ರಾಜಧಾನಿಯಲ್ಲೀಗ ಮಾವಿನ ಘಮಲು
Team Udayavani, Apr 17, 2019, 3:00 AM IST
ಬೆಂಗಳೂರು: ಮುಂಗಾರು ಪೂರ್ವದಲ್ಲಿಯೇ ಉದ್ಯಾನ ನಗರಿಗೆ ಹಣ್ಣುಗಳ ರಾಜನ ಪ್ರವೇಶವಾಗಿದ್ದು, ಪ್ರಮುಖ ಮಾರುಕಟ್ಟೆ, ರಸ್ತೆಗಳಲ್ಲಿ ಈಗಾಲೇ ಮಾವಿನ ಘಮಲು ಶುರುವಾಗಿದೆ.
ನಗರದ ಪ್ರಮುಖ ಮಾರುಕಟ್ಟೆ, ಹಣ್ಣಿನ ಮಳಿಗೆಗಳು, ಸೂಪರ್ ಮಾರ್ಕೆಟ್, ಬಜಾರ್‌ಗಳಿಂದ ಹಿಡಿದು ಹಾಪ್‌ಕಾಮ್ಸ್, ತಳ್ಳುಗಾಡಿಗಳು, ಬೀದಿಬದಿ ವ್ಯಾಪಾರ ಮಳಿಗೆಗಳಲ್ಲಿ ಮಾವಿನ ಹಣ್ಣಿನ ರಾಶಿ ಕಾಣುತ್ತಿದ್ದು, ಇಲ್ಲಿನ ಸ್ವಾದಿಷ್ಟ ಮಾವಿನ ಹಣ್ಣುಗಳಿಗೆ ಜನ ಮಾರುಹೋಗಿದ್ದಾರೆ. ಇನ್ನು ಮುಂದಿನ ಮೂರ್‍ನಾಲ್ಕು ತಿಂಗಳ ಕಾಲ ನಗರದಲ್ಲಿ ಮಾವಿನ ಪಾರುಪತ್ಯ ಮುಂದುವರಿಯಲಿದೆ.
ಈ ಬಾರಿ ಪ್ರಮುಖ ತಳಿಗಳಾದ ಬಾದಾಮಿ, ಮಲ್ಗೊವಾ, ಮಲ್ಲಿಕಾ, ರಸಪೂರಿ, ಹಿಮಾಯತ್, ಸಿಂಧೂರ, ತೋತಾಪುರಿ, ದಶೇರಿ, ಕಾಲಾಪಹಾಡ್, ಕುದಾದಾಸ್, ಬೈಗಾನ್‌ಪಲ್ಲಿ ಸೇರಿದಂತೆ 10ಕ್ಕೂ ಹೆಚ್ಚಿನ ತಳಿಗಳು ಮಾರುಕಟ್ಟೆಗೆ ಬಂದಿವೆ. ಈ ತಳಿಯ ಪೈಕಿ ಬಾದಾಮಿ ಹಾಗೂ ಮಲ್ಗೊàವಾ ಹಣ್ಣಿಗೆ ಬೇಡಿಕೆ ಹೆಚ್ಚಿದೆ.
ಸದ್ಯ ಈಗ ಆಂಧ್ರ ಭಾಗದ ಮಾವು ಬೆಂಗಳೂರಿಗೆ ಪೂರೈಕೆ ಯಾಗುತ್ತಿದ್ದು, ಈ ತಿಂಗಳ ಅಂತ್ಯಕ್ಕೆ ಕೋಲಾರ, ಶ್ರೀನಿವಾಸಪುರ, ರಾಮನಗರ ಭಾಗದ ಹಣ್ಣು ಮಾರುಕಟ್ಟೆಗೆ ಬಲಿರಲಿದೆ. ಮುಂದಿನ ತಿಂಗಳು ಹಾವೇರಿ, ಧಾರವಾಡ, ಕೊಪ್ಪಳ ಮತ್ತಿತರ ಭಾಗಗಳ ಮಾವು ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಪ್ರತಿ ವರ್ಷದಂತೆ ಈ ವರ್ಷವೂ ಜಯಮಹಲ್ ರಸ್ತೆಯ ಫನ್‌ವರ್ಲ್ಡ್ ಮುಂಭಾಗದ ಖಾಲಿ ಜಾಗದಲ್ಲಿ ತಮಿಳುನಾಡಿನ ಸೇಲಂ, ತಿರಕೋಯಿಲೂರು, ಕಾಟಾ³ಡಿ, ಧರ್ಮಪುರಿ ಮೂಲದ ವಲಸಿಗ ವ್ಯಾಪಾರಿಗಳು ಮಾವಿನಹಣ್ಣಿನ ಅಂಗಡಿಗಳನ್ನು ಹಾಕುತ್ತಿದ್ದು, ಸದ್ಯ ಇಪ್ಪತ್ತಕ್ಕೂ ಹೆಚ್ಚು ಮಳಿಗೆಗಳು ಈ ಭಾಗದಲ್ಲಿವೆ.
ಈ ಬಾರಿ ಹೆಚ್ಚು ಇಳುವರಿ: ರಾಜ್ಯದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ತಾಪಮಾನ ಹೆಚ್ಚಿರುವುದರಿಂದ ಹಾಗೂ ಹವಾಮಾನ ವೈಪರಿತ್ಯ ಕಡಿಮೆ ಇರುವುದರಿಂದ ಮಾವುವಿನ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, 10 ಲಕ್ಷ ಟನ್ ಮಾವು ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿದೆ. ಜತೆಗೆ ಇಲ್ಲಿಯವರೆಗೆ ಮಳೆ ಬೀಳದ ಕಾರಣ ಮುಂದೆ ಮೂರು ಹಂತದಲ್ಲಿ ಮಾವು ಕೊಯ್ಲಿಗೆ ಬರಲಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಮಾವು ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಮಾವು ಮೇಳಕ್ಕೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಮಾವು ಮೇಳದ ಕುರಿತು ಯಾವುದೇ ಸಭೆಗಳು ಈವರೆಗೆ ನಡೆದಿಲ್ಲ. ಜತೆಗೆ ರಾಜ್ಯದ ಎಲ್ಲಾ ಭಾಗದ ಮಾವು ಮಾರುಕಟ್ಟೆಗೆ ಬಂದ ನಂತರವೇ ಅಂದರೆ ಮೇ ಕೊನೆಯ ವಾರದ ನಂತರವೇ ಈ ಬಾರಿ ಮೇಳ ಆಯೋಜನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ದರ ಪಟ್ಟಿ (ಕೆ.ಜಿ.ಗೆ): ಆಲ್ಫನ್ಸ್ – 65, ಅಮರ್‌ಪಾಲಿ – 80, ಬೈಗನ್‌ಪಾಲಿ – 99, ಮಲ್ಗೊವಾ- 150, ರಸಪೂರಿ-80 ರೂ. ಮಲ್ಲಿಕಾ- 109 ರೂ. ನೀಲಂ- 52, ರಸಪೂರಿ- 96, ಸೆಂಧೂರ- 42 ರೂ. ಕಾಲಾಪಹಡ್-100 ರೂ. ದಶೇರಿ -150ರೂ. ತೊತಾಪುರಿ-40 ರೂ.
ಈ ವರ್ಷ ಸರಿಯಾದ ಸಮಯಕ್ಕೆ ಮಾವಿನ ಮರಗಳು ಹೂ ಬಿಟ್ಟಿದ್ದು, ಕಳೆದ ಬಾರಿಗಿಂತ ಶೇ.20ರಷ್ಟು ಉತ್ತಮ ಇಳುವರಿಯಾಗಲಿದೆ. ಕಳೆದ ವರ್ಷ ಮಳೆ ಕೈಕೊಟ್ಟ ಪರಿಣಾಮ ಕಾಯಿಗಳ ಗಾತ್ರದಲ್ಲಿ ವ್ಯತ್ಯಾಸವಾಗಬಹುದು. ಪ್ರತಿ ಬಾರಿಯಂತೆ ಹಾಪ್‌ಕಾಮ್ಸ್‌ನಲ್ಲಿ ಮಾರುಕಟ್ಟೆಗಿಂತ ಶೇ.20 ರಷ್ಟು ಕಡಿಮೆ ಬೆಲೆಯಲ್ಲಿ ಹಣ್ಣು ಸಿಗಲಿವೆ.
-ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರು, ಹಾಪ್‌ಕಾಮ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.