ಗುಡಿ ಮೇಲೆ ಬಿದ್ದ ಫಲಕ
Team Udayavani, May 22, 2017, 12:42 PM IST
ಮಹದೇವಪುರ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ವೈಟ್‌ಫೀಲ್ಡ್ ಹಾಗೂ ಬಿದರಹಳ್ಳಿ ಭಾಗ ತತ್ತರಸಿ ಹೋಗಿದೆ. ವರ್ತೂರು ಕೋಡಿ ಬಳಿ ನೊರೆ ತಡೆಯಲೆಂದು ಬಿಡಿಎ ನಿರ್ಮಿಸಿದ್ದ ಕಬ್ಬಿಣದ ಮೆಷ್ ಇತ್ತೀಚೆಗಷ್ಟೇ ಬಿರುಗಾಳಿಗೆ ಕುಸಿದು ಬಿದ್ದಿತ್ತು.
ಅದರ ಮುಂದುವರಿದ ಭಾಗವಾಗಿ ಮಳೆಗೆ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಶನಿವಾರ ರಾತ್ರಿ ಬಿರುಗಾಳಿ ಮಳೆಗೆ ವೈಟ್‌ಪೀಲ್ಡ್ ಮುಖ್ಯರಸ್ತೆ ಬದಿಯ ವಿದ್ಯುತ್ ಕಂಬದ ಮೇಲೆ ಬಾರಿ ಗಾತ್ರದ ಮರಗಳು ಉರುಳಿ ಬಿದ್ದವು. ಹೀಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡು ಕತ್ತಲಾವರಿಸಿತು.
ರಾಷ್ಟ್ರೀಯ ಹೆದ್ದಾರಿ 75 ರ ಅವಲಹಳ್ಳಿ ಸಮೀಪದ ಶನಿಮಹಾತ್ಮ ದೇವಸ್ಥಾನ ಮೇಲೆ ಬೃಹತ್ ಗಾತ್ರದ ಜಾಹಿರಾತು ಪಲಕ ಉರಳಿಬಿದ್ದು, ದೇವಸ್ಥಾನ ಸೇರಿದಂತೆ, ಪಕ್ಕದ ಮನೆಗಳ ಛಾವಣಿಗಳಿಗೆ ಹಾನಿಗೊಳಗಾದವು.
ಜಾಹಿರಾತು ಪಲಕ ತೆರವುಗೊಳಿಸಲು ಸಂಜೆವರೆಗೂ ಕ್ರೆ„ನ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಹೊಸಕೋಟೆ ಮತ್ತು ಕಾಡುಗುಡಿ ಮುಖ್ಯರಸ್ತೆಯ ಗೊರವಿಗೆರೆ ಗೇಟ್ ಸಮೀಪ ಬೃಹತ್ ಜಾಹಿರಾತು ಪಲಕ ರಸ್ತೆಗೆ ಉರಳಿಬಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ.
ರೈತರ ಮೊಗದಲ್ಲಿ ಮಂದಹಾಸ
ಈ ನಡುವೆ ಮಳೆ ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸತತ ಬರದಿಂದಾಗಿ ಇಲ್ಲಿನವರು ಬೆಳೆ ಬೆಳೆಯಲು ಮುಂದಾಗಿರಲಿಲ್ಲ. ಸತತ ಮೂರು ದಿನ ಉತ್ತಮವಾಗಿ ಮಳೆ ಸುರಿದಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಬತ್ತಿ ಹೋಗಿದ್ದ ಬೋರ್‌ವೆಲ್‌ಗಳಲ್ಲಿ ಅಲ್ಪಸ್ವಲ್ಪ ನೀರು ಕಾಣಿಸಿಕೊಂಡಿರುವುದು ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.