ರಾಜ್ಯ ಬಿಜೆಪಿಯಲ್ಲಿ ಹೊಸ ಬಿಕ್ಕಟ್ಟು
Team Udayavani, Jan 14, 2017, 3:50 AM IST
ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ್ದ ಬಿಕ್ಕಟ್ಟು ಮುಂದುವರೆದ ಬೆನ್ನಲ್ಲೇ ಮತ್ತೂಂದು ಭಿನ್ನಮತದ ಧ್ವನಿ ಕೇಳಿಬಂದಿದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಒಟ್ಟಾರೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಲವು ಹಾಲಿ ಮತ್ತು ಮಾಜಿ ಶಾಸಕರನ್ನು ಒಳಗೊಂಡಂತೆ 24 ಮಂದಿ ಮುಖಂಡರು ತೀಕ್ಷ್ಣವಾಗಿ ಪತ್ರ ಬರೆದಿದ್ದಾರೆ.
“ಪ್ರಸಕ್ತ ಬೆಳವಣಿಗೆಗಳಿಂದಾಗಿ ಪಕ್ಷದ ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ಪಕ್ಷದಲ್ಲೇ ಎರಡು ಗುಂಪುಗಳಾಗಿವೆ. ಪರಸ್ಪರರು ಮುಖ ನೋಡದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ದುಷ್ಪರಿಣಾಮ ಉಂಟಾಗಲಿದೆ’ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಸಂಘಟನೆಯಲ್ಲಾಗಿರುವ ಗೊಂದಲಗಳ ಕುರಿತು ಚರ್ಚಿಸಲು ಸಮಯಾವಕಾಶ ಕೇಳಿ ಹಿಂದೆಯೇ ಬರೆದಿದ್ದ ಪತ್ರಕ್ಕೆ ಯಡಿಯೂರಪ್ಪ ಅವರಿಂದ ಯಾವುದೇ ಉತ್ತರ ಬರದೇ ಇದ್ದುದರಿಂದ ಗುರುವಾರ ಮತ್ತೂಂದು ಪತ್ರ ಬರೆಯಲಾಗಿದೆ. ಪತ್ರ ಬರೆದ ಮುಖಂಡರಲ್ಲಿ ಬಹುತೇಕರು ಸಂಘ ಪರಿವಾರದ ಹಿನ್ನೆಲೆಯುಳ್ಳ ನಿಷ್ಠಾವಂತರು ಎನ್ನುವುದು ಗಮನಾರ್ಹ.
ಹಿಂದೆ ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಆಗಿರುವ ತಾರತಮ್ಯ, ಆಗಿರುವ ನೇಮಕಗಳನ್ನು ಪರಾಮರ್ಶಿಸಿ ಸಂಘಟನೆಯಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವವರಿಗೆ ಸ್ಥಾನಮಾನ ನೀಡಬೇಕು, ಹಲವು ಮುಖಂಡರಿಗೆ ನೀಡಿರುವ ಶಿಸ್ತುಕ್ರಮದ ನೋಟಿಸ್ ವಾಪಸ್ ಪಡೆಯಬೇಕು ಎಂಬ ಬೇಡಿಕೆಗಳ ಜತೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷದ ಬರ ಅಧ್ಯಯನ ತಂಡದಿಂದ ಕೈಬಿಟ್ಟಿರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಅಲ್ಲದೆ, “ಪಕ್ಷಕ್ಕಾಗಿ ತ್ಯಾಗ ಮಾಡಿ ಅದರ ಏಳಿಗೆಗಾಗಿ ಕೆಲಸ ಮಾಡಿರುವ ಹಿರಿಯರು ಹಾಗೂ ಪರಿವಾರದ ಪ್ರಮುಖರು ಈಗ ಪಕ್ಷದಲ್ಲಿ ಉಂಟಾಗಿರುವ ಬೆಳವಣಿಗೆಗಳಿಂದ ನೊಂದಿದ್ದಾರೆ. ಅವರೆಲ್ಲರ ಅಪೇಕ್ಷೆಯಂತೆ ಸಂಘಟನೆಯ ಬೆಳವಣಿಗೆ ಆಗಬೇಕು. ರಾಜ್ಯದ ಎಲ್ಲ ಕಾರ್ಯಕರ್ತರು ಒಗ್ಗೂಡಿ ಒಮ್ಮಸ್ಸಿನಿಂದ ಪಕ್ಷದ ಸಂಘಟನೆಯ ಕಾರ್ಯಕ್ಕೆ ಧುಮುಕಲು ನಾವು ಪ್ರಸ್ತಾಪಿಸಿರುವ ಸಂಗತಿಗಳ ಬಗ್ಗೆ ಶೀಘ್ರ ಗಮನಹರಿಸಬೇಕು’ ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ.
ವಿಧಾನಪರಿಷತ್ತಿನ ಹಾಲಿ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ರಘುನಾಥರಾವ್ ಮಲ್ಕಾಪುರೆ, ಸೋಮಣ್ಣ ಬೇವಿನಮರದ, ಮಾಜಿ ಸದಸ್ಯರಾದ ಅಶ್ವಥ್‌ನಾರಾಯಣ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಸಿದ್ದರಾಜು, ನಾರಾಯಣಸಾ ಭಾಂಡಗೆ, ವಿಧಾನಸಭೆಯ ಹಾಲಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸದಸ್ಯರಾದ ನಿರ್ಮಲ್‌ಕುಮಾರ್ ಸುರಾನಾ, ಎಸ್.ಎ.ರವೀಂದ್ರನಾಥ್, ಸೊಗಡು ಶಿವಣ್ಣ, ಬಸವರಾಜ ನಾಯ್ಕ, ಎಂ.ಎಸ್.ಸೋಮಲಿಂಗಪ್ಪ, ನೇಮಿರಾಜ ನಾಯ್ಕ, ಜಗದೀಶ್ ಮೆಟಗುಡ್, ಶ್ರೀಕಾಂತ್ ಕುಲಕರ್ಣಿ, ಬಸವರಾಜ ಮಂಡಿಮಠ ಮೊದಲಾದವರ ಹೆಸರುಗಳು ಪತ್ರದಲ್ಲಿವೆ.
ಪತ್ರ ಬರೆದವರ ಪಟ್ಟಿಯಲ್ಲಿ ಹಲವು ಮಾಜಿ ಸಚಿವರು, ಹಾಲಿ ಮತ್ತು ಮಾಜಿ ರಾಜ್ಯ ಪದಾಧಿಕಾರಿಗಳಿದ್ದಾರೆ. ಅಲ್ಲದೆ, ಅನೇಕರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಯಡಿಯೂರಪ್ಪ ಅವರ ನಾಯಕತ್ವಕ್ಕೆ ಪರೋಕ್ಷವಾಗಿ ಸವಾಲೊಡ್ಡಿರುವ ಈಶ್ವರಪ್ಪ ಅವರ ಆಪ್ತರು ಎನ್ನುವುದೂ ಮುಖ್ಯವಾದ ಅಂಶ.
ಪತ್ರದಲ್ಲಿ 24 ಮುಖಂಡರ ಹೆಸರುಗಳಿದ್ದು, 16 ಮಂದಿ ಸಹಿ ಮಾಡಿದ್ದಾರೆ. ಉಳಿದವರು ಊರಿನಲ್ಲಿ ಇರಲಿಲ್ಲ. ಅವರ ಒಪ್ಪಿಗೆ ಬಳಿಕವೇ ಪತ್ರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪತ್ರ ಶುಕ್ರವಾರ ಬೆಳಗ್ಗೆ ಅನಧಿಕೃತವಾಗಿ ಮಾಧ್ಯಮಗಳಿಗೆ ಬಿಡುಗಡೆಗೊಂಡ ಬೆನ್ನಲ್ಲೇ ಇಂಥದೊಂದು ಪತ್ರ ರಾಜ್ಯಾಧ್ಯಕ್ಷರಿಗೆ ತಲುಪಿಯೇ ಇಲ್ಲ ಹಾಗೂ ಬಿಡುಗಡೆ ಮಾಡಿರುವ ಪತ್ರದಲ್ಲಿ ಯಾವುದೇ ಮುಖಂಡರ ಸಹಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಗೋ.ಮಧುಸೂದನ್ ಪತ್ರಿಕಾ ಹೇಳಿಕೆ ನೀಡಿದರು. ಅಲ್ಲದೆ, ಇದೊಂದು ಕಿಡಿಗೇಡಿಗಳ ಕೃತ್ಯ ಎಂದು ಲೇವಡಿ ಮಾಡಿದರು.
ಮಧುಸೂದನ್ ಹೇಳಿಕೆ ನೀಡಿದ ಕೆಲಹೊತ್ತಿನಲ್ಲೇ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಅವರು ತುರ್ತು ಪತ್ರಿಕಾಗೋಷ್ಠಿ ಕರೆದು, ಇದು ಕಿಡಿಗೇಡಿಗಳ ಕೃತ್ಯವಲ್ಲ. ಪತ್ರ ಬರೆದದ್ದು ಸತ್ಯ. ಬಿಜೆಪಿ ಕಾರ್ಯಾಲಯಕ್ಕೆ ಪತ್ರ ನೀಡಲಾಗಿದೆ ಎಂದು ಕಡ್ಡಿ ಮುರಿದಂತೆ ತಿಳಿಸಿದರು.
ಪತ್ರದಲ್ಲೇನಿದೆ?
1. ಪದಾಧಿಕಾರಿಗಳ ನೇಮಕದಲ್ಲಿ ಏಕಪಕ್ಷೀಯ ನಿರ್ಧಾರ ಮಾಡಿದ್ದೀರಿ
2. ಪಕ್ಷದ ಕೋರ್ ಕಮಿಟಿ ಯನ್ನು ವಿಶ್ವಾಸಕ್ಕೇ ತೆಗೆದುಕೊಂಡಿಲ್ಲ
3. 10-20 ವರ್ಷಗಳ ಕಾಲದುಡಿದವರನ್ನು ಮೂಲೆ ಗುಂಪು ಮಾಡಿದ್ದೀರಿ
4. ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ಪಕ್ಷ ಎರಡುಗುಂಪಾಗಿದೆ
5. ಈಶ್ವರಪ್ಪ ಅವರನ್ನು ಬರ ಅಧ್ಯಯನ ತಂಡದಿಂದ ಕೈಬಿಟ್ಟಿದ್ದು ಸರಿ ಅಲ್ಲ.
ಅಮಿತ್ ಶಾಗೇ ದೂರಲಿ
ನನ್ನ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಎಂಎಲ್‌ಸಿ ಭಾನುಪ್ರಕಾಶ್ ಸೇರಿ ಕೆಲವರು ಬರೆದಿದ್ದಾರೆನ್ನಲಾದ ಪತ್ರ ನನಗೆ ಬಂದಿಲ್ಲ. ಪತ್ರ ಬರೆದಿದ್ದರೂ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಸರಿಯಲ್ಲ.ಏನಿದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಪದಾಧಿಕಾರಿಗಳ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ. ಬೇಕಾದರೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಳಿ ತಮ್ಮ ದೂರನ್ನು ಹೇಳಿಕೊಳ್ಳಲಿ. ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ ಹಾಗೂ ಅವ್ವಣ್ಣ ಮ್ಯಾಕೇರಿ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದು ಏಕಪಕ್ಷೀಯ ನಿರ್ಧಾರವಲ್ಲ. ಶಿಸ್ತು ಸಮಿತಿಯ ತೀರ್ಮಾನ.
– ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
MUST WATCH
ಹೊಸ ಸೇರ್ಪಡೆ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.