ಐಟಿ ದಾಳಿ ಹಿಂದೆ ಕೇಂದ್ರದ ಕೈವಾಡ:ದಿನೇಶ್ ಗುಂಡೂರಾವ್
Team Udayavani, Aug 4, 2017, 11:38 AM IST
ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಬೆಂಗಳೂರು ನಗರ ಘಟಕ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದು ಎನ್ನುವುದು ಬಿಜೆಪಿ ಅಜೆಂಡಾ ಆಗಿದೆ. ದೇಶವನ್ನು ಕೇಸರಿಕರಣ ಮಾಡಲು ಸಂಘ ಪರಿವಾರದ ಸಿದ್ಧಾಂತವನ್ನು ದೇಶದ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ದೇಶದ ಐಕ್ಯತೆ ಮತ್ತು ಜಾತ್ಯತೀತತೆ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ ಎಂದು ಆರೋಪಿಸಿದರು. ದೇಶದಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವ ಯೋಜನೆಯನ್ನೂ ಕೇಂದ್ರ ಸರ್ಕಾರ ನೀಡಿಲ್ಲ. ನೋಟು ರದ್ದತಿ ಬಳಿಕ ಭ್ರಷ್ಟಾಚಾರ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ಬಿಜೆಪಿಯವರೇ ಬೇರೆ
ಪಕ್ಷಗಳ ಶಾಸಕರನ್ನು ಖರೀದಿ ಮಾಡುವ ಮೂಲಕ ದೊಡ್ಡ ಭ್ರಷ್ಟಾಚಾರಿಗಳಾಗಿದ್ದಾರೆ. ಪ್ರಧಾನಿ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ. ಅವರ ವಿರುದ್ಧ ಸುದ್ದಿ ಮಾಡುವ ಮಾಧ್ಯಮಗಳಿಗೆ ನೋಟಿಸ್ ನೀಡಲಾಗುತ್ತಿದೆ. ಇಡೀ ದೇಶವನ್ನು ಮೋದಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ . ಹೀಗಾಗಿ ಷಡ್ಯಂತ್ರ ರೂಪಿಸಲಾಗುತ್ತಿದೆ. ಹಿಂದೆಯೂ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆಸಿದಾಗ ಏನೂ ಸಿಕ್ಕಿ ರಲಿಲ್ಲ. ಆದರೂ ದೊಡ್ಡ ಸುದ್ದಿ ಮಾಡುವುದು ಜೆಪಿಯವರ ತಂತ್ರ ಎಂದರು.
ಮಾತಿನಿಂದ ಹೊಟ್ಟೆ ತುಂಬದು
ಇದೇ ವೇಳೆ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, “ಮನ್ ಕಿ ಬಾತ್ ನಿಂದ ಜನತೆಯ ಹೊಟ್ಟೆ ತುಂಬುವುದಿಲ್ಲ. ಇದನ್ನೇ ಹೇಳಿ ಕೊಂಡು ಮೂರು ವರ್ಷ ಕಳೆದಿದ್ದೀರಿ. ದಾಳಿ ಮಾಡುವ ಅಧಿಕಾರ ಐಟಿ ಅಧಿಕಾರಿಗಳಿಗಿದೆ. ಆದರೆ, ಡಿ.ಕೆ.ಶಿವಕುಮಾರ್ ಮೇಲಿನ ದಾಳಿ ರಾಜಕೀಯ ಪ್ರೇರಿತ. ರಾಷ್ಟ್ರೀಯ ಮಾಧ್ಯಮಗಳು ಮಾಧ್ಯಮ ಧರ್ಮವನ್ನು ಮರೆತಿವೆ. ನಮಗೆ ಜನರ ಬೆಂಬಲ ಇದೆ ಹೋರಾಟ ನಡೆಸುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Crime: ವಾಟರ್ ಹೀಟರ್‌ನಿಂದ ಸ್ನೇಹಿತನ ಕೊಲೆಗೈದವ ಸೆರೆ
State Govt: ಸರ್ಕಾರದ ಬಳಿಯೇ ಇದೆ ಪಂಚಾಯತ್ ಅಧಿಕಾರ!
Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ
Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್
Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.