ಮೊದಲ ದಿನಕ್ಕೇ ಮಾವು ಮೇಳ ಮೊಟಕು
Team Udayavani, May 30, 2017, 12:37 PM IST
ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ರಾಜ್ಯ ಮಾವು ಅಭಿವೃದ್ಧಿ ನಿಗಮ ಆಯೋಜಿಸಿದ್ದ ಮಾವು ಮೇಳಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಮೇಳ ಮುಕ್ತಾಯಗೊಂಡಿದೆ.
ಸೋಮವಾರ ಬೆಳಗ್ಗೆ ಮೇಯರ್ ಜಿ.ಪದ್ಮಾವತಿ ಅವರು ಮಾವಿನ ಹಣ್ಣು ಕತ್ತರಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಿದ್ದರು. ಆದರೆ, ಪಾಲಿಕೆ ಸಾಮಾನ್ಯ ಸಭೆ ಇದ್ದ ಕಾರಣ ಮೊದಲ ದಿನ ಮಾವು ಮೇಳದಲ್ಲಿ ನಿರೀಕ್ಷಿತ ಮಟ್ಟದ ವಹಿವಾಟು ನಡೆಯಲಿಲ್ಲ. ಇದರಿಂದ ರೈತರು ಬೇಸರ ವ್ಯಕ್ತಪಡಿಸಿದರು.
ಅಲ್ಲದೇ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಿಂದ ಮೇಳವನ್ನು ಸ್ಥಳಾಂತರಿಸಿ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಆವರಣಕ್ಕೆ ಸ್ಥಳಾಂತರಿಸಲು ರೈತರು ನಿಗಮಕ್ಕೆ ಮನವಿ ಮಾಡಿದ್ದರು. ರಾಜ್ಯ ಮಾವು ಅಭಿವೃದ್ಧಿ ನಿಗಮವು ಬಿಬಿಎಂಪಿ ಆವರಣದಲ್ಲಿ ನಾಲ್ಕು ದಿನ ಮೇಳ ನಡೆಸಲು ತೀರ್ಮಾನಿಸಿ, ಐವರು ರೈತರಿಗೆ ಈ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ನಾಲ್ಕು ದಿನದಲ್ಲಿ ಅಂದಾಜು 5ಟನ್ ಮಾವು ಮಾರಾಟ ಆಗುವ ನಿರೀಕ್ಷೆ ಹೊಂದಲಾಗಿತ್ತು.
ಆದರೆ, ರೈತರು ಪಾಲಿಕೆ ಆವರಣದಲ್ಲಿ ಉತ್ತಮ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ವ್ಯವಹಾರ ನಡೆಸಲು ಮನಸು ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಆವರಣದಲ್ಲಿ ಐದು ಮಳಿಗೆಗಳನ್ನು ತೆರೆಯಲು ರಾಜ್ಯ ಮಾವು ಅಭಿವೃದ್ಧಿ ನಿಗಮ ತೀರ್ಮಾನಿಸಿದೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Bengaluru: 4 ಕೋಟಿ ಪ್ರಯಾಣಿಕರು: ಏರ್ ಪೋರ್ಟ್ ದಾಖಲೆ
Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ
Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ
Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.