ಭೀಮಾ ಮಹಾ ಉತ್ಸವಕ್ಕೆ ಸಾಕ್ಷಿಯಾದ ಅಪರೂಪದ ಗ್ರಾಹಕರು
Team Udayavani, Dec 18, 2017, 12:52 PM IST
ಬೆಂಗಳೂರು: ಚಿನ್ನಾಭರಣ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ಭೀಮಾ ಜ್ಯುವೆಲರ್, ತನ್ನ ಗ್ರಾಹಕರಿಗಾಗಿಯೇ ಭಾನುವಾರ ಸಂಜೆ “ಭೀಮಾ ಮಹಾ ಉತ್ಸವ’ ಏರ್ಪಡಿಸಿತ್ತು.
ನಗರದ ತಾಜ್ ವೆಸ್ಟ್‌ಎಂಡ್‌ನಲ್ಲಿ ನಡೆದ ಈ ಉತ್ಸವದಲ್ಲಿ ಅಟ್ಟಕಲರಿ ತಂಡ ಸೇರಿದಂತೆ ದೇಶದ ಖ್ಯಾತ ಕಲಾವಿದರಿಂದ ನೃತ್ಯ, ಸಂಗೀತ, ಫ್ಯಾಷನ್ ಶೋ, ಕಣ್ಮನ ಸೆಳೆಯುವ ಚಿನ್ನಾಭರಣಗಳ ಪ್ರದರ್ಶನಗಳ ಮೂಲಕ ಗ್ರಾಹಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಾಯಿತು.
ಈ ಮಹಾ ಉತ್ಸವವು ಗ್ರಾಹಕರ ಸಮ್ಮಿಲನಕ್ಕೆ ವೇದಿಕೆಯೂ ಆಗಿತ್ತು. ಚಿನ್ನಾಭರಣ ಮಾರುಕಟ್ಟೆಯಲ್ಲಿ ಭೀಮಾ 92 ವಸಂತಗಳನ್ನು ಪೂರೈಸಿದೆ. ಹಾಗಾಗಿ, ಎರಡು-ಮೂರು ತಲೆಮಾರಿನ ಗ್ರಾಹಕರನ್ನು ಅದು ಹೊಂದಿದೆ. ಆ ಅಪರೂಪದ ಗ್ರಾಹಕರು ಉತ್ಸವಕ್ಕೆ ಸಾಕ್ಷಿಯಾದರು. ಹಳೆಯ ಗ್ರಾಹಕರೊಂದಿಗೆ ಭೀಮಾ ವ್ಯವಸ್ಥಾಪಕ ನಿರ್ದೇಶಕ ಬಿ. ಕೃಷ್ಣನ್ ಮತ್ತು ಅವರ ಕುಟುಂಬ ಕೆಲಹೊತ್ತು ಕಳೆದರು.
50ರಿಂದ 60 ವರ್ಷಗಳ ಹಿಂದಿನ ತನ್ನ ಗ್ರಾಹಕರನ್ನು ಭೀಮಾ ಖುದ್ದು ಮನೆಗೆ ತೆರಳಿ, ಆತ್ಮೀಯವಾಗಿ ಆಹ್ವಾನ ನೀಡಿತ್ತು. ಇದಕ್ಕೆ ಸ್ಪಂದಿಸಿ ಮಾರತ್‌ಹಳ್ಳಿ, ವೈಟ್‌ಫೀಲ್ಡ್, ತಾವರೆಕೆರೆ, ತುಮಕೂರು ಸೇರಿದಂತೆ ವಿವಿಧೆಡೆಯಿಂದ ಕುಟುಂಬ ಸಹಿತರಾಗಿ ಬಂದ ಗ್ರಾಹಕರು ಮನರಂಜನೆಯಲ್ಲಿ ಮಿಂದೆದ್ದರು. ಇದಕ್ಕೂ ಮುನ್ನ ಬಿ. ಕೃಷ್ಣನ್ ದಂಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ರ ವಿಷ್ಣು, ಪುತ್ರಿ ರಶ್ಮಿ ಭಾಗವಹಿಸಿದ್ದರು.
ಬಾಂಧವ್ಯ ಗಟ್ಟಿಗೊಳಿಸಲು ವೇದಿಕೆ: ಕೃಷ್ಣನ್ ಮಾತನಾಡಿ, “ಗುಣಮಟ್ಟ ಮತ್ತು ಪರಿಶುದ್ಧತೆಗೆ ಭೀಮಾ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಗ್ರಾಹಕರಿಗೆ ಇದು ಅಚ್ಚುಮೆಚ್ಚು. ಹತ್ತಾರು ವರ್ಷಗಳಿಂದ ಜನ ಭೀಮಾದೊಂದಿಗೆ ನಂಟು ಹೊಂದಿದ್ದಾರೆ. ಆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ಇದೊಂದು ವೇದಿಕೆ’ ಎಂದರು.
ಇದೇ ಸಂದರ್ಭದಲ್ಲಿ ದಸರಾ, ದೀಪಾವಳಿ ಸೇರಿದಂತೆ ಹಬ್ಬದ ಸೀಜನ್‌ನಲ್ಲಿ (ಅ. 9ರಿಂದ ನ. 24) ಭೀಮಾ ಉತ್ಸವ ಹಮ್ಮಿಕೊಂಡಿತ್ತು. ಆ ಅವಧಿಯಲ್ಲಿ ಭೀಮಾ ಜುವೆಲರ್ನಲ್ಲಿ 25 ಸಾವಿರಕ್ಕಿಂತ ಹೆಚ್ಚು ಮೊತ್ತದ ಚಿನ್ನಾಭರಣಗಳನ್ನು ಖರೀದಿಸಿದವರಿಗೆ ಕೂಪನ್ ನೀಡಲಾಗಿತ್ತು. ನಂತರ ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿಗಳ ಆಯ್ಕೆ ಮಾಡಲಾಗಿತ್ತು. ಹೀಗೆ ಆಯ್ಕೆಯಾದವರಿಗೆ ಭಾನುವಾರ ನಡೆದ ಉತ್ಸವದಲ್ಲಿ ಕಾರು ಕೊಡುಗೆ ನೀಡಲಾಯಿತು.
ಶಿವಮೊಗ್ಗದಲ್ಲಿ ಶಾಖೆ: ನಗರದಲ್ಲಿ ಭೀಮಾ ಒಟ್ಟಾರೆ ಹತ್ತು ಶಾಖೆಗಳನ್ನು ಹೊಂದಿದೆ. ಇದಲ್ಲದೆ, ಉಡುಪಿ, ಮಂಗಳೂರಿನಲ್ಲೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಶೀಘ್ರದಲ್ಲೇ ಶಿವಮೊಗ್ಗದಲ್ಲಿ ವಹಿವಾಟನ್ನು ವಿಸ್ತರಿಸಲಿದೆ ಎಂದು ಇದೇ ವೇಳೆ ಭೀಮಾ ಜುವೆಲರ್ ಪ್ರಕಟಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.