ಚಿಕ್ಕಪೇಟೆ ಕ್ಷೇತ್ರದಲ್ಲಿ ಅತಿ ಕಡಿಮೆ ಕೊರೊನಾ ಪ್ರಕರಣ
Team Udayavani, Jun 2, 2021, 3:18 PM IST
ಬೆಂಗಳೂರು: ನಗರದ ಮಧ್ಯಭಾಗದಲ್ಲಿರುವಚಿಕ್ಕಪೇಟೆ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆತೆಗೆದುಕೊಂಡ ಕ್ರಮಗಳು, ಬೆಡ್ ವ್ಯವಸ್ಥೆ, ಲಸಿಕೆಹಾಕಿಸುವುದು ಹಾಗೂ ಬಡವರಿಗೆ ಫುಡ್‌ಕಿಟ್‌ವಿತರಣೆ ಸೇರಿದಂತೆ ಲಾಕ್ ಡೌನ್ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಕ್ಷೇತ್ರದ ಶಾಸಕಉದಯಗರುಡಾಚಾರ್ ಉದಯವಾಣಿಯೊಂದಿಗೆಮಾತನಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಚಿಕ್ಕಪೇಟೆ ಕ್ಷೇತ್ರದಲ್ಲಿಏನುಕ್ರಮಕೈಗೊಂಡಿದ್ದೀರಾ?ನಮ್ಮಲ್ಲಿ ಹಲವಾರು ಕೊವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನುಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿಆಕ್ಸಿಜನ್ ಬೆಡ್ ಹಾಕಿಸಿದ್ದೇವೆ. ವಾಸವಿಸಂಸ್ಥೆಯನ್ನು ಟ್ರಯಾಜ್ ಕೇಂದ್ರವನ್ನಾಗಿಮಾಡಿದ್ದೇವೆ.
ಎಲ್ಲ ಕಡೆಗಳಲ್ಲೂ ನಮ್ಮವೈದ್ಯರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಕೆಲವು ದಾನಿಗಳಿಂದ ಆ್ಯಂಬುಲೆನ್ಸ್‌ಸೇವೆ ಪಡೆದುಕೊಂಡು ಕೊರೊನಾಸೋಂಕಿತರು ಆಸ್ಪತ್ರೆಗೆ ತಲುಪಲು ತೊಂದರೆ ಆಗದಂತೆನೋಡಿಕೊಳ್ಳುತ್ತಿದ್ದೇವೆ.
ಆಕ್ಸಿಜನ್ ಬೆಡ್ ಸಮಸ್ಯೆ ಇಲ್ವಾ ನಿಮ್ಮಲ್ಲಿ?
ನಮ್ಮ ಕ್ಷೇತ್ರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ ಅತಿಕಡಿಮೆ ಪ್ರಕರಣಗಳು ದಾಖಲಾಗಿವೆ. ನಮ್ಮಕ್ಷೇತ್ರದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿಲ್ಲ.ಆರಂಭದಲ್ಲಿ ಸ್ವಲ್ಪ ಕಂಡು ಬಂದಿತು. ಈಗಯಾವುದೇ ಸಮಸ್ಯೆ ಇಲ್ಲ. ಇನ್ನೂಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಆಕ್ಸಿಜನ್‌ಬೆಡ್‌ಗಳುಲಭ್ಯವಿದೆ.ಕ್ಷೇತ್ರದಪೇಟೆಗಳಲ್ಲಿವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಕ್ಷೇತ್ರದಲ್ಲಿ ಎಲ್ಲಿವರೆಗೂ ಲಸಿಕೆ ಹಾಕಿಸಲುಏನುಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ?
ನಮ್ಮ ಕ್ಷೇತ್ರದಲ್ಲಿಸಾಮೂಹಿಕವಾಗಿಲಸಿಕೆಹಾಕಿಸುವಕೆಲಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆನೀಡಿದ್ದಾರೆ. ಮೆಟ್ರೊ ಕಾರ್ಮಿಕರಿಗೆ ಲಸಿಕೆ ಕಾರ್ಯಕ್ರಮ ಹಾಕಿಕೊಂಡಿದ್ದೆವು. ಖಾಸಗಿ ಸಂಸ್ಥೆಯ ಸಹಕಾರದೊಂದಿಗೆ ಅವರ ಸಿಎಸ್‌ಆರ್ ಫಂಡ್ ನಿಂದ ಉಚಿತಲಸಿಕೆ ಹಾಕಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಿಮ್ಮ ಕ್ಷೇತ್ರದ ಜನತೆಗೆ ಬೇಕಾದಷ್ಟು ಲಸಿಕೆಸಿಗುತ್ತಿದೆಯಾ?
ನಮಗೆ ಬೇಕಾದಷ್ಟು ಲಸಿಕೆ ಇನ್ನೂ ಸಿಗುತ್ತಿಲ್ಲ.2.60 ಲಕ್ಷ ಜನ ಇದ್ದಾರೆ. ಪ್ರತಿ ದಿನ ಏಳು ವಾರ್ಡ್ ಗೆ800 ಡೋಸ್ ಲಸಿಕೆ ಕೊಡುತ್ತಾರೆ. ಅದರಿಂದ ಲಸಿಕೆಸಮಸ್ಯೆಯಾಗುತ್ತಿದೆ. ಹೆಚ್ಚಿನ ಲಸಿಕೆ ನೀಡುವಂತೆಬಿಬಿಎಂಪಿ ಅಧಿಕಾರಿಗಳಿಗೆಕೇಳಿದ್ದೇನೆ.
ನಿಮ್ಮಕ್ಷೇತ್ರದ ಬಡವರಿಗೆಯಾವ ರೀತಿಸಹಾಯ ಸಿಗುತ್ತಿದೆ?
ನಮ್ಮಕ್ಷೇತ್ರದಲ್ಲಿ ಸುಮಾರು46 ಸ್ಲಂಗಳಿವೆ. ಎಲ್ಲರಿಗೂಉಚಿತ ಆಹಾರಕಿಟ್‌ನೀಡಲು ತೀರ್ಮಾನಿಸಲಾಗಿದೆ. ನಾನೂವಯಕ್ತಿಕವಾಗಿ ಎಲ್ಲಬಡವರಿಗೂ ಆಹಾರದಕಿಟ್ ವಿತರಣೆ ಮಾಡಲುಸಿದ್ಧತೆ ಮಾಡಿಕೊಂಡಿದ್ದೇವೆ
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.