ ಇಂದು ಚಾಲನೆ
Team Udayavani, Apr 11, 2019, 3:00 AM IST
ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಗುರುವಾರದಿಂದ (ಏ.11) ಆರಂಭವಾಗಲಿದ್ದು, ಏ.19ರಂದು ಮಧ್ಯಾರಾತ್ರಿ ಕರಗ ಶಕ್ತ್ಯೋತ್ಸವ ಜರುಗಲಿದೆ.
ನಗರದ ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮಹೋತ್ಸವದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಅದರಂತೆ ಗುರುವಾರ ರಥೋತ್ಸವ ಹಾಗೂ ಧ್ವಜಾರೋಹಣದ ಮೂಲಕ ಬೆಂಗಳೂರು ಕರಗ ಶಕ್ತ್ಯೋತ್ಸವದ ವಿಧಿವಿಧಾನಕ್ಕೆ ಚಾಲನೆ ದೊರೆಯಲಿದೆ.
ಗುರುವಾರದಿಂದ ಆರಂಭವಾಗುವ ಧಾರ್ಮಿಕ ವಿಧಿವಿಧಾನಗಳು ಏ.21ರವರೆಗೆ ಅಂದರೆ 11 ದಿನಗಳು ನಡೆಯಲಿದ್ದು, ಕರಗದ ಕೊನೆಯ ದಿನ ಹೆಂಗೆಳೆಯರು ತಮ್ಮ ಮನೆಗಳಿಂದ ಬಿಂದಿಗೆಯಲ್ಲಿ ತಂದ ಅರಿಶಿಣ ನೀರಿನಿಂದ ಓಕುಳಿ ಆಡುವ ಮೂಲಕ ವಸಂತೋತ್ಸವ ಆಚರಿಸಲಾಗುತ್ತದೆ. ಅದೇ ದಿನ ರಾತ್ರಿ ಧ್ವಜಾರೋಹಣ ಮಾಡುವ ಮೂಲಕ ಕರಗ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಈ ಬಾರಿಯೂ ಹಸಿ ಕರಗವನ್ನು ಅರ್ಚಕ ಎನ್.ಮನು ಹೊರಲಿದ್ದು, ಗುರುವಾರದಿಂದ ಧಾರ್ಮಿಕ ವಿಧಿವಿಧಾನಗಳಲ್ಲಿ ತಮ್ಮ ತೊಡಗಿಸಿಕೊಳ್ಳಲಿದ್ದಾರೆ. ಕಳೆದ ಬಾರಿಯೇ ಮನು ಅವರು ಕರಗ ಹೊರಲು ಎಲ್ಲ ವಿಧಿವಿಧಾನಗಳನ್ನು ನೆರವೇರಿಸಿದ್ದರಾದರೂ, ಕೊನೆಯ ಗಳಿಗೆಯಲ್ಲಿ ಭಯಗೊಂಡ ಕಾರಣದಿಂದ ಅವರ ಬದಲಿಗೆ ಅರ್ಚಕ ಜ್ಞಾನೇಂದ್ರ ಕರಗವನ್ನು ಹೊತ್ತಿದ್ದರು.
ಬಿಬಿಎಂಪಿಯಿಂದ ಅಗತ್ಯ ವ್ಯವಸ್ಥೆ: ಪಾಲಿಕೆಯ ವತಿಯಿಂದ ಕರಗ ಉತ್ಸವಕ್ಕೆ ಪ್ರತಿವರ್ಷದ ಈ ಬಾರಿಯೂ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ಉತ್ಸವಕ್ಕೆ 1 ಕೋಟಿ ರೂ. ಮೀಸಲಿಟ್ಟಿದ್ದರೆ, ಈ ಬಾರಿ ಬಜೆಟ್‌ನಲ್ಲಿ 50 ಲಕ್ಷ ರೂ. ಅನುದಾನ ನೀಡಿದೆ. ಇದರೊಂದಿಗೆ ಕರಗ ಸಾಗುವ ಮಾರ್ಗಗಳನ್ನು ಸುಂದರೀಕರಣಗೊಳಿಸುವುದು, ಭಕ್ತರ ಅನುಕೂಲಕ್ಕಾಗಿ ಇ-ಶೌಚಾಲಯ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಪಾಲಿಕೆಯಿಂದ ಮಾಡಿಕೊಡಲಾಗುತ್ತದೆ.
ಕರಗದ ಕಾರ್ಯಕ್ರಮಗಳ ಪಟ್ಟಿ
ಏ.11: ರಾತ್ರಿ 10 ಗಂಟೆಗೆ ದೇವರ ರಥೋತ್ಸವ, ಮುಂಜಾನೆ 4ಕ್ಕೆ ದ್ವಜಾರೋಹಣ ಮೂಲಕ ಕರಗಕ್ಕೆ ಚಾಲನೆ
ಏ.12: ಕರಗದ ಕುಂಟೆ, ಗಂಗೆಗೆ ವಿಶೇಷ ಪೂಜೆ
ಏ.13: ಸಂಪಂಗಿ ಕೆರೆಯ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ವಿಶೇಷ ಪೂಜೆ
ಏ.14: ಲಾಲ್‌ಬಾಗ್ ರಸ್ತೆಯಲ್ಲಿರುವ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಏ.15: ಗವಿಪುರ ಗುಟ್ಟಹಳ್ಳಿಯ ಜಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಏ.16: ದೀಪದ ಆರತಿ ಉತ್ಸವ ಮತ್ತು ಅಣ್ಣಮ್ಮ ದೇವಾಲಯದಲ್ಲಿ ವಿಶೇಷ ಪೂಜೆ
ಏ.17: ಹಸಿ ಕರಗ ಮತ್ತು ಕರಗದ ಕುಂಟೆಗೆ ವಿಶೇಷ ಪೂಜೆ
ಏ.18: ಪೊಂಗಲ್ ಸೇವೆ, ಪುರಾಣ ಕಥನ ಹಾಗೂ ಕಲಾಸಿಪಾಳ್ಯದ ಮರಿಸ್ವಾಮಿ ಮಠದಲ್ಲಿ ವಿಶೇಷ ಪೂಜೆ
ಏ.19: ಬೆಳಗ್ಗೆ 9ಕ್ಕೆ ಕಬ್ಬನ್‌ಪಾರ್ಕ್‌ನಲ್ಲಿರುವ ಕರಗದ ಕುಂಟೆಗೆ ವಿಶೇಷ ಪೂಜೆ, ರಾತ್ರಿ 12ಕ್ಕೆ ಶಕ್ತ್ಯೋತ್ಸವ
ಏ.20: ಗಾವು ಶಾಂತಿ ಮತ್ತು ಭಾರತ ಕಥಾ ಪ್ರವಚನ
ಏ.21: ಸಂಜೆ 4ಕ್ಕೆ ವಸಂತೋತ್ಸವ, ರಾತ್ರಿ 10ಕ್ಕೆ ದೇವತಾ ಉತ್ಸವ, ರಾತ್ರಿ 12ಕ್ಕೆ ಧ್ವಜಾವರೋಹಣದ ಬಳಿಕ ಕರಗಕ್ಕೆ ತೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.