ಸಾಲದ ವಿಷಯಕ್ಕೆ ಬಾಲ್ಯ ಸ್ನೇಹಿತನ ಕೊಲೆ
Team Udayavani, Oct 9, 2017, 11:56 AM IST
ಬೆಂಗಳೂರು: ಹಣದ ವಿಚಾರವಾಗಿ ನಾಲ್ವರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಕೊನೆಯಾದ ಘಟನೆ ಪುಟ್ಟೇನಹಳ್ಳಿಯ ವಿನಾಯಕನಗರದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ವಿನಾಯಕ ನಗರ ನಿವಾಸಿ ಸುರೇಶ್ ಕುಮಾರ್ (28) ಕೊಲೆಯಾದವ. ಈ ಸಂಬಂಧ ಸುರೇಶ್‌ನ ಬಾಲ್ಯ ಸ್ನೇಹಿತರಾದ ತೌಸಿಫ್, ಶಿವು ಮತ್ತು ರಘುನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮತ್ತೂಬ್ಬ ಆರೋಪಿ ದಿಲೀಪ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಯೂಮಿನಿಯಂ ಪ್ಯಾಬ್ರಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸುರೇಶ್, ಕೆಲ ದಿನಗಳ ಹಿಂದೆ ತೌಸಿಫ್ ಬಳಿ 10 ಸಾವಿರ ರೂ. ಸಾಲ ಪಡೆದಿದ್ದು, ಹೇಳಿದ ಸಮಯಕ್ಕೆ ಮರು ಪಾವತಿ ಮಾಡಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ತೌಸಿಫ್, ಸುರೇಶ್ ಕಂಡಲ್ಲೆಲ್ಲ ಹಣ ಕೇಳುತ್ತಿದ್ದ. ಆದರೆ, ಪ್ರತಿ ಬಾರಿಯೂ ಸದ್ಯದಲ್ಲೇ ಕೊಡುತ್ತೇನೆಂದು ಸಬೂಬು ಹೇಳುತ್ತಿದ್ದ ಸುರೇಶ್, ಇದುವರೆಗೂ ಹಣ ನೀಡರಲಿಲ್ಲ.
ಅಲ್ಲದೆ, ಬಾಲ್ಯ ಸ್ನೇಹಿತನಾಗಿದ್ದರಿಂದ ತೌಸಿಫ್ ಹೆಚ್ಚು ಬಲವಂತ ಮಾಡುತ್ತಿರಲಿಲ್ಲ. ಈ ಮಧ್ಯೆ ಭಾನುವಾರ ರಾತ್ರಿ ವಿನಾಯಕನಗರದಲ್ಲಿ ಸ್ನೇಹಿತರೆಲ್ಲರೂ ಪಾರ್ಟಿ ಮಾಡಿದ್ದಾರೆ. ಈ ವೇಳೆ ಮತ್ತೂಮ್ಮೆ ತೌಸಿಫ್ ಸಾಲದ ಹಣ ಕೊಡುವಂತೆ ಕೇಳಿದ್ದಾನೆ. ಇದೇ ವಿಚಾರವಾಗಿ ತೌಸಿಫ್ ಮತ್ತು ಸುರೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಆಕ್ರೋಶಗೊಂಡ ತೌಸಿಫ್, ಬಿಯರ್ ಬಾಟಲಿಯಿಂದ ಸುರೇಶ್ ಕುತ್ತಿಗೆ ಭಾಗಕ್ಕೆ ಚುಚ್ಚಿದ್ದಾನೆ.
ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಸುರೇಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲೇ ಸುರೇಶ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ತೌಸಿಫ್ ಹಾಗೂ ಸ್ನೇಹಿತರು ಖುದ್ದು ಸುರೇಶ್ ಕುಟುಂಬದವರಿಗೆ ಸಾವಿನ ಮಾಹಿತಿ ನೀಡಿ ಪರಾರಿಯಾಗಿದ್ದರು. ನಂತರ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.