ವರ್ಣಚಿತ್ರಗಳಲ್ಲಿ ಒಡಮೂಡಿದ ಪೌರಾಣಿಕ ಚಿತ್ರಣ!


Team Udayavani, Dec 5, 2017, 4:35 PM IST

varnacitra.jpg

ಬೆಂಗಳೂರು: ವರ್ಣಚಿತ್ರಗಳು ಇಲ್ಲಿ ಕಥೆ ಹೇಳುತ್ತಿವೆ. ಮಹಾಭಾರತ, ರಾಮಾಯಣವನ್ನು ನೆನೆಪಿಸುತ್ತಿವೆ. ದೇವಾನುದೇವತೆಗಳ ಅವತಾರ, ರಾಕ್ಷಸರ ಸಂಹಾರ ವರ್ಣಗಳಲ್ಲಿ ಜೀವ ಪಡೆದಿದೆ. ಶ್ರೀರಾಮಚಂದ್ರನ ಪಟ್ಟಾಭಿಷೇಕ, ಗೀತೋಪದೇಶ, ಬಾಲ ಕೃಷ್ಣನ ತುಂಟಾಟ, ಯಶೋಧೆಯ ಮಮತೆ. ರತಿ ಮನ್ಮಥರು, ತ್ರಿಪುರ ಸಂಹಾರ ಸೇರಿ ನೂರಾರು ಚಿತ್ರಗಳು ಒಂದೊಂದು ಕಥೆ ಹೇಳುತ್ತವೆ.

ಈ ವರ್ಣಮಯ ಜಗತ್ತು ತೆರೆದುಕೊಂಡಿರುವುದು ಕುಮಾರ ಕೃಪ ರಸ್ತೆಯ ಚಿತ್ರಕಲಾ ಪರಿಷತ್‌ನಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ಮೈಸೂರಿನ ಸಾಂಪ್ರಾದಾಯಿಕ ವರ್ಣಚಿತ್ರಗಳ ಮಹಾ ಪ್ರದರ್ಶನ ಮೇಳ ಸೋಮವಾರ ಆರಂಭವಾಗಿದ್ದು,

ಡಿ.17ರವರೆಗೆ  ನಡೆಯಲಿದ್ದು, ಬೆಳಗ್ಗೆ 10 ರಿಂದ ಸಂಜೆ 7ರ ವರೆಗೆ ಪ್ರದರ್ಶನವಿರಲಿದೆ. ಮೈಸೂರಿನ ಪ್ರಸಿದ್ಧ ವರ್ಣಚಿತ್ರಗಾರರಾದ ದಿನೇಶ್‌, ರಾಮಕೃಷ್ಣ  ಮತ್ತು ತಿ.ನರಸಿಪುರದ ಶ್ರೀಹರಿ ಅವರ ಕಲ್ಪನೆಯಲ್ಲಿ ಮೂಡಿ ಬಂದಿರುವ ನೂರಾರು ಚಿತ್ರಗಳು ಮೇಳದಲ್ಲಿವೆ.

ಶ್ರೀರಾಮನ ಪಟ್ಟಾಭಿಷಕ, ಕೃಷ್ಣ ರುಕ್ಮಿಣಿಯರ ಕಲ್ಯಾಣ, ಮುಮ್ಮಡಿ ಕೃಷ್ಣರಾಜ ಒಡೆಯರ್‌, ಜಯಚಾಮರಾಜ ಒಡೆಯರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ವರ್ಣಚಿತ್ರಗಳು ಆಗಿನ ಕಾಲ, ಸನ್ನಿವೇಷ ಹಾಗೂ ವೈಭವದ ಚಿತ್ರಣ ಕಟ್ಟಿಕೊಡುತ್ತವೆ. ನೋಡುತ್ತಿದ್ದರೆ ಕಣ್ಣಮುಂದೇ ದೃಶ್ಯ ಘಟಿಸುತ್ತಿದೆ ಎಂಬ ನೈಜ ಚಿತ್ರಣ ನೀಡುವುದು ಈ ವರ್ಣಚಿತ್ರಗಳ ರಚನೆಯಲ್ಲಿನ ಜೀವಂತಿಕೆಗೆ ಸಾಕ್ಷಿ.

ಮೇಳದಲ್ಲಿ 150ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಕ್ಕಿದ್ದು, ಎಲ್ಲವೂ ಮೈಸೂರಿನ ಸಾಂಪ್ರಾದಾಯಿಕ ವರ್ಣಚಿತ್ರಗಳಾಗಿವೆ. ಈಗಾಗಲೇ ಚಿತ್ರಕಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ವರ್ಣಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಸಿದ್ದಾರೆ ಎಂದು ವಿಠಲ್‌ ತಿಳಿಸಿದರು.

ಚಿನ್ನದ ಲೇಪನದ ಶ್ರೀಮಂತಿಕೆ: ಕೆಲ ವರ್ಣಚಿತ್ರಗಳು ಬಂಗಾರದ ಲೇಪನದೊಂದಿಗೆ ಶ್ರೀಮಂತಿಕೆಯಿಂದ ನಳನಳಿಸುತ್ತಿವೆ. ಇಂಥ ಚಿನ್ನದ ಲೇಪನ ರಾಮನ ಪಟ್ಟಾಭಿಷೇಕದ ವರ್ಣ ಚಿತ್ರಕ್ಕೂ ಇದ್ದು, ಇದರ ಬೆಲೆ 5 ಲಕ್ಷ ರೂ! ಮೇಳದಲ್ಲಿರುವ ವರ್ಣಚಿತ್ರಗಳ ಬೆಲೆ 3 ಲಕ್ಷ ರೂ.ಗಳಿಂದ ಆರಂಭವಾಗಲಿದ್ದು, 30 ಲಕ್ಷ ರೂ.ವರೆಗಿನ ಚಿತ್ರಗಳನ್ನು ಇಲ್ಲಿ ಕಾಣಬಹುದು.

“ಕಳೆದ ಬಾರಿ ಆಯೋಜಿಸಿದ್ದ ಮೇಳದಲ್ಲಿ ಒಂದೂ ವರ್ಣಚಿತ್ರ ಮಾರಾಟವಾಗದೆ ನಿರಾಶೆ ಅನುಭವಿಸಿದ್ದೆವು. ಆದರೆ ಈ ಬಾರಿ ಹಾಗಾಗುವುದಿಲ್ಲ ಎಂಬ ನಂಬಿಕೆಯೊಂದಿಗೆ ಮತ್ತೂಮ್ಮೆ ಮೇಳ ಆಯೋಜಿಸಲಾಗಿದೆ,’ ಎಂದು ಆಯೋಜಕ ವಿಠಲ್‌ ವಿಶ್ವಾಸ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್‌

US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್‌

Test Series: ಇಂದಿನಿಂದ ‘ಎ’ ತಂಡಗಳ ದ್ವಿತೀಯ ಟೆಸ್ಟ್: ಎಲ್ಲರ ಗಮನ ರಾಹುಲ್ ಮೇಲೆ

Test Series: ಇಂದಿನಿಂದ ‘ಎ’ ತಂಡಗಳ ದ್ವಿತೀಯ ಟೆಸ್ಟ್: ಎಲ್ಲರ ಗಮನ ರಾಹುಲ್ ಮೇಲೆ

Belagavi-SDA-Suside

Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್‌ ಪತ್ತೆ: ಪೊಲೀಸರಿಂದ ತನಿಖೆ ಚುರುಕು

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

2-kalburgi

Kalaburagi: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ

HDK-Court

FIR Petition: ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಕರಾವಳಿ ಭತ್ತಕ್ಕೆ ಖಾಸಗಿ ಬೆಂಬಲ ಬೆಲೆ! ಅಕ್ಕಿ ಮಿಲ್‌ ಜತೆ ಜಿಲ್ಲಾಡಳಿತ ಮಧ್ಯಸ್ಥಿಕೆ

Udupi: ಕರಾವಳಿ ಭತ್ತಕ್ಕೆ ಖಾಸಗಿ ಬೆಂಬಲ ಬೆಲೆ! ಅಕ್ಕಿ ಮಿಲ್‌ ಜತೆ ಜಿಲ್ಲಾಡಳಿತ ಮಧ್ಯಸ್ಥಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BMTC-Driver-New

BMTC: ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ; ಪ್ರಯಾಣಿಕರ ರಕ್ಷಿಸಿದ ನಿರ್ವಾಹಕ!

7-

ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Crime: ಶೀಲ ಶಂಕಿಸಿ ಪತ್ನಿ  ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್‌

US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್‌

Test Series: ಇಂದಿನಿಂದ ‘ಎ’ ತಂಡಗಳ ದ್ವಿತೀಯ ಟೆಸ್ಟ್: ಎಲ್ಲರ ಗಮನ ರಾಹುಲ್ ಮೇಲೆ

Test Series: ಇಂದಿನಿಂದ ‘ಎ’ ತಂಡಗಳ ದ್ವಿತೀಯ ಟೆಸ್ಟ್: ಎಲ್ಲರ ಗಮನ ರಾಹುಲ್ ಮೇಲೆ

Belagavi-SDA-Suside

Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್‌ ಪತ್ತೆ: ಪೊಲೀಸರಿಂದ ತನಿಖೆ ಚುರುಕು

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

2-kalburgi

Kalaburagi: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.