ಮೌಲ್ಡ್‌ ಕೊರೆದು ಚಿನ್ನದಂಗಡಿಗೆ ಕನ್ನ


Team Udayavani, Jul 10, 2017, 11:35 AM IST

gold-kanna.jpg

ಬೆಂಗಳೂರು: ನಗರದ ಕಾಟನ್‌ ಪೇಟೆ ಮುಖ್ಯ ರಸ್ತೆಯಲ್ಲಿರುವ ಕಾಂಚನ್‌ ಜ್ಯುವೆಲ್ಲರಿ ಮಳಿಗೆಯ ಮೌಲ್ಡ್‌ ಕೊರೆದು ವ್ಯಕ್ತಿಯೊಬ್ಬ ಮೂರು ಕೆ.ಜಿ. ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾನೆ. ಚಿನ್ನಾಭರಣ ಮಳಿಗೆಯ ಮೇಲ್ಭಾಗದಲ್ಲಿರುವ ಪ್ಲಾಟಿನಂ ಡಿಲೆಕ್ಸ್‌ ಲಾಡ್ಜ್ನಲ್ಲಿ ಕೊಠಡಿ ಪಡೆದ ವ್ಯಕ್ತಿಯೇ ಕನ್ನ ಕೊರೆದು ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜ್ಯುವೆಲ್ಲರಿ ಮಳೆಗೆಯಲ್ಲಿ ಕಳವು ಮಾಡಲು ಸಂಚು ರೂಪಿಸಿದ್ದ ಆರೋಪಿ, ಜೂನ್‌ 19ರಂದು ಕಲಬುರಗಿ ವಿಳಾಸ ನೀಡಿ ಹುಸೇನ್‌ ಎಂಬ ಹೆಸರಲ್ಲಿ ಕೊಠಡಿ ಪಡೆದಿದ್ದಾನೆ. ಆತನಿದ್ದ ಕೊಠಡಿ ಜ್ಯುವೆಲ್ಲರಿ ಮಳಿಗೆಯ ಮೇಲಾºಗದಲ್ಲೇ ಇತ್ತು. ಇದು ಆತನ ಕೃತ್ಯಕ್ಕೆ ನೆರವಾಗಿದೆ. ನಿತ್ಯ ರಾತ್ರಿ ತನ್ನ ಕೊಠಡಿಯಿಂದಲೇ ಜ್ಯುವೆಲ್ಲರಿ ಅಂಗಡಿಗೆ ಆತ ರಂಧ್ರ ಕೊರೆದಿದ್ದ. ರಂಧ್ರ ಗೊತ್ತಾಗದಂತೆ ವಸ್ತುಗಳನ್ನು ಇಟ್ಟಿದ್ದ. ಶನಿವಾರ ಜೈನರ ಹಬ್ಬ ಇರುವುದರಿಂದ ಸಂಜೆ ಜ್ಯುವೆಲ್ಲರಿ ಮಳಿಗೆಗೆ ರಜೆ ಇತ್ತು.

ಈ ಮಾಹಿತಿ ಗೊತ್ತಿದ್ದ ಆತ ಶನಿವಾರ ರಾತ್ರಿ ಎಂದಿನಂತೆ ಕೊಠಡಿಗೆ ಬಂದು ಪೂರ್ಣ ರಂಧ್ರ ಕೊರೆದು, ಜ್ಯುವೆಲ್ಲರಿ ಮಳಿಗೆಯೊಳಗೆ ಇಳಿದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾನೆ. ಭಾನುವಾರ ಬೆಳಗ್ಗೆ ಮಾಲೀಕರು ಜ್ಯುವೆಲ್ಲರಿ ಮಳಿಗೆಯ ಬೀಗ ತೆಗೆದು ಒಳಬಂದಾಗ ಅಂಗಡಿಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಮತ್ತು ಅಂಗಡಿ ಮೇಲ್ಛಾವಣಿ ಕೊರೆದಿರುವುದು ಕಂಡು ಬಂದಿದೆ. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜ್ಯುವೆಲ್ಲರಿ ಅಂಗಡಿಗೆ ಹೊಂದಿಕೊಂಡಂತೆ ಎರಡೂ ಕಡೆಗಳಲ್ಲಿ ಮೆಡಿಕಲ್‌ ಸ್ಟೋರ್‌ ಹಾಗೂ ಮೆನ್ಸ್‌ ಪಾರ್ಲರ್‌ ಮಳಿಗೆಗಳಿವೆ. ಕಳೆದ ಕೆಲವು ದಿನಗಳಿಂದ ಗೋಡೆ ಕೊರೆಯುತ್ತಿರುವ ಶಬ್ದ ಕೇಳಿಬರುತ್ತಿದ್ದ ಬಗ್ಗೆ ಸ್ಥಳೀಯರು ಲಾಡ್ಜ್ ಸಿಬ್ಬಂದಿ ಗಮನಕ್ಕೂ ತಂದಿದ್ದಾರೆ. 07/09/2017 10:31:17 ಕMಆದರೆ, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. 

ಕೊಠಡಿ ಖಾಲಿ ಮಾಡಿದ ಕಳ್ಳ
ತಡರಾತ್ರಿಯೇ ತನ್ನ ಕೃತ್ಯ ಮುಗಿಸಿದ್ದ ಆರೋಪಿ ತರ್ತು ಕೆಲಸವಿದೆ ಎಂದು ಹೇಳಿ ಭಾನುವಾರ ಮುಂಜಾನೆ 6 ಗಂಟೆ ಸುಮಾರಿಗೆ ಕೊಠಡಿ ಖಾಲಿ ಮಾಡಿದ್ದಾನೆ. ಕೊಠಡಿ ಖಾಲಿ ಮಾಡುವಾಗ ಆತನ ಬಳಿ ಸಣ್ಣ ಬ್ಯಾಗ್‌ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳಿರಲಿಲ್ಲ ಎಂದು ಲಾಡ್ಜ್ ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಯುವೆಲ್ಲರಿ ಅಂಗಡಿ ಹಾಗೂ ಲಾಡ್ಜ್ನಲ್ಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಕಳ್ಳನ ಚಲನವಲನಗಳ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಕೊಠಡಿಯವನ ವಿಚಾರಣೆ
ಕನ್ನ ಕೊರೆದಿರುವ ಕೊಠಡಿ ಪಕ್ಕದ ಕೊಠಡಿಯಲ್ಲೇ ಮೂರು ದಿನಗಳಿಂದ ವಾಸವಾಗಿರುವ ತಮಿಳುನಾಡು ಮೂಲದ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಗರದಲ್ಲಿ ಕಂಪ್ಯೂಟರ್‌ ಖರೀದಿಗಾಗಿ ಬಂದಿದ್ದಾಗಿ ಈತ ಹೇಳಿಕೊಂಡಿದ್ದು, ಈತನ ಬಳಿ ಕಂಪ್ಯೂಟರ್‌ ಬಿಡಿಭಾಗಗಳ ಖರೀದಿ ಮಾಡಿದ ರಶೀದಿ ಲಭ್ಯವಾಗಿದೆ.

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.