ಕರ್ಲಾನ್ ಸ್ಲೀಪ್ ಸ್ಟೇಷನ್‌ಮ್ಯಾಟ್ರೆಸ್ ಮಾರುಕಟ್ಟೆಗೆ
Team Udayavani, Sep 6, 2018, 11:53 AM IST
ಬೆಂಗಳೂರು: ಭಾರತದ ಮುಂಚೂಣಿ ಮ್ಯಾಟ್ರೆಸ್, ಸೋಫಾ ಮತ್ತು ಪೀಠೊಪಕರಣಗಳ ತಯಾರಿಕಾ ಸಂಸ್ಥೆಯಾಗಿರುವ ಕರ್ಲಾನ್ ವತಿಯಿಂದ ನೂತನ ಹಾಗೂ ಉನ್ನತ ಶ್ರೇಣಿಯ, ಎಸ್‌ಟಿಆರ್ 8 ತಂತ್ರಜ್ಞಾನದಲ್ಲಿ ಸಿದ್ಧಪಡಿಸಿರುವ ಸ್ಲೀಪ್ ಸ್ಟೇಷನ್ ಹೆಸರಿನ ಮ್ಯಾಟ್ರೆಸ್ (ಹಾಸಿಗೆ) ನಗರದಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.
ಈ ವೇಳೆ ಕರ್ಲಾನ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುಧಾಕರ ಪೈ ಮಾತನಾಡಿ, ಜನರ ಆಧುನಿಕ ಜೀವನಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನದೊಂದಿಗೆ ಈ ನೂತನ ಹಾಸಿಗೆಯನ್ನು ಸಿದ್ಧಪಡಿಸಲಾಗಿದೆ. ಇದು ಹಿಂದಿನ ಹಾಸಿಗೆಗಳಿಗಿಂತ ಶೇ.40ರಷ್ಟು ಹಗುರವಾಗಿದೆ. ಯಾರು ಬೇಕಾದರೂ ಸುಲಭವಾಗಿ ಬಳಕೆ ಹಾಗೂ ನಿರ್ವಹಣೆ
ಮಾಡಬಹುದು ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ನಾವು ಆರಂಭಿಸಿದ ಕರ್ಲೋಪೀಡಿಕ್ ತಂತ್ರಜ್ಞಾನವು ಮಾರುಕಟ್ಟೆಯಲ್ಲಿ ಅಪಾರ ಯಶಸ್ಸು ಕಂಡಿದೆ. ಅಂತೆಯೇ ಉತ್ಪನ್ನದ ಮಾರಾಟ ದುಪ್ಪಟ್ಟಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹಾಸಿಗೆ ಹಾಗೂ ಗೃಹ ಪೀಠೊಪಕರಣಗಳಲ್ಲಿ 125ಕ್ಕೂ ಹೆಚ್ಚು ವೈವಿಧ್ಯತೆಯ ಉತ್ಪನ್ನಗಳನ್ನು ಆವಿಷ್ಕರಿಸಲು ಮುಂದಾಗಿದ್ದೇವೆ.
ಜತೆಗೆ ಪ್ರಸ್ತುತ ಇರುವ 430 ಕರ್ಲಾನ್ ಹೋಮ್ ಸ್ಟೋರ್‌ಗಳನ್ನು 1000ಕ್ಕೆ ಏರಿಸುವ ಹಾಗೂ 100 ಹೋಮ್ ಕಂಫರ್ಟ್ ಮಳಿಗೆಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಕರ್ಲಾನ್ ಸಂಸ್ಥೆಯ ಪ್ರಧಾನ ಮಾರುಕಟ್ಟೆ ಅಧಿಕಾರಿ ಆಶುತೋಶ್ ವೈದ್ಯ ಈ ಸಂದರ್ಭದಲ್ಲಿ ಮಾತನಾಡಿ, ಈ ಹಿಂದಿನ ಅಂಕಿ-ಸಂಖ್ಯೆಗಳಿಗೆ ಹೋಲಿಸಿದರೆ, ಪ್ರಸ್ತುತ ಹೆಚ್ಚಿನ ಸಂಖ್ಯೆಯ ಭಾರತೀಯರು ನಿದ್ರಾಹೀನತೆ ಮತ್ತು ನಿದ್ರೆಗೆ
ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆವೊಂದರಿಂದ ತಿಳಿದು ಬಂದಿದೆ. ಇದಕ್ಕೆ ಮುಖ್ಯ ಕಾರಣ ಒತ್ತಡದ ಹಾಗೂ ಬದಲಾಗುತ್ತಿರುವ ಜೀವನ ಶೈಲಿ. ಇಂತಹ ಸ್ಥಿತಿಗಳನ್ನು ಅಧ್ಯಯನ ಮಾಡಿಯೇ ಆಧುನಿಕ ತಂತ್ರಜ್ಞಾನವಾದ ಎಸ್‌ಟಿಆರ್ 8 ಬಳಸಿ ಅತ್ಯಂತ ಹಗುರವಾದ ಹಾಗೂ ದೃಢವಾದ, ಪುಟಿದೇಳುವಂತಹ ಹಾಸಿಗೆಯನ್ನು ಸಿದ್ಧಪಡಿಸಿದ್ದೇವೆ. ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿ ಸುಖಕರ ನಿದ್ದೆಗೆ ಜಾರುವಂತೆ ಮಾಡುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.