ಸಿಕ್ಕಿಬಿದ್ದರು ಆನ್‌ಲೈನ್‌ ದರೋಡೆಕೋರರು


Team Udayavani, Jul 16, 2017, 11:23 AM IST

online-theft.jpg

ಬೆಂಗಳೂರು: ಬ್ಯಾಂಕ್‌ ಗ್ರಾಹಕರ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದು ಆನ್‌ಲೈನ್‌ ಮೂಲಕ ಹಣ ದೋಚುತ್ತಿದ್ದ ಎಟಿಎಂ ಕಳ್ಳರ ತಂಡವೊಂದು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ಅಚ್ಚರಿಯ ಸಂಗತಿ ಎಂದರೆ, ಈ ದುಷ್ಕರ್ಮಿಗಳು ವಂಚಿಸಿರುವುದೆಲ್ಲ ವಿದೇಶಿಯರಿಗೆ! ಇವರ ಈ ಕೃತ್ಯದಲ್ಲಿ ಕಾರ್ಡ್‌ ಸ್ವೆ„ಪಿಂಗ್‌ ಮಷಿನ್‌ ಹೊಂದಿರುವ ಕೆಲವು ಅಂಗಡಿ ಮಾಲೀಕರೂ ಕೈಜೋಡಿಸಿದ್ದಾರೆ.

ವಿದೇಶಿಗರಿಗೆ ವಂಚಿಸಿರುವ ಈ ಕಳ್ಳರ ಪಡೆ ಸಿಕ್ಕಿಬಿದ್ದಿದ್ದು ಮಾತ್ರ ನಗರದಲ್ಲಿ ಟಿ.ವಿ ಖರೀದಿಸುವಾಗ ಮಾಡಿದ ಅಕ್ರಮದಲ್ಲಿ. ಶ್ರೀಲಂಕಾದ ಜಾಫಾ° ಮೂಲದ ದಿವ್ಯನ್‌ (31), ಬೆಂಗಳೂರಿನ ಕನಕನಗರ ನಿವಾಸಿ ನವಾಜ್‌ ಶರೀಫ್‌ (22), ಎಚ್‌ಬಿಆರ್‌ ಲೇಔಟ್‌ನ ನದೀಮ್‌ ಷರೀಫ್‌ (30) ಬಂಧಿತರು. 

ಆರೋಪಿಗಳಿಂದ ವಿವಿಧ ಬ್ಯಾಂಕ್‌ಗಳ 144 ನಕಲಿ ಎಟಿಎಂ ಕಾರ್ಡ್‌ಗಳು, 36 ಕಾರ್ಡ್‌ ಸ್ವೆ„ಪಿಂಗ್‌ ಮಿಷನ್‌ಗಳು, 16 ನಕಲಿ ಚಾಲನಾ ಪರವಾನಗಿಗಳು, ಒಂದು ಕಾರ್ಡ್‌ ರೀಡರ್‌, ಲ್ಯಾಮಿನೇಷನ್‌, ಕಾರ್ಡ್‌ ಪ್ರಿಂಟಿಂಗ್‌ ಮೆಷಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಅಂತಾರಾಷ್ಟ್ರೀಯ ಹ್ಯಾಕರ್‌ಗಳು ಮತ್ತು ಹೊರರಾಜ್ಯಗಳಲ್ಲಿರುವ ಏಜೆಂಟರುಗಳು ಮತ್ತು ಅಂಗಡಿ ಮಾಲೀಕರ ನೆರವಿನೊಂದಿಗೆ ಈ ಕೃತ್ಯವೆಸಗುತ್ತಿದ್ದರು. ಬರುವ ಹಣವನ್ನು ಎಲ್ಲರೂ ಸೇರಿ ಹಂಚಿಕೊಳ್ಳುತ್ತಿದ್ದರು. ಸ್ವೆ„ಪಿಂಗ್‌ ಮಾಡಿಸಿಕೊಂಡು ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದ ಅಂಗಡಿ ಮಾಲೀಕರಿಗೆ ಪರ್ಸೆಂಟೇಜ್‌ ಲೆಕ್ಕದಲ್ಲಿ ಹಣ ನೀಡುತ್ತಿದ್ದರು. 

ಮೂವರು ಆರೋಪಿಗಳ ಪೈಕಿ ದಿವ್ಯನ್‌ ಎಂಬಾತ ತನ್ನ ಸ್ನೇಹಿತ ಟಾಮ್‌ಜೋ ಎಂಬಾತನ ಹೆಸರಿನಲ್ಲಿ ಜಾಲಹಳ್ಳಿಯ ಪ್ರಸ್ಟೀಜ್‌ ಕಾಲಿಂಗ್‌ವುಡ್‌ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ವೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ. ನಕಲಿ ಕಾರ್ಡ್‌ಗಳ ಮೂಲಕ ವಂಚಿಸಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪ್ರವೀಣ್‌ ಸೂದ್‌ ತಿಳಿಸಿದರು.

ಹೇಗೆ ನಡೆಯುತ್ತಿತ್ತು ಲೂಟಿ ?: ಆರೋಪಿಗಳು ಅಮೆರಿಕಾ, ಜಪಾನ್‌ ಸೇರಿದಂತೆ ವಿದೇಶಗಳಲ್ಲಿನ ಕ್ರೆಡಿಟ್‌ ಕಾರ್ಡ್‌ದಾರರ ರಹಸ್ಯ ಮಾಹಿತಿಯನ್ನು ಹ್ಯಾಕರ್ಸ್‌ಗಳಿಂದ ಪಡೆದುಕೊಳ್ಳುತ್ತಿದ್ದರು. ಬಳಿಕ ಅಮೆಜಾನ್‌, ಆಲಿಬಾಬಾ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಮ್ಯಾಗ್ನೆಟಿಕ್‌ ಸ್ವೆ„ಪಿಂಗ್‌ ಕಾರ್ಡ್‌ಗಳನ್ನು ಖರೀದಿಸುತ್ತಿದ್ದರು. ಹ್ಯಾಕರ್‌ಗಳಿಂದ ಪಡೆದ ಡೇಟಾಗಳನ್ನು ಮ್ಯಾಗ್ನೆಟಿಕ್‌ ಸ್ವೆ„ಪಿಂಗ್‌ ಮಿಷನ್‌ ಮುಖಾಂತರ ಖಾಲಿ ಕಾರ್ಡ್‌ಗಳಿಗೆ ವರ್ಗಾವಣೆ ಮಾಡುತ್ತಿದ್ದರು. ನಂತರ ಕ್ರೆಡಿಟ್‌ ಕಾರ್ಡ್‌ಗಳ ಮಾದರಿಯನ್ನು ಸಿದ್ದಪಡಿಸಿ, ಎಂಬೋಸ್‌ ಮಿಷನ್‌ (ಉಬ್ಬಿಸುವ ಯಂತ್ರ) ಮೂಲಕ ಕಾರ್ಡ್‌ ನಂಬರ್‌ ಮತ್ತು ಹೆಸರುಗಳನ್ನು ಎಂಬೋಸ್‌ ಮಾಡುತ್ತಿದ್ದರು. 

ನಂತರ ಪುದುಚೇರಿ, ಹರಿಯಾಣ, ಮುಂಬೈ ಇತ್ಯಾದಿ ನಗರಗಳಲ್ಲಿನ ಏಜೆಂಟ್‌ಗಳ ಮೂಲಕ ಅಂಗಡಿಗಳಲ್ಲಿ ಉಪಯೋಗಿಸುತ್ತಿರುವ ಇಂಟರ್‌ ನ್ಯಾಷನಲ್‌ ಕ್ರೆಡಿಟ್‌ ಕಾರ್ಡ್‌ ಸ್ಪೈಪಿಂಗ್‌ ಮಿಷನ್‌ಗಳನ್ನು ತರಿಸಿಕೊಂಡು ಅವುಗಳ ಮೂಲಕ ತಮ್ಮ ನಕಲಿ ಕಾರ್ಡ್‌ಗಳನ್ನು ಸ್ವೆ„ಪ್‌ ಮಾಡಿ ಹಣ ವರ್ಗಾಯಿಸಿಕೊಳ್ಳುತ್ತಿದ್ದರು. ಅದರ ಹಣವು ಸ್ಪೈಪ್‌ ಮಿಷನ್‌ ಪಡೆದಿರುವ ಅಂಗಡಿ ಮಾಲೀಕರ ಖಾತೆಗೆ ಜಮೆಯಾಗುತ್ತಿತ್ತು. ಹೀಗೆ ಅಂಗಡಿ ಮಾಲೀಕರ ಖಾತೆಗೆ ಜಮೆಯಾದ ಹಣದ ಪೈಕಿ ಶೇ. 20ರಷ್ಟನ್ನು ಏಜೆಂಟರ್‌ಗಳಿಗೆ ನೀಡಿ ಮಿಕ್ಕ ಹಣವನ್ನು ಆರೋಪಿಗಳು ಪಡೆಯುತ್ತಿದ್ದರು. 

ವಂಚನೆಯೇ ಇವರ ಅಭ್ಯಾಸ: ಆರೋಪಿಗಳ ಪೈಕಿ ಶ್ರೀಲಂಕಾದ ದಿವ್ಯನ್‌ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ. ಚೆನ್ನೈನಲ್ಲಿ ನೆಲೆಸಿದ್ದ ಆತ ಅಲ್ಲಿ ಇಂತಹದ್ದೇ ಕೃತ್ಯಗಳನ್ನು ಮಾಡಿದ್ದ. ಆತನ ವಿರುದ್ಧ ಎರಡು ಪ್ರಕರಣಗಳು ಚೆನ್ನೈನ ಸಿಸಿಬಿ ಠಾಣೆಯಲ್ಲಿ ದಾಖಲಾಗಿವೆ. ಇದಾದ ಬಳಿಕ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದಿರುವ ದಿವ್ಯನ್‌ ಇಲ್ಲಿಯೂ ತನ್ನ ಕೃತ್ಯ ಮುಂದುವರಿಸಿದ್ದ. ಮತ್ತೂಬ್ಬ ಆರೋಪಿ ನದೀಮ್‌ ಕಾಟನ್‌ಪೇಟೆ, ಉಪ್ಪಾರಪೇಟೆ ಹಾಗೂ ಮುಂಬೈನಲ್ಲಿ ಹಲವು ಠಾಣೆಗಳಲ್ಲಿ ನಡೆದ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಆರೋಪಿಗಳು ವಿದೇಶಿಯರಿಗೆ ಹೆಚ್ಚು ವಂಚನೆ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ. 

ಸಿಕ್ಕಿಬಿದ್ದಿದ್ದು ಟಿವಿ ಖರೀದಿಸಿ ವಂಚನೆಯಲ್ಲಿ: ಮೂವರು ಆರೋಪಿಗಳು ಜೂನ್‌ 21ರಂದು ನಕಲಿ ಕ್ರೆಡಿಟ್‌ ಕಾರ್ಡ್‌ ಬಳಸಿ ದೊಡ್ಡಕಲ್ಲಸಂದ್ರದ ವಿಷ್ಣುಪ್ರಿಯ ಇಂಟರ್‌ ನ್ಯಾಷನಲ್‌ ಅಂಗಡಿಯಲ್ಲಿ 1.10 ಲಕ್ಷ ರೂ. ಮೌಲ್ಯದ 3 ಎಲ…ಇಡಿ ಟಿವಿಗಳನ್ನು ಖರೀದಿಸಿದ್ದರು. ಆದರೆ, ಈ ಹಣ ಮಾಲೀಕರ ಖಾತೆಗೆ ಜಮೆಯಾಗಿರಲಿಲ್ಲ. ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳು ಬಳಸುತ್ತಿದ್ದ ಮೊಬೈಲ್‌ಗ‌ಳ ನೆಟ್‌ವರ್ಕ್‌ಗಳನ್ನು ಆಧರಿಸಿ ಅವರನ್ನು ಬಂಧಿಸಿದ್ದಾರೆ.

ಕಾರ್ಡ್‌ ವ್ಯವಹಾರ ಸುರಕ್ಷಿತಗೊಳಿಸಲು ಬ್ಯಾಂಕ್‌ಗಳಿಗೆ ಸೂಚನೆ 
ಬೆಂಗಳೂರು:
ಕ್ಯಾಶ್‌ಲೆಸ್‌ ವ್ಯವಹಾರ ಮುಂಚೂಣಿಗೆ ಬಂದಿರುವುದರಿಮದ ಇತ್ತೀಚೆಗೆ ಆನ್‌ಲೈನ್‌ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಿಸರ್ವ್‌ ಬ್ಯಾಂಕ್‌ ಸೇರಿದಂತೆ ಇತರ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆ ಕರೆದು ಎಟಿಎಂ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಇನ್ನಷ್ಟು ಆಧುನಿಕರಣಗೊಳಿಸುವಂತೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಹೇಳಿದ್ದಾರೆ.

ಬ್ಯಾಂಕ್‌ಗಳಿಂದ ನೀಡಲಾಗುವ ಕಾರ್ಡ್‌ಗಳನ್ನು ಮತ್ತಷ್ಟು ಹೈಟೆಕ್‌ಗೊಳಿಸಿ ವಂಚನೆ ನಡೆಯದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಹಕರ ರಹಸ್ಯ ಸಂಖ್ಯೆಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ಸೂದ್‌ ತಿಳಿಸಿದರು.  ಎಟಿಎಂ ಕೇಂದ್ರಗಳಲ್ಲಿ ಸ್ಕೀಮ್ಮರ್‌ಗಳನ್ನು ಅಳವಡಿಸಿ ಖಾತೆದಾರರ ಮಾಹಿತಿ ಪಡೆದು 13 ಲಕ್ಷಕ್ಕೂ ಹೆಚ್ಚಿನ ವಂಚನೆ ನಡೆಸಿರುವ 29ಕ್ಕೂ ಹೆಚ್ಚು ಪ್ರಕರಣಗಳು ನಗರದಲ್ಲಿ ದಾಖಲಾಗಿವೆ. ಇ

ದನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕ್‌ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ ಎಂದು ಹೇಳಿದರು. ಅಲ್ಲದೆ, ಕಾರ್ಡ್‌ಗಳ ಬದಲು ಬ್ಯಾಂಕ್‌ ಗ್ರಾಹಕರಿಗೆ ಚಿಪ್‌ ವ್ಯವಸ್ಥೆ ಮಾಡುವಂತೆಯೂ ಸಲಹೆ ನೀಡಲಾಗಿದೆ. ಎಟಿಎಂ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಸೂಚಿಸಿಸಲಾಗಿದೆ ಎಂದರು.

ಟಾಪ್ ನ್ಯೂಸ್

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

10

Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್‌ ಸ್ಟಾರ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4

Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Suri Loves Sandhya movie teaser

Suri Loves Sandhya: ಟೀಸರ್‌ನಲ್ಲಿ ಸೂರಿ ಲವ್‌ ಸ್ಟೋರಿ

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.