ಬಿಜೆಪಿ ಸೋಲಿಸುವುದೇ ಲೋಕಸಭೆ ಚುನಾವಣೆ ಪ್ರಮುಖ ವಿಷಯ

Team Udayavani, Jan 30, 2019, 6:49 AM IST

bjp-solisuvude.jpg

ಬೆಂಗಳೂರು: ಕೋಮುವಾದಿ ಪಕ್ಷ ಬಿಜೆಪಿ ಸೋಲಿಸುವುದು ಮಂದಿನ ಲೋಕಸಭೆ ಚುನಾವಣೆಯ ಪ್ರಮುಖ ವಿಷಯ ಎಂದು ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ ತಿಳಿಸಿದ್ದಾರೆ. ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಬಿಜೆಪಿ ಎದುರಿಸಲು ಸಜ್ಜಾಗಿವೆ ಎಂದು ಹೇಳಿದರು. ಕರ್ನಾಟಕ, ಕೇರಳ, ಪಂಜಾಬ್‌, ಉ.ಪ್ರದೇಶ, ಅರುಣಾಚಲ ಪ್ರದೇಶ ಸೇರಿ ಕಾಂಗ್ರೆಸ್‌ ಹಾಗೂ ಶಕ್ತಿ ಇರುವ ಇತರೆ ಪ್ರಾದೇಶಿಕ ಜಾತ್ಯತೀತ ಪಕ್ಷಗಳ ಜತೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಳ್ಳಲಿದೆ. ಕನಿಷ್ಠ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹೊರರಾಜ್ಯಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದರು.

ಕರ್ನಾಟಕದಲ್ಲಿ ಸಾಲ ಮನ್ನಾ ಮಾಡದಂತೆ ರಾಷ್ಟ್ರೀಕೃತ ಬ್ಯಾಂಕುಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ತರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಸಾಲ ಮನ್ನಾ ಮಾಡುವ ಕ್ರಾಂತಿಕಾರಕ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು. ರಾಜ್ಯದಲ್ಲಿ ಈಗಾಗಲೇ ಸಚಿವ ಸ್ಥಾನ, ನಿಗಮ-ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಮೂರನೇ ಒಂದು ಭಾಗ ಫಾರ್ಮುಲಾದಡಿ ಹಂಚಿಕೆ ಮಾಡಿಕೊಂಡಿದ್ದೇವೆ.

ಇದೇ ಮಾನದಂಡದಡಿ ಲೋಕಸಭೆ ಚುನಾವಣೆಯಲ್ಲೂ ಕ್ಷೇತ್ರ ಹಂಚಿಕೆ ಮಾಡಿಕೊಳ್ಳಲಿದ್ದೇವೆ ಎಂದು ತಿಳಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ಶಾಸಕರ ಹೇಳಿಕೆ ವಿಚಾರ ಕಾಂಗ್ರೆಸ್‌ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ. ಸಮ್ಮಿಶ್ರ ಸರ್ಕಾರ ಉತ್ತಮ ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತಿದೆ. ಐದು ವರ್ಷ ಮುಂದುವರಿಯಲಿದೆ ಎಂದು ಹೇಳಿದರು.

ರಾಜಕೀಯ ನಿರ್ಣಯ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆ ಫ‌ಲಿತಾಂಶ ಎನ್‌ಡಿಎ ಸರ್ಕಾರದ ವಿರುದ್ಧವಾಗಿದ್ದು ನರೇಂದ್ರ ಮೋದಿ ಸರ್ಕಾರದ ರೈತ ವಿರೋಧಿ ಆಡಳಿತ, ನೋಟ್ ಬ್ಯಾನ್‌, ಜಿಎಸ್‌ಟಿ ಸೇರಿದಂತೆ ಸಾಕಷ್ಟು ಜನ ವಿರೋಧಿ ನೀತಿಗಳು ಮುಂಬರುವ ಲೋಕಸಭೆ ಚುನಾವಣೆಯ ಪ್ರಮುಖ ವಿಚಾರಗಳಾಗಲಿವೆ. ಎನ್‌ಡಿಎ ಸರ್ಕಾರ ಬದಲಾಯಿಸುವ ಐತಿಹಾಸಿಕ ಅವಕಾಶ ದೇಶದ ಮತದಾರರ ಮೇಲಿದ್ದು ಜೆಡಿಎಸ್‌ ಕಾರ್ಯಕಾರಿಣಿ ಸಭೆಯು ಜಾತ್ಯತೀತ ಮತ್ತು ಪ್ರಾದೇಶಿಕ ಪಕ್ಷಗಳ ಜತೆಗೂಡಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಹೋರಾಟ ಮಾಡಲಿದೆ.

ಕಾರ್ಯತಂತ್ರ ಚರ್ಚೆ: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಜೆಡಿಎಸ್‌ ಅಧ್ಯಕ್ಷರು ಪಾಲ್ಗೊಂಡಿದ್ದರು. ಲೋಕಸಭೆ ಚುನಾವಣೆ ಎದುರಿಸಲು ಅನುರಿಸಬೇಕಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು

ಟಾಪ್ ನ್ಯೂಸ್

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Bengaluru: ಸಾಲ ವಾಪಸ್‌ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ

Bengaluru: ಸಾಲ ವಾಪಸ್‌ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.