ಬೆಂಗಳೂರಿಗರ ನೆಮ್ಮದಿಗೆ ಭಂಗ ತಾರದ ಕರ್ನಾಟಕ ಬಂದ್
Team Udayavani, Jun 13, 2017, 12:45 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಬಂದ್‌ಗೆ ಕೆಲವೆಡೆ ನೀರಸ ಮತ್ತೆ ಕೆಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡ ಪರ ಸಂಘಟನೆಗಳಲ್ಲೇ ಒಡಕು ಇದ್ದ ಕಾರಣ ಕೆಲವು ಸಂಘಟನೆಗಳು ಬಂದ್ ಮಾಡುವಂತೆ ಒತ್ತಾಯಿಸಿ ಮೆರವಣಿಗೆ ನಡೆಸಿದರೆ ಮತ್ತೆ ಕೆಲವು ಸಂಘಟನೆಗಳು ಬಂದ್ ಬೇಡ ಎಂದು ಖುದ್ದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದವು. ಹೀಗಾಗಿ, ಬಂದ್ ಕುರಿತು ಗೊಂದಲ ನಿರ್ಮಾಣವಾಗಿತ್ತು.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಟೋ, ಮ್ಯಾಕ್ಸಿ ಕ್ಯಾಬ್, ಮೆಟ್ರೋ ಸಂಚಾರ ಬೆಳಗ್ಗೆಯಿಂದಲೇ ಸಂಚಾರ ಆರಂಭಿಸಿದ್ದವು. ಬಸ್ ಹಾಗೂ ಮೆಟ್ರೋ ಸೇರಿದಂತೆ ಸಂಚಾರ ಸುಗಮವಾಗಿದ್ದರಿಂದ ಬಂದ್ ಬಿಸಿ ಸಾರ್ವಜನಿಕರಿಗೆ ಅಷ್ಟಾಗಿ ತಟ್ಟಲಿಲ್ಲ. ಹೋಟೆಲ್ ಹಾಗೂ ವಾಣಿಜ್ಯಮಾಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರಿಂದ ಜನಜೀವನದ ಮೇಲೆ ಯಾವುದೇ ಪರಿಣಾಮವೂ ಬೀರಲಿಲ್ಲ.
ಸ್ವಯಂಪ್ರೇರಿತವಾಗಿ ಬೆಂಬಲ ಜೆಸಿ ರಸ್ತೆ, ಎಸ್‌ಪಿ ರಸ್ತೆ, ಚಿಕ್ಕಪೇಟೆ ಸೇರಿದಂತೆ ನಗರದ ಕೆಲವು ಭಾಗಗಳಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ಮಳಿಗೆಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಬೆಳಗಿನ ಪ್ರದರ್ಶನ ರದ್ದು ನಗರದ ಕೇಂದ್ರ ಭಾಗವಾದ ಗಾಂಧಿ ನಗರದಲ್ಲಿ ಸೋಮವಾರ ಬೆಳಗ್ಗೆ ಎಂದಿನಂತೆ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿದ್ದರೂ, ಮೆಜೆಸ್ಟಿಕ್ ಸುತ್ತಮುತ್ತಲಿನ ಭಾಗದ ಚಿತ್ರಮಂದಿರಗಳಲ್ಲಿ ಬಂದ್ ಹಿನ್ನೆಲೆಯಲ್ಲಿ ಮೊದಲ ಪ್ರದರ್ಶನವನ್ನು ರದ್ದುಪಡಿಸಲಾಗಿತ್ತು.
ಚಿತ್ರಮಂದಿರಗಳ ಮುಂಭಾಗದಲ್ಲಿ ಚಿತ್ರ ಪ್ರದರ್ಶನವಿಲ್ಲ ಎಂಬ ಫಲಕ ಹಾಕಿರುವುದು ಕಂಡು ಬಂತು. ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳು ಹಾಗೂ ಮಾಲ್‌ಗಳಿಗೆ ಬಂದ್ ಬಿಸಿ ತಟ್ಟಿರಲಿಲ್ಲ. ಮಲ್ಲೇಶ್ವರ, ಶೇಷಾದ್ರಿಪುರ, ವಿಜಯನಗರ, ರಾಜಾಜಿನಗರ, ಕೆ.ಆರ್.ಮಾರುಕಟ್ಟೆ, ಗಾಂಧಿನಗರ, ಜಯನಗರ ಸೇರಿದಂತೆ ಪ್ರಮುಖ ಭಾಗಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಸಾಮಾನ್ಯ ದಿನಗಳಂತೆ ಇದ್ದವು.
ಜತೆಗೆ ನಗರದಲ್ಲಿರುವ ಪ್ರಮುಖ ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ವಹಿವಾಟು ಸಾಮಾನ್ಯವಾಗಿತ್ತು. ಮಾಲ್‌ಗಳಲ್ಲಿ ಬೆಳಗ್ಗೆಯಿಂದಲೇ ಚಲನ ಚಿತ್ರ ಪ್ರದರ್ಶಿಸಲಾಯಿತು. ಬಂದ್‌ಗೆ ಪರೋಕ್ಷ ಬೆಂಬಲ ನಗರದಲ್ಲಿರುವ ಹೋಟೆಲ್‌ಗಳು ಹಾಗೂ ಪೆಟ್ರೋಲ್ ಬಂಕ್‌ಗಳು ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಪರೋಕ್ಷ ಬೆಂಬಲ ಸೂಚಿಸಿದ್ದರು. ಆದರೆ, ವಹಿವಾಟು ಸ್ಥಗಿತಗೊಳಿಸಿರಲಿಲ್ಲ.
ಭದ್ರತೆ ಒಂದೆಡೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ಮತ್ತೂಂದೆಡೆ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಆಯೋಜಿಸಲಾಗಿತ್ತು. ಟೌನ್‌ಹಾಲ್, ಮೇಖೀವೃತ್ತ, ಕಾರ್ಪೊರೇಷನ್ ವೃತ್ತ, ವಿಧಾನಸೌಧ ಸುತ್ತಮುತ್ತಲಿನ ಭಾಗಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.