ಸಾಮೂಹಿಕ ಅತ್ಯಾಚಾರ ಕೇಸಲ್ಲಿ ಮತ್ತೂಬ್ಬನಿಗೆ ಜೀವಾವಧಿ ಶಿಕ್ಷೆ
Team Udayavani, May 23, 2017, 12:34 PM IST
ಬೆಂಗಳೂರು: ನ್ಯಾಷನಲ್ ಲಾ ಕಾಲೇಜು ವಿದ್ಯಾರ್ಥಿನಿಯ ಮೇಲೆ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ 2012ರಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮತ್ತೋರ್ವ ಅಪರಾಧಿ ರಾಜು ಅಲಿಯಾಸ್ ಮುತ್ತುರಾಜು(31) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರ ಸೆಷನ್ಸ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ನಗರದ 55ನೇ ಸೆಷನ್ಸ್ ನ್ಯಾಯಾ ಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ, ಅಪರಾಧಿ ರಾಜುನ ವಿರುದ್ಧ ಒಟ್ಟು 33 ಸಾಕ್ಷ್ಯಗಳನ್ನು ಪರಿಗಣಿಸಿ ಈ ತೀರ್ಪು ನೀಡಲಾಗಿದೆ. ಕೃತ್ಯ ನಡೆದ ದಿನದಿಂದಲೇ ತಲೆ ಮರೆಸಿಕೊಂಡಿದ್ದ ರಾಜುವನ್ನು 2013 ರಲ್ಲಿ ಪೊಲೀಸರು ಬಂಧಿಸಿದ್ದರು. 2014ರಿಂದ ವಿಚಾರಣೆ ಆರಂಭವಾಗಿತ್ತು.
ಈ ಸಂಧರ್ಭದಲ್ಲಿ ಅಪರಾಧಿ ರಾಜುನನ್ನು ಗುರುತಿಸಿದ್ದ ಸಂತ್ರಸ್ತೆಯ ಸಾಕ್ಷ್ಯಾ ಹೇಳಿಕೆ, ಕೃತ್ಯ ಎಸಗಿದಾಗ ಆರೋಪಿ ಧರಿಸಿದ್ದ ಸ್ವೆಟರ್, ರಾಜುವಿನ ಗುರುತಿನ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ ನೀಡಿದ್ದ ವರದಿ ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯ ಪರಿಗಣಿಸಿ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಓರ್ವ ಬಾಲಪರಾಧಿ ಸೇರಿದಂತೆ ಶಿವಣ್ಣ(20) ಯಲ್ಲಯ್ಯ (23) ಈರಯ್ಯ( 20) ದೊಡ್ಡೀರ (19) ಮದ್ದೂರ(20) ರಾಮ (50)ನಿಗೆ ಕಳೆದ 2013ರಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಏನಿದು ಪ್ರಕರಣ?: ನ್ಯಾಶನಲ್ ಲಾ ಕಾಲೇಜಿನಲ್ಲಿ 2ನೇ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡು ತ್ತಿದ್ದ ಸಂತ್ರಸ್ತ ವಿದ್ಯಾರ್ಥಿನಿ, ತನ್ನ ಸೇಹಿತನ ಜೊತೆ 2012ರ ಅ.13ರಂದು ರಾತ್ರಿ 10 ಗಂಟೆಯಲ್ಲಿ ಜ್ಞಾನಭಾರತಿ ಆವರಣದಲ್ಲಿ ಗಾಂಧೀ ಭವನ ಸಮೀಪ ಕಾರಿನಲ್ಲಿ ತೆರಳುತ್ತಿದ್ದರು.
ಈ ವೇಳೆ ಕಾರು ಅಡ್ಡಗಟ್ಟಿದ 8 ಮಂದಿ ಸಂತ್ರಸ್ಥೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಫೋನ್ ಕಸಿದುಕೊಂಡಿದ್ದರು. ನಂತರ ಯುವತಿಯನ್ನೂ ಕಾಡಿನೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.