BBMP Ward: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 225ಕ್ಕೆ ನಿಗದಿ
Team Udayavani, Sep 26, 2023, 10:24 AM IST
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ವಿಂಗಡಣೆ ಅಂತಿಮ ಪಟ್ಟಿಯನ್ನು ರಾಜ್ಯ ಸರ್ಕಾರ ಸೋಮವಾರ ಪ್ರಕಟಿಸಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 243 ವಾರ್ಡ್ ಗಳನ್ನಾಗಿ ವಿಂಗಡಿಸಗಿತ್ತು.ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಚಿಸಲಾಗಿದ್ದ ಸಮಿತಿ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಇಳಿಸಿತ್ತು. ಬಿಬಿಎಂಪಿಯ 225 ವಾರ್ಡ್ ಮರು ವಿಂಗಡಣೆ ಸಂಬಂಧಿಸಿದಂತೆ ಸಲ್ಲಿಕೆಯಾದ ಆಕ್ಷೇಪಣೆಗಳ ಪರಿಶೀಲನಾ ಕಾರ್ಯ ಪೂರ್ಣ ಗೊಂಡಿದ್ದು, ಸರ್ಕಾರ ಇದೀಗ ಅಂತಿಮ ವಾರ್ಡ್‌ಗಳ ಪಟ್ಟಿಯನ್ನ ಅಂತಿಮಗೊಳಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ಆ.18ರಂದು ವಾರ್ಡ್ ಮರುವಿಂಗಡನೆಯ ಕರಡು ಪಟ್ಟಿಯನ್ನು ಪ್ರಕಟಿಸಿದ್ದ ಸರ್ಕಾರ, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿತ್ತು. ಬಿಬಿಎಂಪಿ ಸದಸ್ಯರ ಅಧಿಕಾರಾವಧಿ 2020ರ ಸೆಪ್ಟೆಂಬರ್‌ನಲ್ಲಿಯೇ ಮುಗಿದಿದೆ. ಅಲ್ಲಿಂದ ಇಲ್ಲಿಯವರೆಗೂ ಸರ್ಕಾರ ಬಿಬಿಎಂಪಿಗೆ ಚುನಾ ವಣೆಯನ್ನೇ ನಡೆಸುವ ಗೋಜಿಗೆ ಹೋಗಿಲ್ಲ. ಈ ಹಿಂದೆ 198 ವಾರ್ಡ್‌ಗಳಿಗೆ ಚುನಾವಣೆ ನಡೆ ಯುತ್ತಿತ್ತು. ಈಗ ಅದು 225 ಆಗಿದ್ದು, ಡಿಸೆಂಬರ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಬಿಬಿಎಂಪಿ ಹೊಸ ವಾರ್ಡ್‌ಗಳ ಪಟ್ಟಿ: ಕೆಂಪೇಗೌಡ, ಚೌಡೇಶ್ವರಿ, ಅಟ್ಟೂರು, ಯಲಹಂಕ ಸ್ಯಾಟಲೈಟ್ ಟೌನ್, ಕೋಗಿಲು, ಜಕ್ಕೂರು, ಥಣಿಸಂದ್ರ, ಅಮೃತಹಳ್ಳಿ, ಹೆಬ್ಟಾಳ ಕೆಂಪಾಪುರ, ಬ್ಯಾಟರಾಯನಪುರ, ಕೊಡಿಗೇಹಳ್ಳಿ, ದೊಡ್ಡ ಬೊಮ್ಮ ಸಂದ್ರ, ವಿದ್ಯಾರಣ್ಯಪುರ, ಕುವೆಂಪು ನಗರ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಚಿಕ್ಕಸಂದ್ರ, ಬಾಗಲಗುಂಟೆ, ಟಿ.ದಾಸರಹಳ್ಳಿ, ನೆಲಗದ ರನಹಳ್ಳಿ ,ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ, ರಾಜಗೋಪಾ ಲನಗರ, ಹೆಗ್ಗನಹಳ್ಳಿ, ಸುಂಕದಕಟ್ಟೆ, ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಹೇರೋಹಳ್ಳಿ, ಉಲ್ಲಾಳು, ನಾಗದೇವನಹಳ್ಳಿ. ಬಂಡೆಮಠ, ಕೆಂಗೇರಿ, ಹೆಮ್ಮಿಗೆಪುರ, ಜೆ.ಪಿ.ಪಾರ್ಕ್, ಯಶವಂತಪುರ, ಜಾಲಹಳ್ಳಿ, ಪೀಣ್ಯ,ಲಕ್ಷ್ಮೀದೇವಿ ನಗರ, ಲಗ್ಗೆರೆ, ಚೌಡೇಶ್ವರಿ ನಗರ, ಕೊಟ್ಟಿಗೆಪಾಳ್ಯ, ಶ್ರೀಗಂಧ ಕಾವಲ್, ಮಲ್ಲತ್ತಹಳ್ಳಿ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ರಾಜೀವ್ ನಗರ, ಡಾ.ಪುನೀತ್ ರಾಜ್‌ಕುಮಾರ್, ಮಹಾಲಕ್ಷ್ಮೀಪುರ, ನಾಗಾಪುರ, ನಾಲ್ವಡಿ ಕೃಷ್ಣರಾಜ ಒಡೆಯರ್, ಶಂಕರ ಮಠ. ಶಕ್ತಿಗಣಪತಿ ನಗರ, ವೃಷಭಾವತಿನಗರ, ಮತ್ತಿಕೆರೆ, ಮಲ್ಲೇಶ್ವರ, ಅರಮನೆ ನಗರ, ರಾಜಮಹಲ್ ಗುಟ್ಟಹಳ್ಳಿ, ಕಾಡುಮಲ್ಲೇಶ್ವರ, ಸುಬ್ರಹ್ಮಣ್ಯನಗರ, ಗಾಯಿತ್ರಿ ನಗರ, ರಾಧಾಕೃಷ್ಣ ದೇವಸ್ಥಾನ, ಸಂಜಯ ನಗರ, ಹೆಬ್ಟಾಳ, ವಿಶ್ವನಾಥ್ ನಾಗೇನಹಳ್ಳಿ, ಮನೋರಾಯನಪಾಳ್ಯ, ಚಾಮುಂಡಿ ನಗರ, ಗಂಗಾ ನಗರ, ಜಯಚಾಮರಾಜೇಂದ್ರ ನಗರ, ಕಾವಲ್ ಬೈರಸಂದ್ರ. ಕುಶಾಲ್ ನಗರ, ಮುನೇಶ್ವರನಗರ, ದೇವರಜೀವನಹಳ್ಳಿ,ಎಸ್. ಕೆ. ಗಾರ್ಡನ್, ಸಗಾಯಪುರ, ಪುಲಿಕೇಶಿ ನಗರ, ಹೆಣ್ಣೂರು, ನಾಗವಾರ , ಎಚ್‌ಬಿಆರ್ ಲೇಔಟ್, ಕಾಡುಗೊಂಡನಹಳ್ಳಿ, ಕಾಚರಕನಹಳ್ಳಿ, ಕಮ್ಮನಹಳ್ಳಿ, ಬಾಣಸವಾಡಿ, ಸುಬ್ಬಯ್ಯನ ಪಾಳ್ಯ,ಲಿಂಗರಾಜಪುರ, ಮಾರುತಿ ಸೇವಾ ನಗರ, ಚಳ್ಳಕೆರೆ, ಹೊರಮಾವು, ಕಲ್ಕೆರೆ, ವಿಜಿನಾಪುರ, ರಾಮಮೂರ್ತಿನಗರ,ಕೆ.ಆರ್. ಪುರಂ, ಬಸವನಪುರ. ದೇವಸಂದ್ರ, ಎ.ನಾರಾಯಣಪುರ, ವಿಜ್ಞಾನ ನಗರ, ಎಚ್ ಎಎಲ್ ವಿಮಾನ ನಿಲ್ದಾಣ, ಕಾಡುಗೋಡಿ, ಹೂಡಿ, ಬೈರತಿ, ಗರುಡಾ ಚಾರ್ ಪಾಳ್ಯ, ದೊಡ್ಡ ನೆಕ್ಕುಂದಿ, ಎಇಸಿಎಸ್ ಬಡಾವಣೆ,ವೈಟ್ ಫಿಲ್ಡ್, ವರ್ತೂರು, ಮುನ್ನೆಕೊಳಲು, ಮಾರತ್ತಹಳ್ಳಿ, ಬೆಳ್ಳಂದೂರು, ಕಾಕ್ಸ್ ಟೌನ್, ಬೆನ್ನಿಗಾನಹಳ್ಳಿ, ಸಿ.ವಿ ರಾಮನ್ ನಗರ, ಕಗ್ಗದಾಸನಪುರ, ಹೊಸ ತಿಪ್ಪಸಂದ್ರ, ಹೊಯ್ಸಳ ನಗರ, ಜೀವನಬಿಮಾ ನಗರ, ಕೊನೇನ ಅಗ್ರಹಾರ, ರಾಮಸ್ವಾಮಿ ಪಾಳ್ಯ. ವಸಂತ ನಗರ, ಸಂಪಗಿ ರಾಮನಗರ, ಶಿವಾಜಿ ನಗರ, ಭಾರತಿ ನಗರ, ಹಲಸೂರು, ದತ್ತಾತ್ರೇಯ ದೇವಸ್ಥಾನ, ಗಾಂಧಿ ನಗರ, ಸುಭಾಷ್ ನಗರ, ಒಕಳೀಪುರಂ, ಬಿನ್ನಿಪೇಟೆ, ಕಾಟನ್‌ಪೇಟೆ, ಚಿಕ್ಕಪೇಟೆ, ದಯಾನಂದ ನಗರ, ಶ್ರೀರಾಮ ಮಂದಿರ, ಶಿವನಗರ,ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಡಾ. ರಾಜ್ ಕುಮಾರ್ ಅಗ್ರಹಾರ ದಾಸರಹಳ್ಳಿ, ಗೋವಿಂದರಾಜ ನಗರ, ಮಾರೇನಹಳ್ಳಿ, ಕಾವೇರಿ ಪುರ, ಮೂಡಲಪಾಳ್ಯ, ಮಾರುತಿ ಮಂದಿರ ವಾರ್ಡ್. ನಾಗರಬಾವಿ, ಚಂದ್ರಾ ಲೇಔಟ್, ನಾಯಂಡಹಳ್ಳಿ, ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಹಂಪಿ ನಗರ, ಹೊಸ ಗುಡ್ಡದಹಳ್ಳಿ, ಗಾಳಿ ಆಂಜನೇಯ ದೇವಸ್ಥಾನ ವಾರ್ಡ್, ಅತ್ತಿಗುಪ್ಪೆ, ದೀಪಾಂಜಲಿ ನಗರ, ಅವಲಹಳ್ಳಿ, ಪಾದರಾಯನಪುರ, ರಾಯಪುರಂ, ದೇವರಾಜ ಅರಸು ನಗರ, ಚಲವಾದಿಪಾಳ್ಯ, ಕೆ ಆರ್. ಮಾರುಕಟ್ಟೆ, ಚಾಮರಾಜಪೇಟೆ,ಅಜಾದ್‌ನಗರ. ಧರ್ಮರಾಯಸ್ವಾಮಿ ದೇವಸ್ಥಾನ, ಸಿಲ್ವರ್ ಜ್ಯೂಬಿಲಿ ಪಾರ್ಕ್, ಸುಂಕೇನಹಳ್ಳಿ, ವಿಶ್ವೇಶ್ವರಪುರಂ, ಹೊಂಬೇಗೌಡನಗರ, ಬಿ.ವೆಂಕಟರೆಡ್ಡಿನಗರ, ಶಾಂತಿನಗರ, ಅಶೋಕ ನಗರ, ನೀಲಸಂದ್ರ, ವನ್ನಾರ್‌ಪೇಟೆ, ಜೋಗುಪಾಳ್ಯ, ದೊಮ್ಮಲೂರು, ಅಗರಂ, ಈಜಿಪುರ, ಕೋರಮಂಗಲ, ಜಕ್ಕಸಂದ್ರ, ಆಡುಗೋಡಿ, ಲಕ್ಕಸಂದ್ರ, ಸುದ್ದಗುಂಟೆಪಾಳ್ಯ, ಮಡಿವಾಳ, ಸೋಮೇಶ್ವರ ದೇವಸ್ಥಾನ, ಬಿಟಿಎಂ ಲೇಔಟ್, ಭೈರಸಂದ್ರ,ಗುರಪ್ಪನಪಾಳ್ಯ, ಜಯನಗರ ಪೂರ್ವ. ಜೆ.ಪಿ.ನಗರ, ಶಾಕಾಂಬರಿನಗರ, ಸಾರಕ್ಕಿ, ಯಡಿಯೂರು, ಗಣೇಶ ಮಂದಿರ, ದೇವಗಿರಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಕಲ್ಲಸಂದ್ರ, ಹೊಸಕೆರೆಹಳ್ಳಿ, ಗವಿಗಂಗಾಧರೇಶ್ವರ ದೇವಸ್ಥಾನ, ಶ್ರೀನಗರ, ದೊಡ್ಡಗಣಪತಿ ದೇವಸ್ಥಾನ, ವಿದ್ಯಾಪೀಠ, ಸ್ವಾಮಿ ವಿವೇಕಾನಂದ, ಕತ್ರಿಗುಪ್ಪೆ, ಉತ್ತರಹಳ್ಳಿ, ಸುಬ್ರಮಣ್ಯಪುರ, ವಸಂತಪುರ, ಯಲಚೇನಹಳ್ಳಿ, ಕೋಣನಕುಂಟೆ, ಆರ್.ಬಿ.ಐ ಲೇಔಟ್, ಅಂಜನಾಪುರ. ಗೊಟ್ಟಿಗೆರೆ, ಕಾಳೇನ ಅಗ್ರಹಾರ, ಬೇಗೂರು, ನಾಗನಾಥಪುರ, ಜರಗನಹಳ್ಳಿ, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಹುಳಿಮಾವು, ಕೋಡಿಚಿಕ್ಕನಹಳ್ಳಿ,ಬೊಮ್ಮನಹಳ್ಳಿ, ಹೊಂಗಸಂದ್ರ, ಗಾರೆಬಾವಿ ಪಾಳ್ಯ, ಎಚ್‌ಎಸ್‌ಆರ್ ಲೇಔಟ್,ಇಬ್ಬಲೂರು, ಮಂಗಮ್ಮನ ಪಾಳ್ಯ, ಹೊಸ ರಸ್ತೆ ಮತ್ತು ಕೂಡ್ಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.