ಪೊಲೀಸರ ತಪ್ಪಿನಿಂದ ನ್ಯಾಯದಲ್ಲಿ ಪ್ರಮಾದ


Team Udayavani, Jun 11, 2017, 12:23 PM IST

police-tappu.jpg

ಬೆಂಗಳೂರು: “ಅಪರಾಧ ಪ್ರಕರಣಗಳ ತನಿಖೆ ವೇಳೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸುವಾಗ ಎಲ್ಲ ಸಾಕ್ಷ್ಯಾಧಾರಗಳನ್ನು ಸರಿಯಾಗಿ ಸಂಗ್ರಹಿಸದೆ ನಿರ್ಲಕ್ಷ್ಯ ತೋರುತ್ತಿರುವುದರಿಂದಲೇ ಅರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ,’ ಎಂದು ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರಾಜ್ಯ ಪೊಲೀಸ್‌ ಇಲಾಖೆ ಶನಿವಾರ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ “ಅಪರಾಧ ನ್ಯಾಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವಿಕೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಆರೋಪಿಗೆ ಶಿಕ್ಷೆಯಾಗುವಲ್ಲಿ ಪೊಲೀಸರ ಪಾತ್ರ ಪ್ರಮುಖ. ಪೊಲೀಸರು ಸೂಕ್ತ ರೀತಿ ತನಿಖೆ ನಡೆಸಿ, ಸಾಕ್ಷ್ಯ ಸಂಗ್ರಹಿಸಿದರೆ ಅಪರಾಧಿಗೆ ಶಿಕ್ಷೆಯಾಗುತ್ತದೆ.

ಆದರೆ, ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಾಗ ಹಾಗೂ ಜಾರ್ಜ್‌ಶೀಟ್‌ ಸಲ್ಲಿಸುವಾಗ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸುವುದಿಲ್ಲ. ಇದರಿಂದ ಅಪರಾಧಿ ನಿರಪರಾಧಿಯಾಗುತ್ತಾನೆ. ಸಾಮಾನ್ಯವಾಗಿ ಎಲ್ಲ ಪ್ರಕರಣಗಳಲ್ಲೂ ಸಾಕ್ಷ್ಯ ಸಂಗ್ರಹ ಸಾಧ್ಯವಾಗದಿರಬಹುದು. ಆ ವೇಳೆ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಲು ಅವಕಾಶವಿದೆ,’ಎಂದರು.

“ಸಾಕ್ಷ್ಯ ಗಳ ಆಧಾರದ ಮೇಲಿಯೇ ಶಿಕ್ಷೆ ಪ್ರಕಟವಾಗುವುದರಿಂದ ಸಾಕ್ಷಿ ಸಂಗ್ರಹ ಎಂಬುದು ಅತೀ ಪ್ರಮುಖ. ಈ ಬಗ್ಗೆ ಪೊಲೀಸರು ಹೆಚ್ಚಿನ ಗಮನಕೊಡಬೇಕು. ದುರಾದೃಷ್ಟವಶಾತ್‌ ಯಾವುದಾದರೂ ಪ್ರಕರಣದ ತೀರ್ಪು ವ್ಯತ್ತಿರಿಕ್ತವಾದರೆ ಆಗ ಸಮಾಜ ನ್ಯಾಯಾಲಯವನ್ನು ದೂಷಿಸ್ತುತದೆ. ಉದಾಹರಣೆಗೆ ಭೋಪಾಲ್‌ ಅನಿಲ ದುರಂತ ಪ್ರಕರಣದಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.

ಆದರೆ, ಇದು ಕೊಲೆ ಅಲ್ಲ, ನಿರ್ಲಕ್ಷ್ಯದಿಂದಾದ ದುರಂತ ಎಂದು ಆರೋಪಿಗಳು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಆಗ ವಿಚಾರಣೆ ನಡೆಸಿದ ಕೋರ್ಟ್‌ ನಿರ್ಲಕ್ಷ್ಯ ತನಕ್ಕೆ ವಿಧಿಸಬಹುದಾದ ಕನಿಷ್ಠ ಮೂರು ವರ್ಷ ಶಿಕ್ಷೆ ಪ್ರಕಟಿಸಿತು. ಈ ವೇಳೆ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ವಿಫ‌ಲರಾದರು. ಆದರೆ, ಮಾಧ್ಯಮ ಮತ್ತು ಸಮಾಜ ನ್ಯಾಯಾಲಯವನ್ನು ಆರೋಪಿಸಿತು. ಪೊಲೀಸರ ಕರ್ತವ್ಯ ಲೋಪದಿಂದ ನ್ಯಾಯಾಲಯ ಈ ಆರೋಪ ಕೇಳಬೇಕಾಯಿತು,’ ಎಂದು ಬೇಸರವ್ಯಕ್ತಪಡಿಸಿದರು.

ವರದಿಗೆ ವರ್ಷ!: ಪ್ರಕರಣ ವಿಳಂಬವಾಗಲು ಮತ್ತೂಂದು ಪ್ರಮುಖ ಕಾರಣವೆಂದರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು. ವರ್ಷಗಟ್ಟಲೇ ಪರೀûಾ ವರದಿ ಬರುವುದೇ ಇಲ್ಲ. ಅವು ಬಂದಾಗ ತನಿಖಾಧಿಕಾರಿ ನಿವೃತ್ತಿ ಹೊಂದಿರುತ್ತಾನೆ. ಇಲ್ಲವೇ ಬೇರೆಡೆ ವರ್ಗವಾಗಿ ಪ್ರಕರಣದ ಆಸಕ್ತಿಯನ್ನೆ ಕಳೆದುಕೊಳ್ಳುತ್ತಾನೆ. ಮತ್ತೂಂದೆಡೆ ಪ್ರಕರಣದ ಸಾಕ್ಷಿ ಕೂಡ ಆಸಕ್ತಿ ಕಳೆದುಕೊಂಡಿರುತ್ತಾನೆ. ಹೀಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಗಳಿಂದ ತ್ವರಿತಗತಿಯಲ್ಲಿ ವರದಿ ಸಿದ್ಧಪಡಿಸುವಂತೆ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಇದರೊಂದಿಗೆ ಅಪರಾಧ ನ್ಯಾಯಿಕ ವ್ಯವಸ್ಥೆಯಲ್ಲೂ ಸಾಕಷ್ಟು ಸುಧಾರಣೆಯಾಗಬೇಕಿದೆ. ಅಪರಾಧ ಪ್ರಕರಣಗಳಲ್ಲಿ ಅಪರಾಧಿಗೆ ಶಿಕ್ಷೆಯಾಗಬೇಕಾದರೆ ಸರ್ಕಾರಿ ವಕೀಲರ ಪಾತ್ರ ಮುಖ್ಯ. ಸಾಕ್ಷ್ಯಾಗಳು ಮಾರಾಟವಾಗುವುದು ಕೂಡ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತಾ, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಸುಭಾಷ್‌ ಚಂದ್ರ, ಹಿರಿಯ, ಕಿರಿಯ ಐಪಿಎಸ್‌ ಅಧಿಕಾರಿಗಳು, ನಗರದ ಎಲ್ಲ ಡಿಸಿಪಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Khnadre-Toxic

Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ

Sports

Sports; ‘ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

Nikhil-CPY

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ

Voter-list

Voter List: ಕರಡು ಮತದಾರರ ಪಟ್ಟಿ ಪ್ರಕಟ: 221 ಕ್ಷೇತ್ರಗಳಲ್ಲಿ 5.44 ಕೋಟಿ ಮತದಾರರು

Karnataka: “ಹಲ್ಮಿಡಿ’ ಶಾಸನದ ಕಲ್ಲಿನ ಪ್ರತಿಕೃತಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಷ್ಠಾಪನೆ

Karnataka: “ಹಲ್ಮಿಡಿ’ ಶಾಸನದ ಕಲ್ಲಿನ ಪ್ರತಿಕೃತಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಷ್ಠಾಪನೆ

Dina Bhavishya

Daily Horoscope; ಶಾರೀರಿಕ ಶ್ರಮ ಮಾಡುವವರಿಗೆ ಆರೋಗ್ಯದ ಸಮಸ್ಯೆ, ಅಪವಾದದ ಭಯ

BYV-Hasan

Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್‌: ಬಿ.ವೈ.ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elepnht-Anekal

Anekal: ಎಂಟು ವರ್ಷದ ಕಾಡಾನೆ ಮರಿ ಹೃದಯಾಘಾತದಿಂದ ಸಾವು

High Court: ಎಸ್‌ಟಿಎಸ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್‌: ಉದ್ಯಮಿ ಮೇಲಿನ ಪ್ರಕರಣ ರದ್ದು

High Court: ಎಸ್‌ಟಿಎಸ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್‌: ಉದ್ಯಮಿ ಮೇಲಿನ ಪ್ರಕರಣ ರದ್ದು

FIR : ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಜಾಹೀರಾತು; ವ್ಯಕ್ತಿ ವಿರುದ್ಧ ಎಫ್ಐಆರ್‌

FIR : ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಜಾಹೀರಾತು; ವ್ಯಕ್ತಿ ವಿರುದ್ಧ ಎಫ್ಐಆರ್‌

Bengaluru: “ನಾಡಿದಿನಿಂದ 3 ದಿನ ಪಟಾಕಿ ಸಿಡಿಸಲು ಅವಕಾಶ’

Bengaluru: “ನಾಡಿದಿನಿಂದ 3 ದಿನ ಪಟಾಕಿ ಸಿಡಿಸಲು ಅವಕಾಶ’

Arrestted:10 ವರ್ಷಗಳಿಂದ ನಗರದಲಿದ್ಲ ಬಾಂಗ್ಲಾದೇಶ ಪ್ರಜೆ ಬಂಧನ

Arrestted:10 ವರ್ಷಗಳಿಂದ ನಗರದಲಿದ್ಲ ಬಾಂಗ್ಲಾದೇಶ ಪ್ರಜೆ ಬಂಧನ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Khnadre-Toxic

Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ

Sports

Sports; ‘ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

Nikhil-CPY

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ

Voter-list

Voter List: ಕರಡು ಮತದಾರರ ಪಟ್ಟಿ ಪ್ರಕಟ: 221 ಕ್ಷೇತ್ರಗಳಲ್ಲಿ 5.44 ಕೋಟಿ ಮತದಾರರು

Kumbra

Mangaluru: ಉಪಕರಣಗಳ ಸಹಿತ ಮೊಬೈಲ್‌ ಟವರ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.