ರಾಜಭವನ ವೀಕ್ಷಣೆಗೆ ಮತ್ತೆ ಅವಕಾಶ
Team Udayavani, Aug 19, 2019, 3:05 AM IST
ಬೆಂಗಳೂರು: ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಮತ್ತೂಮ್ಮೆ ಅವಕಾಶ ಕಲ್ಪಿಸಲಾಗಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ-ಭಾನುವಾರ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. ರಾಜ್ಯ ಸರ್ಕಾರದ ಸಂವಿಧಾನ ಮುಖ್ಯಸ್ಥರಾದ ರಾಜ್ಯಪಾಲರ ಕಾರ್ಯ ಮತ್ತು ಆವಾಸ ಸ್ಥಾನವಾಗಿರುವ ರಾಜಭವನ “ಹೈ ಸೆಕ್ಯೂರಿಟಿ’ ಪ್ರದೇಶಗಳಲ್ಲೊಂದು. ಭದ್ರತೆಯ ದೃಷ್ಟಿಯಿಂದ ರಾಜಭವನಕ್ಕೆ ಸಾರ್ವಜನಿಕರ ಪ್ರವೇಶ ಹಾಗೂ ಭೇಟಿ ನಿಷೇಧವಿರುತ್ತದೆ.
ಆದರೆ, ಸಾಮಾನ್ಯ ಜನರಲ್ಲಿ ರಾಜಭವನದ ಕುರಿತು ಇರುವ ಕುತೂಹಲ ತಣಿಸಲು, ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಪಾರಂಪರಿಕ ಕಟ್ಟಡದ ವೈಭವ, ಇತಿಹಾಸ ಪರಿಚಯಿಸಲೆಂದು ಕಳೆದ ವರ್ಷ ಸ್ವಾತಂತ್ರ್ಯದಿನಾಚರಣೆ ಸಂದರ್ಭದಲ್ಲಿ 15 ದಿನಗಳ ಮಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ಮತ್ತೂಮ್ಮೆ ಸಾರ್ವಜನಿಕ ವೀಕ್ಷಣೆ ಅವಕಾಶ ನೀಡಲಾಗಿದೆ.
ಉಚಿತ ಪ್ರವೇಶ – ನೋಂದಣಿ ಕಡ್ಡಾಯ: ಈ ಬಾರಿ ಆ.17ರಿಂದ 31ರವರೆಗೆ ಸಂಜೆ 4ರಿಂದ 7.30ರ ತನಕ ರಾಜಭವನಕ್ಕೆ ಸಾರ್ವಜನಿಕರ ಭೇಟಿ ನೀಡುವ ಅವಕಾಶವಿದ್ದು, ಇದಕ್ಕಾಗಿ ರಾಜಭವನ ಅಧಿಕೃತ ವೆಬ್‌ಸೈಟ್ http://rajbhavan.kar.nic.in ನಲ್ಲಿ ಹೆಸರು, ಮೊಬೈಲ್ ಸಂಖ್ಯೆ ಇ-ಮೇಲ್ ಹಾಗೂ ಆಧಾರ್ ಸಂಖ್ಯೆಯನ್ನು ನೀಡಿ ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಬಳಿಕ ರಾಜಭವನದಿಂದ ಅಧಿಕೃತವಾಗಿ ನಿಮ್ಮ ಇ-ಮೇಲ್ ಅಥವಾ ಮೊಬೈಲ್ ನಂಬರ್‌ಗೆ ಯಾವ ದಿನ, ಎಷ್ಟು ಗಂಟೆಗೆ ವೀಕ್ಷಣೆಗೆ ಬರಬೇಕು ಎಂದು ಖಚಿತ ಪಡಿಸಲಾಗುತ್ತದೆ. ನೋಂದಣಿ ಹಾಗೂ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.
ಸಾವಿರಾರು ಮಂದಿ ಭೇಟಿ: ಶನಿವಾರ ಹಾಗೂ ಭಾನುವಾರ ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಮಂದಿ ರಾಜಭವನಕ್ಕೆ ಭೇಟಿ ನೀಡಿ ಅಲ್ಲಿನ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ. 20 ಮಂದಿಯ ಒಂದು ತಂಡ ಮಾಡಿ ಇಡೀ ರಾಜಭವನ ಸುತ್ತಾಡಿಸಲಾಗುತ್ತದೆ. ಮಾಹಿತಿ ತಿಳಿಸಲು ಮಾಗದರ್ಶಕರನ್ನು (ಗೈಡ್) ನೇಮಕ ಮಾಡಲಾಗಿದೆ. ರಾಜಭವನದ ಗಾಜಿನ ಮನೆ, ಬ್ಯಾಂಕ್ವೆಟ್ ಹಾಲ್, ವಿಶೇಷ ಕೊಠಡಿ, ಉದ್ಯಾನ ವೀಕ್ಷಣೆ ಮಾಡಿ ರಾಜಭವನ ಐತಿಹಾಸ ಹಾಗೂ ಮಾಹಿತಿ ಕುರಿತು ಕಿರುಚಿತ್ರವನ್ನು ನೋಡಬಹುದಾಗಿದೆ. ಆನಂತರ ಕಾಫಿ, ಟೀ, ಹಾಲು, ಬಿಸ್ಕೆಟ್ ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.