ಸಿನಿಮಾ ಜನಪ್ರಿಯತೆಯಿಂದ ರಾಜಕೀಯ ಪ್ರವೇಶಿಸೋದು ದುರಂತ; ರೈ


Team Udayavani, Nov 13, 2017, 6:15 AM IST

Ban13111706Medn.jpg

ಬೆಂಗಳೂರು: ಸಿನಿಮಾದಲ್ಲಿನ ಜನಪ್ರಿಯತೆಯನ್ನು ನಂಬಿ ರಾಜಕೀಯಕ್ಕೆ ಬರುವುದು ದುರಂತ. ನಾನು ಸದ್ಯ ರಾಜಕೀಯಕ್ಕೆ ಬರುವುದಿಲ್ಲ. ಮುಂದೆಯೂ ರಾಜಕೀಯಕ್ಕೆ ಬರಬೇಕು ಎಂಬ ಆಲೋಚನೆಯೂ ಇಲ್ಲ. ನನಗೆ ಝಂಡಾವೂ ಇಲ್ಲ,ಅಜೆಂಡಾವೂ ಇಲ್ಲ….

ಇದು ಬಹುಭಾಷಾ ನಟ ಪ್ರಕಾಶ್‌ ರೈ ಅವರ ಖಡಕ್‌ ನುಡಿ. ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ವರದಿಗಾರರ ಕೂಟ ಭಾನುವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ನಟರಾದ ರಜನೀಕಾಂತ್‌, ಕಮಲ್‌ಹಾಸನ್‌, ಉಪೇಂದ್ರ, ಪವನ್‌ಕಲ್ಯಾಣ ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸಿನಿಮಾನ ದಲ್ಲಿನ ಜನಪ್ರಿಯತೆ ನಂಬಿ ರಾಜಕೀಯ ಪ್ರವೇಶಿಸುವುದು ದುರಂತ. ಇವರ ಮೇಲೆ ನನಗೆ ಅಭಿಮಾನವಿದ್ದರೂ ನಾನು ಅವರಿಗೆ ಮತ ನೀಡುವುದಿಲ್ಲ. ಯಾರನ್ನೋ ವಿರೋಧಿಸಬೇಕೆಂಬ ಕಾರಣಕ್ಕೆ ಇವರನ್ನು ಬೆಂಬಲಿಸಲಾಗದು. ಜನರೂ ಅಭಿಮಾನದಿಂದ ಮತ ಹಾಕದೆ, ತಮ್ಮ ನಿರೀಕ್ಷೆಗಳಿಗೆ ಸ್ಪಂದಿಸುವ ಪ್ರತಿನಿಧಿಯಾಗುವರೇ ಎಂಬುದನ್ನು ಚಿಂತಿಸಬೇಕು. ಎಲ್ಲವನ್ನೂ ಪ್ರಶ್ನಿಸುವುದನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈಗಿನ ಯಾವ ಪಕ್ಷಗಳೂ ಶುದಟಛಿವಾಗಿಲ್ಲ. ಯಾವುದಾದರೂ ಪಕ್ಷ ಸೇರಿ ನಾನೊಬ್ಬ ಪ್ರಾಮಾಣಿಕನಾಗಿದ್ದರೆ, ಆ ಪಕ್ಷದ ಇತಿಹಾಸದ ಪಾಪಗಳು ನನಗೂ ಅಂಟಿಕೊಳ್ಳುತ್ತವೆ. ಅದಕ್ಕೆ ಸಮರ್ಥನೆ ನೀಡುವುದಕ್ಕಿಂತ ನಾನು ಸಮಾಜದಲ್ಲಿ ಒಂದು ಶಿಶುವಾಗಿರಲು ಬಯಸುತ್ತೇನೆಂದು ಸ್ಪಷ್ಟಪಡಿಸಿದರು.

ಅಧಿಕಾರದಲ್ಲಿರುವವರಿಗೆ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರಿಸುವ ಬದಲು ಪ್ರಶ್ನಿಸಿದವರ ವೈಯಕ್ತಿಕ ಜೀವನವನ್ನು ಹೀಯಾಳಿಸುವುದು ಅಪಾಯಕಾರಿ.

ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳು ಸಾಯುತ್ತಿದ್ದರೆ, ಅಲ್ಲಿನ ಮುಖ್ಯಮಂತ್ರಿ ಕೇರಳದಲ್ಲಿ
ಪ್ರಚಾರದಲ್ಲಿರುತ್ತಾರೆ. ಈ ಬಗ್ಗೆ ಪ್ರಶ್ನಿಸಿದಾಗ, ನನ್ನ ಪಕ್ಷದ ಬಲವರ್ಧನೆಗಾಗಿ ತೆರಳಿದ್ದೇನೆಂದು ಹೇಳುವ ಕನಿಷ್ಠ ವ್ಯವಧಾನವೂ ಇಲ್ಲ. ಅದಕ್ಕೆ ಉತ್ತರಿಸುವ ಬದಲು ನನ್ನ ತಂದೆ ಮುಸ್ಲಿಂ, ನನ್ನ ತಾಯಿ ಕ್ರಿಶ್ಚಿಯನ್‌, ನನ್ನ ಪತ್ನಿ ಹಿಂದು, ನಾನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾಗಿದ್ದೇನೆ. ಪಾಕಿಸ್ತಾನಕ್ಕೆ ಹೋಗಬೇಕೆಂದು ಮಾತನಾಡಿದರೆ ಏನು ಹೇಳ  ಬೇಕು ಎಂದು ಬೇಸರ ವ್ಯಕ್ತಪಡಿಸಿದರು.

“ನಾನು ಯಾವುದೇ ಅಭಿಪ್ರಾಯ, ಹೇಳಿಕೆಯನ್ನು ಪ್ರಚಾರದ ಉದ್ದೇಶಕ್ಕೆ ನೀಡಿದ್ದಲ್ಲ. ಹಾಗಿದ್ದರೂ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಾರೆ ಎಂದಾಗ ನೋವಾಗುತ್ತದೆ. ಪ್ರಶ್ನೆಗೆ ಉತ್ತರ ನೀಡುವುದಿರಲಿ, ಕನಿಷ್ಠ ಮರು ಪ್ರಶ್ನೆ ಕೇಳದೆ ಅಸಭ್ಯ, ಅಸಹ್ಯವಾಗಿ ಮಾತನಾಡುವುದು ಕೇಳಿದಾಗ ನೋವಾಗುತ್ತದೆ. ಹಾಗೆಂದು ಎದೆಗುಂದುವುದಿಲ್ಲ’ ಎಂದು ಹೇಳಿದರು.

ನನಗೀಗ 52 ವರ್ಷ. ರಂಗಭೂಮಿ, ಸಿನಿಮಾ ನಟನಾಗಿ, ಬಹುಭಾಷಾ ನಟನಾಗಿ, ನಿರ್ಮಾಪಕ,ನಿರ್ದೇಶಕನಾಗಿ ವೃತ್ತಿ ಜೀವನದ ಎಲ್ಲ ಹಂತ ದಾಟಿ ದ್ದೇನೆ. ಜೀವನಕ್ಕೆ ಸಾಕಾಗುವಷ್ಟೂ ಹಣವನ್ನೂಗಳಿಸಿ ದ್ದೇನೆ. ಈಗ ಯಾವು ದರ ಮೇಲೂ ವ್ಯಾಮೋಹವಿಲ್ಲ. ಈವರೆಗಿನ ಅನುಭವದಿಂದಲಾದರೂ ಮಾತನಾಡ ಬೇಕು. ಕಂಫ‌ರ್ಟ್‌ ಜೋನ್‌ಗೆ ಬಂದು ಮೌನವಾಗಿ ರುವುದು ಸತ್ತಂತೆ. ಹಾಗಾಗಿ ಮಾತನಾಡುತ್ತಿದ್ದೇನೆ. ಕಂಫ‌ರ್ಟ್‌ ಜೋನ್‌ಗೆ ಬಂದ ಮೇಲೆ ಮಾತನಾಡ ಬಾರದೆಂದೇನೂ ಇಲ್ಲವಲ್ಲ. ಪ್ರಶ್ನಿಸುವುದನ್ನು ಮುಂದು ವರಿಸುತ್ತೇನೆ ಎಂದು ಹೇಳಿದರು.

ಟ್ರೋಲ್‌ಗ‌ಳಿಂದ ಸ್ಟ್ರಾಂಗ್‌ ಆಗುತ್ತೇನೆ: ಇತ್ತೀಚೆಗೆ ನಾನು ಅಭಿಪ್ರಾಯ ಹೇಳಿದಾಗಷ್ಟೇ ಅಲ್ಲ, ಮಗಳೊಂದಿನ ಚಿತ್ರ ಹಾಕಿದರೂ ಸಾಮಾಜಿಕ ಜಾಲ ತಾಣ ದಲ್ಲಿ ಟ್ರೋಲ್‌ ಮಾಡಲಾಗುತ್ತದೆ. ಟ್ರೋಲ್‌ ಮಾಡುವವರಿದ್ದಾಗ ಇನ್ನಷ್ಟು ಎಚ್ಚರದಿಂದಿರಲು ಸಾಧ್ಯವಾಗುತ್ತದೆ. ನಾನು ಹೆಚ್ಚು ಸ್ಟ್ರಾಂಗ್‌ ಆಗುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಪ್ರಮುಖ ವಿಚಾರಗಳಿಗೆ ಪ್ರತಿಕ್ರಿಯೆ
– ನಾನು ಜಿಎಸ್‌ಟಿ ಬಗ್ಗೆ ಮಾತನಾಡಿದರೆ ಪ್ರಧಾನಿ ಮೋದಿ ಅವರ ವಿರುದ್ಧ ಮಾತನಾಡಿದೆ ಎನ್ನಲಾಗುತ್ತದೆ. ಇದರಲ್ಲಿ ಪ್ರಧಾನಿ,ಕೇಂದ್ರ ಸರ್ಕಾರ ಮಾತ್ರವಲ್ಲ, ಜಿಎಸ್‌ಟಿ ಜಾರಿಗೆ ಒಪ್ಪಿದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಸಮಾನ ಜವಾಬ್ದಾರರು ಎಂಬುದನ್ನು ಅರಿಯಬೇಕು.
– ಗೌರಿ ಹತ್ಯೆ ಪ್ರಕರಣ ಕುರಿತು ಗೃಹ ಸಚಿವರು ಹೇಳುವುದನ್ನು ಸದ್ಯಕ್ಕೆ ನಂಬಬೇಕಾಗುತ್ತದೆ.ಇದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಆದರೆ ಒತ್ತಡ ಹೇರುವ ಕೆಲಸ ಮುಂದುವರಿದಿದೆ.
–  ಗೌರಿ ಹತ್ಯೆ ಬಗ್ಗೆ ಮಾತನಾಡಿದಾಗ ಅದಕ್ಕೆ ಉತ್ತರಿಸುವ ಬದಲು ಸಂಸದ ಪ್ರತಾಪ ಸಿಂಹ, ಅವಹೇಳನಕಾರಿಯಾಗಿ ನನ್ನ ವಿರುದ್ಧ ಬರೆದ. ಪ್ರಧಾನಿಯವರು ಸಮರ್ಥವಾಗಿದ್ದು, ಉತ್ತಮವಾಗಿ ಕೆಲಸ ಮಾಡುತ್ತಾರೆಂದು ಹೇಳಿದ್ದರೂ ಸಾಕಿತ್ತು.ಇಂತಹ ಮನಸ್ಥಿತಿಯವರು ಜನತೆಯನ್ನು ಹೇಗೆ ಪ್ರತಿನಿಧಿಸುತ್ತಾರೋ ಗೊತ್ತಾಗುತ್ತಿಲ್ಲ.
– ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಟ್ರೋಲ್‌ಗ‌ಳು ಇಡೀ ದೇಶದ ಜನರ ಅಭಿಪ್ರಾಯವಲ್ಲ. 300-400 ಜನರಿಗೆ ಸಂಬಳ ನೀಡಿ ಪ್ರತಿನಿತ್ಯ ತಮ್ಮ ಪರವಾಗಿ ಹಾಗೂ ತಮ್ಮ ವಿರುದಟಛಿ ಮಾತನಾಡುವವರಿಗೆ ಪ್ರತಿಯಾಗಿ ಟ್ರೋಲ್‌ ಮಾಡುವ ವ್ಯವಸ್ಥೆ ಮಾಡಿಕೊಂಡಿರುವುದನ್ನು ಕಾಣಬಹುದು.
– ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡದೆ ಅಶ್ಲೀಲ ಭಾಷೆ ಬಳಸಿ ಟೀಕಿಸಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಶಾರುಖ್‌ ಖಾನ್‌, ಅಮೀರ್‌ ಖಾನ್‌ ಅವರಿಗೂ ಇದೇ ರೀತಿ ಟ್ರೋಲ್‌ ಮಾಡಲಾಗಿದೆ. ಅಮ್ಮ, ಪತ್ನಿ, ಪುತ್ರಿಯರು ಆತಂಕಕ್ಕೆ ಒಳಗಾಗುತ್ತಾರೆ. ನಾನು ತಲೆ ತಗ್ಗಿಸುವ ಕೆಲಸ ಮಾಡಿದರೆ ಹೆದರಬೇಕು. ಇದಕ್ಕೆಲ್ಲಾ ಆತಂಕ ಪಟ್ಟು ಕೊಳ್ಳಬೇಡಿ ಎಂದು ಧೈರ್ಯ ಹೇಳುತ್ತೇನೆ.
– ನಾನು ಪ್ರಚಾರ ರಾಯಭಾರಿಯಾಗಿರುವ ಉತ್ಪನ್ನ ಗಳ ಜಾಹೀರಾತುಗಳ ಪ್ರಸಾರಕ್ಕೂ ಅಡ್ಡಿಪಡಿಸಲಾ ಗಿದೆ. ಆದರೆ ಸಂಸ್ಥೆ ಹಿತದೃಷ್ಟಿಯಿಂದ ನಾನು ಅದನ್ನು ಬಹಿರಂಗಪಡಿಸುವಂತಿಲ್ಲ.
–  ಇಂದು ಮಾತನಾಡುವುದಕ್ಕೂ ಹೆದರಿಕೆಯಾಗುತ್ತದೆ ಎಂಬುದು ನಿಜ. ಆದರೆ ಈ ಸಂದರ್ಭವನ್ನು ಕಾಂಗ್ರೆಸ್‌ ತುರ್ತು ಪರಿಸ್ಥಿತಿಗೆ ಹೋಲಿಸಲಾಗದು. ಏಕೆಂದರೆ 1975ರಲ್ಲಿ ತುರ್ತು ಪರಿಸ್ಥಿತಿ ಹೇರುವುದರ ಹಿಂದೆ ಅಧಿಕಾರ ದಾಹವಿತ್ತು.
ಆದರೆ ಇಂದು ಸೈದಾಟಛಿತಿಕ ಕಾರಣಕ್ಕೆ ಪ್ರಶ್ನಿಸುವವರ ದನಿಯನ್ನು ಹತ್ತಿಕ್ಕಲಾಗುತ್ತಿದೆ.
– ಕನ್ನಡ ಧ್ವಜ ಹೊಂದುವುದರಿಂದ ಐಡೆಂಟಿಟಿ ಸಿಗುವುದಾದರೆ ಹೊಂದುವುದರಲ್ಲಿ ತಪ್ಪಿಲ್ಲ.

ಟಾಪ್ ನ್ಯೂಸ್

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.