ಬರಿಗಣ್ಣಿಗೇ ಕಂಡ ಕೆಂಪು ಚಂದಿರ


Team Udayavani, Jul 28, 2018, 11:43 AM IST

barigannige.jpg

ಬೆಂಗಳೂರು: ಚಂದಗ್ರಹಣ ಸಂದರ್ಭದಲ್ಲಿ ನಂಬಿಕೆಯಂತೆ ಅನೇಕರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರೆ, ಇನ್ನೂ ಹಲವರು ಬರಿಗಣ್ಣಿನಲ್ಲೇ ಕೆಂಪು ಚಂದ್ರನ್ನು ನೋಡಿ ಕೇತುಗ್ರಸ್ಥ ಚಂದ್ರಗ್ರಹಣದ ವಿಶೇಷ ಅನುಭವ ಪಡೆದರು.

ಶುಕ್ರವಾರ ರಾತ್ರಿ 11.54ರ ಸುಮಾರಿಗೆ ಆರಂಭವಾದ ಚಂದ್ರ ಗ್ರಹಣವನ್ನು  ನಗರದ ಜನರು ಕಣ್ತುಂಬಿಕೊಂಡರು. ಬಹುತೇಕರು ಬೆಳಗ್ಗೆಯಿಂದಲೇ  ವಿಶೇಷ ಪೂಜಾ ಕಾರ್ಯದಲ್ಲಿ ತೋಡಗಿಕೊಂಡಿದ್ದಲ್ಲದೇ, ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಗ್ರಹಣ ಸಮೀಪಿಸುವ ಮೊದಲೇ ಊಟ, ಉಪಹಾರಗಳನ್ನು ಮುಗಿಸಿಕೊಂಡಿದ್ದ ಅನೇಕರು ಉಳಿಕೆ ತಿಂಡಿ ತಿನಿಸುಗಳಿಗೆ ಸಂಪ್ರದಾಯದಂತೆ ಗರಿಕೆ ಹುಲ್ಲನ್ನು ಹಾಕಿಟ್ಟಿದ್ದರು. ಇನ್ನು ಕೆಲವರು ಗ್ರಹಣ ಆರಂಭವಾಗುತ್ತಿದ್ದಂತೆ ಸಾಮೂಹಿಕ ಭೋಜನ ಮಾಡುವ ಜತೆಗೆ ಬರಿಗಣ್ಣಿನಲ್ಲಿ ಚಂದ್ರನ್ನು ನೋಡಿ ಗ್ರಹಣದ ಅನುಭವ ಸವಿದರು. 

ಗವಿ ಗಂಗಾಧರೇಶ್ವರ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಇಸ್ಕಾನ್‌, ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ, ಕಲಾಸಿಪಾಳ್ಯದ ಕೋಟೆ ವೆಂಕಟರಮಣ ದೇವಸ್ಥಾನ, ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖೀ ಗಣಪತಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ಶ್ರೀ ಸಾಯಿಬಾಬಾ ದೇವಸ್ಥಾನ ಸೇರಿದಂತೆ ನಗರದ ಹಲವು ದೇವಸ್ಥಾನದಲ್ಲಿ  ಚಂದ್ರಗ್ರಹಣ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಭಕ್ತರು ಗ್ರಹಣಕ್ಕೂ ಮೊದಲೇ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಗ್ರಹಣ ಆರಂಭವಾಗುತ್ತಿದ್ದಂತೆ ಬಹುತೇಕ ಎಲ್ಲ ದೇವಸ್ಥಾನಗಳನ್ನು ಮುಚ್ಚಲಾಗಿದ್ದು, ಕೆಲ ದೇವಾಲಯಗಳಲ್ಲಿ ಗ್ರಹಣದ ಸಂದರ್ಭದಲ್ಲಿಯೇ ವಿಶೇಷ ಪೂಜೆ ನೆರವೇರಿತು. ಗ್ರಹಣ ಮುಗಿದ ಕೂಡಲೇ ದೇವರ ಮೂರ್ತಿಯನ್ನು ಶುಚಿಗೊಳಿಸಿ ವಿಶೇಷ ಪೂಜೆ ನಡೆಸಿದ್ದಾರೆ.

ಒಂದುಗಂಟೆ ಮೂರು ನಿಮಿಷ ಕಾಣಿಸಿಕೊಂಡಿದ್ದ ದೀರ್ಘಾವಧಿಯ ಚಂದ್ರಗ್ರಹಣವನ್ನು ಕಣ್ತುಂಬಿಕೊಳ್ಳಲು ನಗರದ ಜನರು ಮನೆ, ಕಟ್ಟಡ, ಬೀದಿಯಲ್ಲಿ ನಿಂತಿದ್ದರು. ಟಿ.ಚೌಡಯ್ಯ ರಸ್ತೆಯ ಜವಾಹರಲಾಲ್‌ ನೆಹರು ತಾರಾಲಯ, ವಿವಿಧ ವಿಜ್ಞಾನ ಸಂಘಟನೆಗಳು ಹಾಗೂ ಕೂಟಗಳು ಆಯೋಜಿಸಿದ್ದ ಗ್ರಹಣ ವೀಕ್ಷಣೆಯಲ್ಲಿ ಪಾಲ್ಗೊಂಡ ನೂರಾರು ಜನರು ದೂರದರ್ಶಕದ ಮೂಲಕ ಬಹು ಹತ್ತಿರದಲ್ಲಿ ಕೆಂಪು ಚಂದ್ರನನ್ನು ನೋಡಿ ಬೆರಗಾದರು.

ನಡುರಾತ್ರಿ 11.54ಕ್ಕೆ ಆರಂಭವಾದ ಗ್ರಹಣವು 1 ಗಂಟೆಗೆ ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣ ಆವರಿಸಿದ ಪರಿಣಾಮ ಚಂದ್ರನು ರಕ್ತದ ಬಣ್ಣಕ್ಕೆ ತಿರುಗಿದ್ದ ದೃಶ್ಯ ಮನಮೋಹಕವಾಗಿತ್ತು. 2.43 ಗಂಟೆವರೆಗೂ ಮುಂದುವರಿದ ಗ್ರಹಣ ನಸುಕಿನ ಹೊತ್ತಾದ 3.49 ಗಂಟೆಗೆ ಸಂಪೂರ್ಣ ಚಂದ್ರನನ್ನು  ಬಿಟ್ಟಿತು. ಚಂದ್ರನೊಂದಿಗೆ ಕೆಂಪುಬಣ್ಣದಿಂದ ಪ್ರಕಾಶಮಾನವಾಗಿ ಮಂಗಳ ಗ್ರಹ ಕಂಗೊಳಿದ್ದು ವಿಶೇಷವಾಗಿತ್ತು.

ತಾರಾಲಯದಲ್ಲಿ ಚಂದಿರ ವೀಕ್ಷಣೆ: ಜವಾಹರ ಲಾಲ್‌ ನೆಹರು ತಾರಾಲಯದಲ್ಲಿ ರಾತ್ರಿ 11.54ರಿಂದ ಶನಿವಾರ ಮುಂಜಾನೆ 3.49ರವರೆಗೆ ಗ್ರಹಣ ವೀಕ್ಷಣೆಗೆ ದೂರದರ್ಶಕಗಳ ವ್ಯವಸ್ಥೆ ಮಾಡಲಾಗಿತ್ತು. ವಿಜ್ಞಾನದಲ್ಲಿ ಆಸಕ್ತ ವಿದ್ಯಾರ್ಥಿಗಳು ತಾರಾಲಯಕ್ಕೆ ಹೋಗಿ ದೂರದರ್ಶಕದಲ್ಲಿ ಚಂದ್ರನನ್ನು ನೋಡಿ ಆನಂದಿಸಿದರು. ದೂರದರ್ಶಕದಲ್ಲಿ ಮಂಗಳ ಗ್ರಹ ಸಮೀಪದಿಂದ ನೋಡಲು ಸಾಧ್ಯವಾಗಿದೆ. ಚಂದ್ರ ಗ್ರಹಣದ ವಿಶೇಷತೆ ವೈಜ್ಞಾನಿಕ ಕಾರಣಗಳ ಬಗ್ಗೆ ತಜ್ಞರು ನೆರೆದಿದ್ದ ಜನ ಸಮೂಹಕ ವಿವರಿಸಿದರು.

ಸಾಧುಗಳ ಉಪವಾಸ: ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯ ಇಸ್ಕಾನ್‌ನಲ್ಲಿ ಶುಕ್ರವಾರ ರಾತ್ರಿ 8.30ಕ್ಕೆ ಸಾರ್ವಜನಿಕ ದರ್ಶನ ನಿಲ್ಲಿಸಲಾಗಿತ್ತು. ಬಳಿಕ 120 ಸಾಧುಗಳು ಉಪವಾಸವಿದ್ದು, ಮುಂಜಾನವೆರೆಗೆ ಭಜನೆ ಮಾಡಿದರು. ಸಂಜೆ 7 ಗಂಟೆಯ ವರೆಗೆ ಪ್ರಸಾದ ವಿತರಣೆ ನಡೆದಿತ್ತು. ಪ್ರತಿ ದಿನ ಮುಂಜಾನೆ 4.15 ಗಂಟೆಗೆ ಕೃಷ್ಣರಾಧೆಗೆ ಮಹಾಪೂಜೆ ಆರಂಭವಾಗುತ್ತದೆ. ಗ್ರಹಣದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ 4.30 ಗಂಟೆಗೆ ಮಹಾಪೂಜೆ ಆರಂಭವಾಯಿತು.

ಟೌನ್‌ಹಾಲ್‌ನಲ್ಲಿ ಚಂದ್ರ: ಗ್ರಹಣ ಹಿಡಿದ ಚಂದ್ರನನ್ನು ಬರಿಗಣ್ಣಿನಲ್ಲೇ ನೋಡಬಹುದಾದರೂ ದೂರದರ್ಶಕದಲ್ಲಿ ಮತ್ತಷ್ಟು ನಿಖರವಾಗಿ ಗ್ರಹಣ ಕಾಣಲಿದೆ ಎಂಬ ಉದ್ದೇಶದಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕಾಡು ಮಲ್ಲೇಶ್ವರ ಗೆಳೆಯರ ಬಳಗ ಮೊದಲಾದ ಸಂಘಟನೆಗಳು ಟೌನ್‌ಹಾಲ್‌ ಮುಂಭಾಗದಲ್ಲಿ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರು. ರಾತ್ರಿ 11.54 ರಿಂದ 1.43 ಗಂಟೆವರೆಗೆ ಸಾರ್ವಜನಿಕರು ಗ್ರಹಣ ಸುತ್ತಿದ ಚಂದ್ರನನ್ನು ನೋಡಿದರು. ಇದೇ ವೇಳೆ ಕೆಲ ಪ್ರಗತಿಪರ ಸಂಘಟನೆಗಳ ಸದಸ್ಯರು ಗ್ರಹಣದ ವೇಳೆಯೇ ಟೌನ್‌ ಹಾಲ್‌ ಬಳಿ ಸಾಮೂಹಿಕ ಭೋಜನ ಸವಿದು ಮೌಡ್ಯ ವಿರೋಧಿಸಿದರು.

ಮೋಡಕವಿದ ವಾತಾರಣ ಇಲ್ಲದ  ಕಡೆ ಅನೇಕರು ಚಂದ್ರಗ್ರಹಣವನ್ನು ದೂರದರ್ಶಕದ ಮೂಲಕ ನೋಡಿ ಖುಷಿಪಟ್ಟರು. ದೂರದರ್ಶಕದ ಮೂಲಕ ಚಂದ್ರನ್ನು ನೋಡಲಿ ಸಾಧ್ಯವಾಗದವರಿಗೆ ಪ್ರೊಜೆಕ್ಟರ್‌ ಮೂಲಕ ಚಂದ್ರ ಗ್ರಹಣದ ದರ್ಶನ ಮಾಡಲಾಯಿತು.
-ಪ್ರಮೋದ್‌ ಜಿ ಗಲಗಲಿ, ನಿರ್ದೇಶಕ ನೆಹರು ತಾರಾಲಯ

ಚಂದ್ರಗ್ರಹಣ ಸಂದರ್ಭದಲ್ಲಿ ನೇರವಾಗಿ ಮನೋಬಲ ದೌರ್ಬಲ್ಯ ಉಂಟಾಗುವ ಹಿನ್ನೆಲೆಯಲ್ಲಿ ಹಲವಾರು ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಗ್ರಹಣದ ನಂತರವೂ ಜಪತಪದಲ್ಲಿ ತೊಡಗುವುದುರಿಂದ ಮನಶಾಂತಿ ನೆಲೆಸುತ್ತದೆ.
-ವಿಠಲಾಚಾರ್ಯ, ಸಂಸ್ಕೃತ ಪಂಡಿತ

ಟಾಪ್ ನ್ಯೂಸ್

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

1-swami-sm-bg

Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.