ಉತ್ತರ ಕರ್ನಾಟಕದವರಲ್ಲಿ ಆತ್ಮವಿಶ್ವಾಸದ ಕೊರತೆ
Team Udayavani, Oct 30, 2017, 11:41 AM IST
ಬೆಂಗಳೂರು: ಉತ್ತರ ಕರ್ನಾಟಕದ ಜನರಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಇದೆ. ಆದರೆ ಆತ್ಮವಿಶ್ವಾಸದ ಕೊರತೆ ಅವರನ್ನು ಕಾಡುತ್ತಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ ಸಂಕೇಶ್ವರ್ ಹೇಳಿದರು. ನಗರದ ಕೆಎಲ್ಇ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉತ್ತರ ಕರ್ನಾಟಕ ಸ್ನೇಹ ಲೋಕ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಉತ್ತರ ಕರ್ನಾಟಕದ ಜನರಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಇದೆ.
ಆದರೆ, ಸ್ವಂತ ಶಕ್ತಿಯ ಬಗ್ಗೆ ಕೀಳರಿಮೆ ಅವರನ್ನು ಕಾಡುತ್ತಿದೆ. ಇದರಿಂದ ಸಮಾಜದಲ್ಲಿ ಮುಂದೆಬರಲು ಸಾಧ್ಯವಾಗುತ್ತಿಲ್ಲ. ನಾವು ಬೆಳೆಯುವುದರ ಜತೆಗೆ ನಮ್ಮವರನ್ನು ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. ಬ್ಯಾಡಗಿ ಮೆಣಸಿನ ಕಾಯಿ, ಮುಧೋಳ ನಾಯಿ ಸೇರಿದಂತೆ ಉತ್ತರ ಕರ್ನಾಟದಲ್ಲಿ ಅನೇಕ ವಿಶಿಷ್ಟ ಮತ್ತು ಕುತೂಹಲಕಾರಿ ಸಂಗತಿಗಳಿವೆ. ಆದರೆ, ನಿರೀಕ್ಷಿತ ಪ್ರಚಾರ ಸಿಗುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನರಕವಾಗಿದ್ದು, ಅಸ್ತಮೆಟಿಕ್ ನಗರವಾಗಿ ಪರಿವರ್ತನೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಿರ್ಮಾಪಕ ಬಸಂತಕುಮಾರ ಪಾಟೀಲ, ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ಅಧ್ಯಕ್ಷ ಗಂಗಾಧರ ವಾಲಿ, ಕಾರ್ಯದರ್ಶಿ ಅರುಣ ಯಾದವಾಡ, ಖಜಾಂಚಿ ಗುರುರಾಜ ಕುಲಕರ್ಣಿ, ಕೆ.ಎಚ್. ವೀಣಾ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.