ನಾಲ್ಕು ವರ್ಷ ಹಳೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
Team Udayavani, Aug 30, 2017, 11:29 AM IST
ಬೆಂಗಳೂರು: ನಗರದಲ್ಲಿ ನಡೆದಿದ್ದ ಮನೆಕಳವು, ವಾಹನಗಳ ಕಳ್ಳತನ, ಕೊಲೆ, ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಶಾನ್ಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ 13 ಮಂದಿಯನ್ನು ಬಂಧಿಸಿದ್ದಾರೆ. ತನ್ಮೂಲಕ 2013ರಲ್ಲಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನೂ ಪತ್ತೆ ಹಚ್ಚಿದ್ದಾರೆ. ಯಲಹಂಕ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಕಳವು, ಬೈಕ್ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ಹಣ, ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಗೇಪಲ್ಲಿ ತಾಲೂಕಿನ ರಮೇಶ್ (26), ಈತನ ಸಹೋದರ ರಾಮಾಂಜನಿ(22), ಲಕ್ಷಿಪತಿ (26) ಮತ್ತು ಚಂದ್ರ (23) ಎಂಬುವರನ್ನು ಬಂಧಿಸಿದ್ದು, ಇವರಿಂದ 3 ಲಕ್ಷ ರೂ. ಬೆಲೆ ಬಾಳುವ 100 ಗ್ರಾಂ ಚಿನ್ನದ ಆಭರಣಗಳು, ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಇತ್ತೀಚೆಗೆ ಮಾರುತಿನಗರದ ಬಾಬು ಎಂಬುವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳವು ಮಾಡಿದ್ದರು ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮದ್ಯದ ವಿಚಾರಕ್ಕೆ ಕೊಲೆ: ಅಲ್ಲದೆ, 2013ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಠಾಣಾ ವ್ಯಾಪ್ತಿಯ ಮಾಡಪಲ್ಲಿ ಗ್ರಾಮದ ವೃದ್ಧ ಗೋವಿಂದಯ್ಯ ಎಂಬುವರನ್ನು ಆರೋಪಿ ರಮೇಶ್ ಕೊಲೆಗೈದಿದ್ದ. ವೃದ್ಧ ಗೋವಿಂದಯ್ಯ ಆರೋಪಿಗೆ ಮದ್ಯ ಕೇಳಿದ್ದು, ಆರಂಭದಲ್ಲಿ ರಮೇಶ್ ಕೊಟ್ಟಿದ್ದಾನೆ. ಮತ್ತೂಮ್ಮೆ ಗೋವಿಂದಯ್ಯ ಮದ್ಯ ಕೊಡಿಸುವಂತೆ ಕೇಳಿದ್ದಾರೆ. ಆಗ ಗೋವಿಂದಯ್ಯ ಅವರೊಂದಿಗೆ ಜಗಳ ತೆಗೆದಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಆಗ ರಮೇಶ್ ಗೋವಿಂದಯ್ಯ ಅವರ ಮೇಲೆ ಹಲ್ಲೆ ನಡೆಸಿದ್ದು, ವೃದ್ಧ ಸ್ಥಳದಲ್ಲೇ ಕುಸಿದು ಬಿದಿದ್ದಾರೆ. ಮದ್ಯ ಅಮಲಿನಲ್ಲಿದ್ದ ಆರೋಪಿ ಗೋವಿಂದಯ್ಯ ಅವರ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆ. ಬಳಿಕ ಗೋವಿಂದಯ್ಯ ಬಳಿಯಿದ್ದ 2 ಸಾವಿರ ನಗದು, ಒಂದು ಮದ್ಯದ ಬಾಟಲಿ ಮತ್ತು ವಾಚ್ ಕದ್ದು ಸ್ಥಳದಿಂದ ಪರಾರಿಯಾಗಿದ್ದ ಎಂದು ಅವರು ತಿಳಿಸಿದರು. ಮರುದಿನ ಗ್ರಾಮಸ್ಥರು ಗೋವಿಂದಯ್ಯ ಅನಾಥವಾಗಿ ಬಿದ್ದಿರುವುದನ್ನು ಗಮನಿಸಿದ್ದಾರೆ.
ವಯೋಸಹಜ ಸಾವು ಎಂದು ಭಾವಿಸಿ ಪೊಲೀಸರಿಗೂ ತಿಳಿಸದೆಯೇ ತಾವೇ ಎಲ್ಲ ಕಾರ್ಯವನ್ನು ಮುಗಿಸಿದ್ದಾರೆ. ಈ ಘಟನೆಗೂ ಕೆಲ ದಿನಗಳ ಹಿಂದೆ ಗೋವಿಂದಯ್ಯ ಅವರ ದೊಡ್ಡ ಅಳಿಯ ಮೃತರಾಗಿದ್ದರು. ಹೀಗಾಗಿ ಅವರ ಇಬ್ಬರು ಹೆಣ್ಣ ಮಕ್ಕಳು ಈ ಕುರಿತು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ ಎಂದು ಪೊಲೀಸರು ವಿವರಿಸಿದರು.
ಕಳವು ಪ್ರಕರಣದಲ್ಲಿ ಸಿಕ್ಕ ಆರೋಪಿಗಳು: ಬಾಗೇಪಲ್ಲಿ ಮೂಲದ ಬಾಬು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಆರೋಪಿ ರಮೇಶ್ ಇವರ ಕಾರು ಚಾಲಕನಾಗಿದ್ದ. ಈ ಹಿನ್ನೆಲೆಯಲ್ಲಿ ಆಗಾಗ್ಗೆ ಯಲಹಂಕದ ಮನೆಗೆ ಆರೋಪಿ ಬರುತ್ತಿದ್ದು, ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಲು ಸಂಚು ರೂಪಿಸಿದ್ದ. ಅದರಂತೆ ಸಹೋದರ ರಾಮಾಂಜನಿಗೆ ಈ ವಿಷಯ ತಿಳಿಸಿದ್ದಾನೆ. ಬಳಿಕ ಆ.21ರಂದು ಯಲಹಂಕದ ಮಾರುತಿನಗರದ ಮನೆಗೆ ನುಗ್ಗಿ ಆಭರಣ ಕಳ್ಳತನ ಮಾಡಿದರು. ಈ ಸಂಬಂಧ ಬಾಬು ದೂರು ನೀಡಿದ್ದು, ಹೆಚ್ಚಿನ ವಿಚಾರಣೆಗೆ ಆರೋಪಿ ರಮೇಶ್‌ನನ್ನು ಕರೆಸಿಕೊಂಡು ವಿಚಾರಣೆ ನಡೆಸಿದಾಗ ಕೊಲೆ ಹಾಗೂ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಗಿರೀಶ್ ವಿವರಿಸಿದರು.
ದರೋಡೆಕೋರರ ಬಂಧನ: ಮತ್ತೂಂದು ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಹಲ್ಲೆ ಮಾಡಿ ಮೊಬೈಲ್ ಹಾಗೂ ಹಣ ದೋಚುತ್ತಿದ್ದ ಮೂವರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದ್ದಾಮ ಹುಸೇನ್(20), ಅಬ್ರಹಾರ್ (19) ಮತ್ತು ಇಬ್ರಾಹಿಂ(21) ಬಂಧಿತರು. ಮನೆಯೊಂದರ ಶೋಕೆಸ್‌ನಲ್ಲಿಟ್ಟಿದ್ದ 1 ಲಕ್ಷ ರೂ. ಹಣ ಕಳ್ಳತನ ಮಾಡಿದ್ದ ಪಶ್ಚಿಮಬಂಗಾಳ ಮೂಲದ ಮೈದುಲ್(27) ಎಂಬಾತನನ್ನು ಬಂಧಿಸಿ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆ.18ರಂದು ದ್ವಾರಕಾನಗರದ3ನೇ ಮುಖ್ಯರಸ್ತೆ ನಿವಾಸಿ ಶಾಂತಿ ಎಂಬುವರ ಮನೆಯ ಶೋಕೆಸ್‌ನಲ್ಲಿಟ್ಟಿದ್ದ ಒಂದು ಲಕ್ಷ ಹಣ ಕಳವು ಮಾಡಿದ್ದರು.
ಇನ್ನು ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಬೆದರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಐದು ಮಂದಿಯನ್ನು ಕೊಡುಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುನೀಲ್(23), ಸತೀಶ್(23), ರವಿ(23), ತೇಜು (25), ಮಾರುತಿ (24)ಬಂಧಿತರು. ತಲೆ ಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ಅಪ್ಪಿ(24)ಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳು ಜು.24ರಂದು ರಾತ್ರಿ 1ದ ಗಂಟೆ ಸುಮಾರಿಗೆ ಕೊಡುಗೆಹಳ್ಳಿ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ಗಿರೀಶ್ ಎಂಬುವರನ್ನು ಅಡ್ಡಗಟ್ಟಿ ಅವರಿಂದ 2,500 ಹಣ, 2 ಮೊಬೈಲ್ ದರೋಡೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ