ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯ


Team Udayavani, Nov 8, 2017, 11:35 AM IST

Lorry-Protest2.jpg

ಬೆಂಗಳೂರು: ಎಲ್ಲ ಪ್ರಕಾರದ ವಾಣಿಜ್ಯ ವಾಹನಗಳಿಗೆ ಸ್ಪೀಡ್‌ ಗವರ್ನರ್‌ (ವೇಗ ನಿಯಂತ್ರಕ) ಅಳವಡಿಕೆ ಕಡ್ಡಾಯ ಆದೇಶ ಹಿಂಪಡೆಯಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ಇಲಾಖೆಯಿಂದ ಪೂರಕ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲಿಕರು ಮತ್ತು ಏಜೆಂಟರು, ಟ್ಯಾಕ್ಸಿ ಮಾಲಿಕರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ನಿರ್ಧಾರ ಕೈಬಿಟ್ಟರು.  

ಸ್ಪೀಡ್‌ ಗವರ್ನರ್‌ ಅಳವಡಿಕೆಯಿಂದ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳಿಗೆ ವಿನಾಯ್ತಿ ನೀಡುವ ಬಗ್ಗೆ ಸರ್ಕಾರದ ಅವಗಾಹನೆಗೆ ತರಲಾಗುವುದು. ಅಲ್ಲದೆ, ವಿವಿಧ ಸಾರಿಗೆ ಶುಲ್ಕ ಇಳಿಕೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗುವುದು ಎಂದು ಸಾರಿಗೆ ಆಯುಕ್ತ ಬಿ. ದಯಾನಂದ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಲಾರಿ ಮತ್ತು ಟ್ಯಾಕ್ಸಿ ಮಾಲಿಕರು ಅನಿರ್ದಿಷ್ಟಾವಧಿ ನಿರ್ಧಾರದಿಂದ ಹಿಂದೆಸರಿದರು. ಸಂಧಾನ ಸಭೆ ಸಫ‌ಲವಾದ ಹಿನ್ನೆಲೆಯಲ್ಲಿ ಲಾರಿ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಮಾಲಿಕರು, ಚಾಲಕರು ಸಂಭ್ರಮಿಸಿದರು. 

ಸ್ಪೀಡ್‌ ಗವರ್ನರ್‌ ಇಲ್ದಿದ್ರೂ ಎಫ್ಸಿ?: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟ್‌ಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ, ಸ್ಪೀಡ್‌ ಗವರ್ನರ್‌ ಅಳವಡಿಕೆ ಕಡ್ಡಾಯದಿಂದ ಎಂ-1 ಕೆಟಗರಿ ವಾಹನಗಳಿಗೆ ವಿನಾಯ್ತಿ ಸೇರಿದಂತೆ ಹೆದ್ದಾರಿಗಳಲ್ಲಿ ಆರ್‌ಟಿಒ ಅಧಿಕಾರಿಗಳ ಕಿರುಕುಳ, ಆರ್‌ಟಿಒ ಶುಲ್ಕ ಇಳಿಕೆ,

ಅಂತರ್‌ ರಾಜ್ಯದ ಶುಲ್ಕ ಇಳಿಕೆ ಸಂಬಂಧ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ, ಬುಧವಾರದಿಂದ ಆರ್‌ಟಿಒ ಕಚೇರಿಗಳಲ್ಲಿ ಸ್ಪೀಡ್‌ ಗವರ್ನರ್‌ ಇಲ್ಲದಿದ್ದರೂ ವಾಹನಗಳಿಗೆ ಅರ್ಹತಾ ಪ್ರಮಾಣಪತ್ರ (ಎಫ್ಸಿ) ನೀಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ  ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. 

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಮಾಲಿಕರು, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳಿಗೆ ಸ್ಪೀಡ್‌ಗವರ್ನರ್‌ ಅಳವಡಿಕೆ ಅವೈಜ್ಞಾನಿಕ. ಹೀಗಾಗಿ “ಎಂ-1′ ಕೆಟಗರಿ ವಾಹನಗಳಿಗೆ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು. ಆಗ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. 

ಸಂಧಾನ ಸಭೆಗೂ ಮುನ್ನ ಸ್ಪೀಡ್‌ ಗವರ್ನರ್‌ ಕಡ್ಡಾಯ, ವಿವಿಧ ಸಾರಿಗೆ ಸೇವೆಗಳ ಶುಲ್ಕ ಹೆಚ್ಚಳ, ಸ್ಪೀಡ್‌ ಗವರ್ನರ್‌ ದರ ಮತ್ತಿತರ ಸಾರಿಗೆ ನಿಯಮಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ಲಾರಿ ಮಾಲಿಕರು ಮತ್ತು ಏಜೆಂಟರುಗಳ ನೇತೃತ್ವದಲ್ಲಿ ಶಾಂತಿನಗರದ ಸಾರಿಗೆ ಇಲಾಖೆ ಕಚೇರಿ ಎದುರು ಲಾರಿ ಮಾಲಿಕರು, ಟ್ಯಾಕ್ಸಿ ಮಾಲಿಕರು ಪ್ರತಿಭಟನೆ ನಡೆಸಿ, ಕಚೇರಿ ಮುತ್ತಿಗೆಗೆ ನಿರ್ಧರಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸಂಘಟನೆಗಳ ಬೇಡಿಕೆಗಳು ಹಾಗೂ ವಾಹನ ತಯಾರಿಕಾ ಕಂಪನಿಗಳು ನೀಡಿರುವ ಪತ್ರ ಎರಡನ್ನೂ ರಾಜ್ಯ ಸರ್ಕಾರಕ್ಕೆ ರವಾನಿಸಲಾಗುವುದು. ಬಳಿಕ ರಾಜ್ಯ ಸರ್ಕಾರ ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
-ಬಿ.ದಯಾನಂದ, ಆಯುಕ್ತ, ಸಾರಿಗೆ ಇಲಾಖೆ

ಟಾಪ್ ನ್ಯೂಸ್

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Kasaragod: ಯುವತಿ ನಾಪತ್ತೆ; ದೂರು ದಾಖಲು

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.