ಮೂಲ ನೆಲೆ ನೆನಪು ಆದಿಕವಿ ಪಂಪನನ್ನೂ ಕಾಡಿವೆ
Team Udayavani, Feb 6, 2018, 1:38 PM IST
ಬೆಂಗಳೂರು: ಆದಿ ಕವಿ ಪಂಪನಿಗೂ ವಲಸೆ ಕಾಡುತ್ತಿತ್ತು ಎಂಬುದನ್ನು ಅವರ ಕಾವ್ಯಗಳಲ್ಲಿ ಕಾಣಬಹುದಾಗಿದೆ ಎಂದು
ಹಿರಿಯ ಚಿಂತಕ ಲಕ್ಷ್ಮೀಶ ತೋಲ್ಪಾಡಿ ಅಭಿಪ್ರಾಯಪಟ್ಟರು.
ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ನಗರದ ಜೈನ್ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಗ ಐತಾಳ ಅವರ “ಸ್ಮರಣೆ ಸಾಲದೆ’, ನಳಿನಿ ಮೈಯ ಅವರ “ಬಂದೀತು ಆ ದಿನ’, ಮತ್ತು ನಳಿನಿ ಮೈಯ ಹಾಗೂ ನಾಗ ಐತಾಳ ಅವರು ಸಂಪಾದಿಸಿರುವ “ನೆನಪಿನ ಓಣಿಯೊಳಗೆ ಮಿನುಗುತಾವ ದೀಪ’ ಪುಸ್ತಕಗಳ ಬಿಡುಗಡೆ ಹಾಗೂ “ಡಯಾನ್ಪೋರಾ ಸಾಂಸ್ಕೃತಿಕ ಆಯಾಮಗಳು’ ಕುರಿತ
ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಲೆಮಾರಿತನ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗುತ್ತದೆ. ನಾವು ಹುಟ್ಟಿ ಬೆಳೆದ ಪ್ರದೇಶವನ್ನು ಬಿಟ್ಟು ಬೇರೆ ಪ್ರದೇಶ ಗಳಿಗೆ ತೆರಳಿದಾಗ ನಾವು ಬಿಟ್ಟು ಬಂದಿರುವ ಅಲ್ಲಿನ ಪರಿಸರ ಅತೀಯಾಗಿ ಕಾಡುತ್ತದೆ. ಇಂಥ ನೆನಪು ಆದಿ ಕವಿ ಪಂಪನನ್ನೂ ಬಿಟ್ಟಿರಲಿಲ್ಲ. ಆತನ ಕಾವ್ಯಗಳಲ್ಲಿ ಇದನ್ನು ಕಾಣಬಹುದಾಗಿದೆ. “ನೆನೆವುದೆನ್ನ ಮನಂ ವನವಾಸಿ ದೇಶಮಂ’ ಎಂದು ಪಂಪನೇ ಹೇಳಿಕೊಂಡಿದ್ದಾನೆ ಎಂದರು.
ಬೆಂಗಳೂರಿನಲ್ಲೀಗ ಶುದ್ಧವಾದ ಕನ್ನಡವೇ ಮರೆತು ಹೋಗಿದೆ. ಈ ಸಂದರ್ಭದಲ್ಲಿ ನಾನಾ ಕಾರಣಗಳಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ತವರು ನೆಲದ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ಅವರನ್ನು ಬಿಟ್ಟಿಲ್ಲ. ಅವರೂ ಕನ್ನಡವನ್ನು ಬಿಟ್ಟಿಲ್ಲ. ಅವರ ಭಾಷಾಗುಣ ಮೆಚ್ಚುವಂತಹದ್ದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ನರಹಳ್ಳಿ ಬಾಲಸು ಬ್ರಹ್ಮಣ್ಯ, ಒಬ್ಬರಿಂದ ಒಬ್ಬರು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಟ್ರಸ್ಟ್ ಎಲ್ಲರನ್ನು ಒಳಗೊಂಡು ಎಲ್ಲ ಬಗೆಯ ಚಿಂತನೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಬಹುತ್ವಗಳನ್ನು ಎತ್ತಿ ಹಿಡಿಯುವುದು ಟ್ರಸ್ಟ್‌ನ ಪ್ರಮುಖ ಆಶಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಏಕಾಕೃತಿಯ ಚಿಂತನೆಗಳೇ ಪ್ರಧಾನವಾಗುತ್ತಿರುವ ಇಂದಿನ ದಿನಗಳಲ್ಲಿ ಬಹುತ್ವವನ್ನು ಪ್ರತಿಪಾದಿಸುವುದು ಪ್ರಜ್ಞಾವಂತರ ಕರ್ತವ್ಯ. ನಮ್ಮ ಮನಸ್ಸು ಮತ್ತು ಸಮಾಜ ಚಲನಶೀಲವಾಗದೇ ಇದ್ದರೆ ಅದು ಕ್ರೌರ್ಯ ಹಾಗೂ ಹಿಂಸೆಗೆ ಅವಕಾಶ ಮಾಡುಕೊಡುತ್ತದೆ ಎಂದು ಈ ಹಿಂದೆ ಲೋಹಿಯಾ ಅವರು ಹೇಳುತ್ತಿದ್ದರು. ಇಂದು ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಹಿಂಸೆ ಮತ್ತು ಕ್ರೌರ್ಯಗಳಿಗೆ ನಮ್ಮ ಮನಸನ್ನು ಜಡವಾಗಿಸಿಕೊಂಡಿರುವುದೇ ಕಾರಣವಾಗಿದೆ ಎಂದರು.
ಕೃತಿಗಳ ಕುರಿತು ಮಾತನಾಡಿದ ಯುವ ಲೇಖಕ ವಿಕ್ರಂ ಹತ್ವಾರ್, ಲೇಖಕರುಗಳು ತಮ್ಮ ಹಳೆಯ ನೆಪುಗಳ ಬುತ್ತಿಗೆ ಬರಹದ ರೂಪ ನೀಡಿದ್ದಾರೆ. ಎಲ್ಲ ಲೇಖನಗಳಲ್ಲಿ ಲಹರಿತನವಿದೆ ಎಂದು ಬಣ್ಣಿಸಿದರು. ಇದೇ ವೇಳೆ “ಡಯಾನ್ಪೋರಾ ಸಾಂಸ್ಕೃತಿಕ ಆಯಾಮಗಳು’ ಕುರಿತಾಗಿ ಬೆಳಗ್ಗೆಯಿಂದ ಸಂಜೆಯ ಅವರಿಗೂ ನಡೆದ ವಿಚಾರಗೋಷ್ಠಿಗಳು ಸಾಹಿತ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.