ಸಿನಿಮಾ ಕುರಿತ ತಾತ್ವಿಕ ಚರ್ಚೆ ಕನ್ನಡದಲ್ಲಿ ಕಡಿಮೆ

Team Udayavani, Oct 22, 2018, 12:56 PM IST

cinema-kurita.jpg

ಬೆಂಗಳೂರು: ಸಿನಿಮಾ ರಂಗದ ಬಗ್ಗೆ ಒಳ್ಳೆಯ ತಾತ್ವಿಕ ವಿಷಯಗಳು ಅಥವಾ ಪ್ರಶ್ನೆಗಳ ಮೇಲಿನ ಚರ್ಚೆ ತುಂಬಾ ಕಡಿಮೆ ಆಗಿವೆ ಎಂದು ಚಿತ್ರ ನಿರ್ದೇಶಕ, ಪದ್ಮಶ್ರೀ ಗಿರೀಶ್‌ ಕಾಸರವಳ್ಳಿ ಬೇಸರ ವ್ಯಕ್ತಪಡಿಸಿದರು.

ನಗರದ ತರಳಬಾಳು ಕೇಂದ್ರದಲ್ಲಿ ಭಾನುವಾರ ಶಿವರಾಮ ಕಾರಂತ ವೇದಿಕೆ ಮತ್ತು ಲಯನ್ಸ್‌ ಕ್ಲಬ್‌ ಆಫ್ ಬೆಂಗಳೂರು ಹಮ್ಮಿಕೊಂಡಿದ್ದ ಶಿವರಾಮ ಕಾರಂತರ 117ನೇ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಎಲ್ಲರೂ ಗಾಸಿಪ್‌ ಕಾಲಂಗಳನ್ನು ಓದುತ್ತೇವೆ. ವಿಮರ್ಶೆ, ಲಘು ಹರಟೆಗಳನ್ನು ಮಾಡುತ್ತೇವೆ. ಆದರೆ, ಸಿನಿಮಾ ಒಂದು ಭಾಷೆಯಾಗಿ ಏನು ಮಾಡುತ್ತಿದೆ?

ಕಲಾತ್ಮಕ ಸಾಧ್ಯತೆಗಳು ಏನು? ಈ ವಿಷಯಗಳ ಕುರಿತ ಚರ್ಚೆ ಆಗುತ್ತಿಲ್ಲ. ಕನ್ನಡದ ಮಟ್ಟಿಗಂತೂ ಇದು ಆಗಿಯೇ ಇಲ್ಲ. ಶಿವರಾಮ ಕಾರಂತರು 1930ರ ಆರಂಭದಲ್ಲಿ ಸಿನಿಮಾ ಮಾಧ್ಯಮದ ಬಗ್ಗೆ ಇಂತಹದ್ದೊಂದು ಪ್ರಯತ್ನವನ್ನು ತಮ್ಮ ಲೇಖನಗಳ ಮೂಲಕ ಮಾಡಿದ್ದರು. ತಂತ್ರಗಾರಿಕೆಗಳ ಬಗ್ಗೆಯೂ ಅದರಲ್ಲಿ ಉಲ್ಲೇಖೀಸಿದ್ದರು’ ಎಂದು ಹೇಳಿದರು.

ಸಿನಿಮಾ ಮಾಡುವ ಹಂಬಲ ನಮ್ಮಲ್ಲಿ ಅನೇಕರಿಗೆ ಇದೆ. ಇದರಲ್ಲಿ ಕೆಲವರು ಯಶಸ್ವಿ ಆಗಿದ್ದಾರೆ. ಇನ್ನು ಹಲವರು ಸೋತಿದ್ದಾರೆ. ಅವರೆಲ್ಲರ ಉದ್ದೇಶ ಸಿನಿಮಾವನ್ನು ಕತೆ ಹೇಳುವ ಸಾಧನವಾಗಿ ಬಳಸುವುದಾಗಿದೆ. ಆದರೆ, ಸಿನಿಮಾ ಮಾಧ್ಯಮಕ್ಕೇ ಒಂದು ಸಾಧ್ಯತೆ ಇದೆ. ಅದರ ಫಿಲಾಸಫಿ ಏನು ಎಂಬುದನ್ನು ಯಾರೂ ಹುಡುಕುವ ಪ್ರಯತ್ನ ಮಾಡಿಲ್ಲ.

ಅದನ್ನು ಹುಡುಕುವ ಪ್ರಯತ್ನ ಶಿವರಾಮ ಕಾರಂತರು 30ರ ದಶಕದಲ್ಲಿ ಸಂಪಾದಿಸಿದ ಲೇಖನಗಳಲ್ಲಿ ಕಾಣಬಹುದು. ಸಾಹಿತ್ಯದಿಂದ ಅದು ಹೇಗೆ ಭಿನ್ನವಾಗಬೇಕು? ರಂಗಭೂಮಿಯಿಂದ ಹೇಗೆ ಭಿನ್ನವಾಗಿರಬೇಕು ಎಂಬುದನ್ನು ಹೇಳಿದ್ದಾರೆ. ಕಾರಂತರು ಕೇವಲ ಕಾದಂಬರಿಕಾರ ಆಗಿರಲಿಲ್ಲ. ಜೀವನದಲ್ಲಿ ಸಾಧ್ಯವಾದುದೆಲ್ಲವನ್ನೂ ಕಲಿಯುವ ತುಡಿತ ಅವರಲ್ಲಿತ್ತು. ಹೀಗಾಗಿ ಆ ಕಾಲದಲ್ಲೇ ಎರಡು ಮೂಕಿ ಚಿತ್ರಗಳನ್ನೂ ಅವರು ಮಾಡಿದರು ಎಂದು ಸ್ಮರಿಸಿದರು.

ವ್ಯಕ್ತಿತ್ವ ರೂಪಿಸಿದ ಶಕ್ತಿ: “ಬಾಲ್ಯದಲ್ಲಿ ನನಗೆ ಕಾರಂತರು ದೊಡ್ಡ ಆದರ್ಶವಾಗಿದ್ದರು. ಅವರ ಕಾದಂಬರಿಗಳನ್ನು ಓದಿಯೇ ನಾನು ಬೆಳೆದೆ. ನನ್ನ ವೃತ್ತಿ ಜೀವನ ಕೂಡ ಆರಂಭವಾಗಿದ್ದು ಅವರ ಕೃತಿ ಆಧರಿಸಿದ ಚಿತ್ರದ ಮೂಲಕ. ಹಾಗಾಗಿ, ಅವರು ವ್ಯಕ್ತಿಯಷ್ಟೇ ಅಲ್ಲ, ನನ್ನ ವ್ಯಕ್ತಿತ್ವ ರೂಪಿಸಿದ ಶಕ್ತಿಯಾದರು’ ಎಂದು ಮೆಲುಕುಹಾಕಿದ ಗಿರೀಶ್‌ ಕಾಸರವಳ್ಳಿ, ಜಾತಿಯ ಅಥವಾ ರಾಷ್ಟ್ರೀಯ ನೆಲೆಯಲ್ಲಿ ತುಳಿತದ ಸಮಗ್ರ ನೋಟವನ್ನು ಕತೆಗಳಲ್ಲಿ ಕಟ್ಟಿಕೊಟ್ಟರು ಎಂದು ಬಣ್ಣಿಸಿದರು.

ಲೇಖಕಿ ಡಾ.ವಿಜಯಾ ಸುಬ್ಬರಾಜ್‌ ಮಾತನಾಡಿ, ಶಿವರಾಮ ಕಾರಂತರನ್ನು ಕಾದಂಬರಿಕಾರ ಎನ್ನುವುದಕ್ಕೆ ಸೀಮಿತಗೊಳಿಸಲಾಗಿದೆ. ಹಾಗಾಗಿ, ಅದರಾಚೆಗೆ ಏನು ಬರೆದಿದ್ದಾರೆ ಎನ್ನುವುದನ್ನು ಬಹುತೇಕರು ಹುಡುಕಲು ಹೋಗುವುದೇ ಇಲ್ಲ. ಆದರೆ, ಗೀತ ನಾಟಕದಲ್ಲಿ ಕಾರಂತರು ಮತ್ತು ಪುತಿನ ಎರಡು ಶೃಂಗಗಳು ಎಂದು ವಿಶ್ಲೇಷಿಸಿದರು. ಲೇಖಕ ಕೆ. ರಾಜಕುಮಾರ್‌ ಮಾತನಾಡಿದರು.

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.