ವೈದ್ಯಕೀಯ ಮೂಲಸೌಕರ್ಯ ಸಮಸ್ಯೆ?
ಮುಂದಿನ ನಾಲ್ಕು ವಾರದಲ್ಲಿ 4ಲಕ್ಷ ಸೋಂಕು ಪ್ರಕರಣ ಸಾಧ್ಯತೆ
Team Udayavani, Oct 18, 2020, 4:14 PM IST
ಬೆಂಗಳೂರು: ಕೋವಿಡ್ ವೈರಸ್ ತೀವ್ರತೆ ಒಂದು ವೇಳೆ ಇದೇ ರೀತಿ ಮುಂದುವರಿದರೆ ನಗರದಲ್ಲಿ ಸೋಂಕಿತರ ಸಂಖ್ಯೆ ಮುಂದಿನ ನಾಲ್ಕು ವಾರಗಳಲ್ಲಿ ನಾಲ್ಕು ಲಕ್ಷದಗಡಿದಾಟಲಿದೆ. ಇದರಬೆನ್ನಲ್ಲೇ ಇದಕ್ಕೆಅನುಗುಣವಾಗಿವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯಗಳ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿರುವುದರಿಂದ ಇದರ ಪೂರೈಕೆ ಸರ್ಕಾರಕ್ಕೆ ಸವಾಲಾಗುವ ಸಾಧ್ಯತೆಗಳಿವೆ.
ಸದ್ಯ ಬೆಂಗಳೂರಿನ ಒಟ್ಟಾರೆ ಸೋಂಕು ಪ್ರಕರಣಗಳು ಮೂರು ಲಕ್ಷ ಗಡಿದಾಟಿವೆ. ಅಕ್ಟೋಬರ್‌ನಲ್ಲಿ (1 ರಿಂದ 17) ನಿತ್ಯ ಸರಾಸರಿ ನಾಲ್ಕು ಸಾವಿರ ಸೋಂಕು ಪ್ರಕರಣ ಗಳು ವರದಿಯಾಗುತ್ತಿವೆ. ಜತೆಗೆ ದೇಶದಲ್ಲೇ ಅತಿ ಹೆಚ್ಚುಪರೀಕ್ಷೆಗಳು ಇಲ್ಲಿ ನಡೆಯುತ್ತಿದ್ದು, ಜತೆಗೆಅತ್ಯಧಿಕ ಸೋಂಕು ಪ್ರಕರಣಗಳೂ ವರದಿಯಾಗುತ್ತಿವೆ .ಮುಂದಿನ ದಿನಗಳಲ್ಲಿ ಇದು ಸೃಷ್ಟಿಸಲಿರುವ ವೈದ್ಯಕೀಯ ಮೂಲ ಸೌಕರ್ಯಗಳ ಬೇಡಿಕೆಯು ಸರ್ಕಾರದ ನಿದ್ದೆಗೆಡಿಸಿದೆ.
ಮೈಸೂರಿನ “ಜೀವನ್ ರಕ್ಷಾ’ ಸಂಸ್ಥೆಯು ನಡೆಸಿರುವಸಮೀಕ್ಷೆ ಪ್ರಕಾರ ನವೆಂಬರ್ 12ಕ್ಕೆ ನಗರ ಒಟ್ಟಾರೆ ಸೋಂಕು ಪ್ರಕರಣಗಳು4.2ಲಕ್ಷಕ್ಕೆ ತಲುಪಲಿವೆ.ಅಲ್ಲದೆ, ಈ ರೀತಿಯ ಪ್ರಕರಣಗಳು ಹೆಚ್ಚಳವಾದ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ 13,000 ಆಕ್ಸಿಜನ್ ಹಾಸಿಗೆಗಳು, 10,000 ಐಸಿಯುಹಾಸಿಗೆಗಳು,6,500ವೆಂಟಿಲೇಟರ್ ಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ.
ಶೇ.80 ರಷ್ಟು ಕೊರತೆ ಸಾಧ್ಯತೆ?: ಸದ್ಯ ನಗರದಲ್ಲಿ 20 ಸರ್ಕಾರಿ ವಲಯದ ಆಸ್ಪತ್ರೆಗಳು ಮತ್ತು 115 ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಎಲ್ಲಾ ಆಸ್ಪತ್ರೆಗಳು ಒಳಗೊಂಡಂತೆ ಒಟ್ಟು 11,328ಹಾಸಿಗಳನ್ನು ಸೋಂಕಿತರಿಗೆ ಮೀಸಲಿಡಲಾಗಿದೆ.1,144ಐಸಿಯು ಹಾಸಿಗಳು,3,965 ಆಕ್ಸಿಜನ್ ಹಾಸಿಗೆಗಳಿದ್ದು, 509 ಮಾತ್ರ ವೆಂಟಿಲೇಟರ್‌ಗಳಿವೆ.
ಇದರ ಪ್ರಕಾರ ಶೇ.89 ಐಸಿಯು ಹಾಸಿಗೆಗಳು, ಶೇ. 70ರಷ್ಟು ಆಕ್ಸಿಜನ್ ಹಾಸಿಗೆಗಳು, ಶೇ.92 ವೆಂಟಿಲೇಟರ್ ಗಳ ಕೊರತೆಯಾಗಲಿವೆಎಂದು ಜೀವನ್ ರಕ್ಷಾ ಸಂಸ್ಥೆಯ ಯೋಜನಾ ಸಂಚಾಲಕ ಮೈಸೂರು ಸಂಜೀವ್ ಅಭಿಪ್ರಾಯಪಟ್ಟಿದ್ದಾರೆ.
ಸಮಸ್ಯೆ ಆಗದು: ದಿನದಲ್ಲಿ ವರದಿಯಾಗುವ ಕೋವಿಡ್ ಸೋಂಕಿತರ ಪೈಕಿ ಶೇ.13ರಷ್ಟು ಮಂದಿಗೆ ಮಾತ್ರ ಐಸಿಯು ಹಾಸಿಗೆ ಅಗತ್ಯವಿರುತ್ತದೆ. ಆ ಪೈಕಿ ಶೇ.5 ಮಂದಿಗೆ ವೆಂಟಿಲೇಟರ್ ಶೇ.8 ಮಂದಿ ತೀವ್ರ ಅವಲಂಬಿತ ಘಟಕದಲ್ಲಿ (ಎಚ್‌ಡಿಯು) ಆಕ್ಸಿಜನ್ ಸೌಲಭ್ಯ ಒಳಗೊಂಡ ಚಿಕಿತ್ಸೆ ಬೇಕಾಗುತ್ತದೆ. ಸದ್ಯಸರಾಸರಿ ನಾಲ್ಕು ಪ್ರಕರಣಗಳ ವರದಿಯಾದರೆ 200 ಮಂದಿಗೆ ವೆಂಟಿಲೇಟರ್‌ಅಗತ್ಯವಿರುತ್ತದೆ. ಉಳಿದಂತೆ ಸುಮಾರು 300 ಮಂದಿಗೆ ಎಚ್‌ಡಿಯು ಹಾಸಿಗೆಬೇಕಾಗುತ್ತದೆ. ಈಗಾಗಲೇ ಇಷ್ಟು ಪ್ರಮಾಣದಲ್ಲಿ ವೆಂಟಿಲೇಟರ್ ಮತ್ತು ಹಾಸಿಗೆಗಳು ಲಭ್ಯವಿವೆ. ಒಂದೇ ದಿನ ಐದು ಸಾವಿರ ಮಂದಿಗೆ ಸೋಂಕು ದೃಢಪಟ್ಟ ಸಂದರ್ಭದಲ್ಲಿಯೂ ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದು ಬಿಬಿಎಂಪಿ ವ್ಯಾಪ್ತಿ ಕೋವಿಡ್ ರೋಗಿಗಳ ಸ್ಥಳಾಂತರ ಸಮಿತಿ ಅಧ್ಯಕ್ಷ ತುಷಾರ್ ಗಿರಿನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪರೀಕ್ಷೆ ಇನ್ನಷ್ಟು ಹೆಚ್ಚಳವಾಗಿ ನಿತ್ಯ ಪ್ರಕರಣಗಳು ಒಂದು ವೇಳೆ ಆರು ಸಾವಿರಕ್ಕೂ ಅಧಿಕವಾದರೂ ನಿರ್ವಹಣೆ ಅಗತ್ಯ ವ್ಯವಸ್ಥೆ ಮಾಡಲಾ ಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 100 ವೆಂಟಿಲೇಟರ್‌ಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 150 ವೆಂಟಿಲೇಟರ್‌ಗಳ ಅಳವಡಿಸಲು ಕ್ರಮಕೈಗೊಂಡಿದ್ದು, ಅಕ್ಟೋಬರ್ ಅಂತ್ಯಕ್ಕೆ 250 ವೆಂಟಿಲೇರ್‌ಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ. ಜತೆಗೆ ಸಾಮಾನ್ಯ ಹಾಸಿಗೆ ಸಾಮರ್ಥ್ಯವನ್ನು ಕಡಿಮೆ ಮಾಡಿ ಆಕ್ಸಿಜನ್ ಹಾಸಿಗೆಗಳನ್ನು ಶೇ.40 ರಷ್ಟು ಹೆಚ್ಚಿಸಲಾಗು ವುದು. ಅಲ್ಲದೆ, 100ಕ್ಕೂ ಹೆಚ್ಚು ಹಾಸಿಗೆ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡುವ ನಿಟ್ಟಿನಲ್ಲಿ ಶೀಘ್ರ ಮಾತುಕತೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 10 ಲಕ್ಷ ಗಡಿದಾಟುವ ಪ್ರಕರಣ : ರಾಜ್ಯದಲ್ಲಿ ಅ. 12ರೊಳಗೆ ಸೋಂಕು ಪ್ರಕರಣಗಳ ಸಂಖ್ಯೆ ಏಳು ಲಕ್ಷ ಗಡಿದಾಟುತ್ತದೆ ಎಂದು ಈ ಹಿಂದೆ ಜೀವನ್ ರಕ್ಷಾ ಸಂಸ್ಥೆಯ ಸಮೀಕ್ಷೆ ಮೂಲಕಹೇಳಿತ್ತು. ಆದರೆ, ಅ.11ಕ್ಕೆ ಪ್ರಕರಣಗಳು ಏಳು ಲಕ್ಷ ದಾಟಿದ್ದವು. ಸದ್ಯ ನ.12ಕ್ಕೆ ಒಟ್ಟಾರೆ ಪ್ರಕರಣಗಳು 10ಲಕ್ಷ ಗಡಿದಾಟಲಿವೆ ಎಂದು ಅಂದಾಜಿಸಿದೆ.ಆ ವೇಳೆಗೆ ರಾಜ್ಯಕ್ಕೆ 22,5000 ಆಕ್ಸಿಜನ್ ಬೆಡ್ ಹಾಸಿಗೆಗಳು, 16,800 ಐಸಿಯು ಹಾಸಿಗೆಗಳು, 11,200 ವೆಂಟಿಲೇಟರ್ಗಳು ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.