ಮೆಟ್ರೋಗೆ ಹೊಸ ಬಣ್ಣದ 5 ಲಕ್ಷ ಟೋಕನ್
Team Udayavani, Oct 25, 2017, 1:00 PM IST
ಬೆಂಗಳೂರು: “ನಮ್ಮ ಮೆಟ್ರೋ’ ಟಿಕೆಟ್ ರೂಪದಲ್ಲಿ ನೀಡುವ ಟೋಕನ್‌ಗಳ ಬಣ್ಣ ಬದಲಾಗಿದೆ. ತಿಳಿನೀಲಿ ಬಣ್ಣದ ಸ್ವಲ್ಪ ಹೊಳಪು ಇರುವ ಹೊಸ ರೂಪದಲ್ಲಿ ಟಿಕೆಟ್ ಟೋಕನ್‌ಗಳನ್ನು ಪರಿಚಯಿಸಲಾಗಿದೆ. ಹಾಗಂತಾ, ಈ ಮೊದಲಿದ್ದ ಕಪ್ಪುಬಣ್ಣದ ಟೋಕನ್‌ಗಳ ಇರುವುದಿಲ್ಲ ಎಂದಲ್ಲ.
ಹಳೆಯ ಮತ್ತು ಹೊಸ ಟೋಕನ್‌ಗಳೆರಡೂ ಚಾಲ್ತಿಯಲ್ಲಿರುತ್ತವೆ ಎಂದು ಬಿಎಂಆರ್‌ಸಿ ಸ್ಪಷ್ಟಪಡಿಸಿದೆ. ಸುಮಾರು 5 ಲಕ್ಷ ಈ ಹೊಸ ಟೋಕನ್‌ಗಳು ಸೇರ್ಪಡೆಯಾಗಿವೆ. ಈ ಹಿಂದಿದ್ದ ಟೋಕನ್‌ಗಳ ಸಂಖ್ಯೆ ಐದು ಲಕ್ಷ. ಅಂದರೆ, ಹತ್ತು ಲಕ್ಷ ಟೋಕನ್‌ಗಳು ಲಭ್ಯ ಇವೆ.
ನೇರಳೆ ಮತ್ತು ಹಸಿರು ಮಾರ್ಗ ಸೇರಿ ನಿತ್ಯ ಮೆಟ್ರೋದಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಸರಾಸರಿ 3.60 ಲಕ್ಷ. ಟೋಕನ್ ಬಣ್ಣ ಬದಲಿಸಲು ಕಾರಣ, ಸ್ವಲ್ಪ ಆಕರ್ಷಕವಾಗಿರಲಿ ಹಾಗೂ ಹೊಳಪಿನೊಂದಿಗೆ ಕೈಯಲ್ಲಿ ಮೃದುವಾಗಿರುತ್ತದೆ.
ಬಣ್ಣ ಹೊರತುಪಡಿಸಿದರೆ, ಉಳಿದಂತೆ ಅದರಲ್ಲಿನ ಮೆಟ್ರೋ ರಂಗೋಲಿ ಮತ್ತು ಬಿಬಿಎಂಪಿ ಗೋಪುರ ಲಾಂಛನ ಎಂದಿನಂತೆ ಇದೆ. ತಿಂಗಳ ಹಿಂದಿನಿಂದಲೇ ಈ ಹೊಸ ಟೋಕನ್‌ಗಳು ಚಾಲ್ತಿಯಲ್ಲಿವೆ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Sullia: ಅಸ್ವಸ್ಥ ಮಹಿಳೆ ಸಾವು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.