ತಂಬಾಕು ಬಳಕೆ ಕಡಿಮೆ ಮಾಡುವಲ್ಲಿ ಪೋಷಕರ ಪಾತ್ರ ಮುಖ್ಯ
Team Udayavani, Jun 1, 2021, 10:29 AM IST
ಬೆಂಗಳೂರು: ತಂಬಾಕು ಬಳಕೆ ಕಡಿಮೆ ಮಾಡು ವಲ್ಲಿ ಮಕ್ಕಳು, ಪೋಷಕರು, ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ವಿಶ್ವ ತಂಬಾಕು ರಹಿತ ದಿನಾಚರಣೆ 2021ರ ಅಂಗವಾಗಿ ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕ (ಸಿಎಫ್ಟಿಎಫ್ಕೆ) ಸೋಮವಾರ ಆಯೋಜಿಸಿದ್ದ ವಾಯ್ಸ ಫಾರ್ ಟೊಬ್ಯಾಕೊ-ಫ್ರೀ ಜನರೇಶನ್ ವೆಬಿನಾರ್‌ನಲ್ಲಿ ಮಾತಾನಾಡಿದರು. ಮಕ್ಕಳು ತಮ್ಮ ಮನೆಯ ವಾತಾವರಣದಿಂದ ಹೆಚ್ಚುಕಲಿಯುತ್ತಾರೆ. ಮನೆಗಳಲ್ಲೇ ತಂಬಾಕುಬಳಕೆ ನಿಲ್ಲಬೇಕು. ತಂಬಾಕು ಬಳಕೆ ಕಡಿಮೆ ಮಾಡುವಲ್ಲಿ ಮಕ್ಕಳು, ಪೋಷಕರು, ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ತನ್ನ ಬಳಕೆದಾರರನ್ನು ಬಲಿಪಡಿಯುವ ಕೆಲವೇ ಉತ್ಪನ್ನಗಳಲ್ಲಿ ತಂಬಾಕು ಕೂಡ ಒಂದು. ಚಲನಚಿತ್ರ ಮತ್ತು ಜಾಹೀರಾತುಗಳಲ್ಲಿ ತಂಬಾಕನ್ನು ವೈಭವೀಕರಿಸುವುದು ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ತಂಬಾಕು ಬಳಕೆಯನ್ನು ತಗ್ಗಿಸಲು ಮನವಿಪತ್ರದಲ್ಲಿ ಮುಂದಿಟ್ಟಿರುವ ಶಿಫಾರಸ್ಸುಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭರವಸೆ ನೀಡಿದರು.
ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕದ (ಸಿಎಫ್ಟಿಎಫ್ಕೆ) ಸಂಚಾಲಕರಾದ ಎಸ್. ಜೆ. ಚಂದರ್ ಮಾತನಾಡಿ, ತಂಬಾಕು ಅಪ್ರಾ ಪ್ತರ ಮೇಲೆ ವ್ಯಸನಕಾರಿ ಪ್ರಭಾವ ಬೀರುತ್ತದೆ. ಮಕ್ಕ ಳನ್ನು ಸುಲಭವಾಗಿ ಪ್ರಭಾವಿಸಬಹುದು. ಇದರಿಂದ ಮಕ್ಕಳು ತಂಬಾಕು ಉದ್ಯಮದ ಮುಖ್ಯ ಗುರಿಯಾ ಗಿದ್ದಾರೆ. ಅಪ್ರಾಪ್ತರಿಗೆ ತಂಬಾಕಿನ ಲಭ್ಯತೆಯನ್ನು ನಿಷೇಧಿಸಬೇಕು. ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಈಗ ಪ್ರಾರಂಭಿಸಿರುವ ಅಭಿಯಾನ ಮುಂದಿನದಿನಗಳಲ್ಲಿಬಹುದೊಡ್ಡಚಳುವಳಿಯಾಗಿ ಹೊರಹೊಮ್ಮಲಿದೆ ಎಂದರು.
ಕ್ಯಾನ್ಸರ್ ತಜ್ಞ ಡಾ. ರಮೇಶ್ ಬಿಳಿಮಗ್ಗ, ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್, ನಿಮ್ಹಾನ್ಸ್ ನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಹಾಗು ಟೊಬ್ಯಾಕೊ ಕ್ವಿಟ್‌ಲೆçನ್‌ನ ಉಸ್ತುವಾರಿ ಡಾ. ಪ್ರತಿಮಾ ಮೂರ್ತಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಯೂನಿವರ್ಸಿಟಿಯಕಾನೂನು ಪ್ರಾಧ್ಯಾಪಕ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಅಶೋಕ್ ಆರ್. ಪಾಟೀಲ್, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಮತ್ತು ಇತರರು ಮಕ್ಕಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ವೆಬಿನಾರ್‌ನಲ್ಲಿ ಭಾಗವಹಿಸಿದರು.
ತಂಬಾಕು ಬಳಕೆ: ಭಾರತ ಎರಡನೇ ಸ್ಥಾನದಲ್ಲಿ : ತಂಬಾಕು ಬಳಕೆದಾರರ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದ್ದು (268 ಮಿಲಿಯನ್), ಪ್ರತಿವರ್ಷ 13 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತ್ತಿದ್ದಾರೆ. ಭಾರತದಲ್ಲಿನ ಎಲ್ಲ ವಿಧದ ಕ್ಯಾನ್ಸರ್ ಗಳಿಗೆ ತಂಬಾಕು ಬಳಕೆ ಶೇ.27 ರಷ್ಟು ಕಾರಣವಾಗಿದೆ.ಯುವಜನರಲ್ಲಿ ತಂಬಾಕು ಬಳಕೆಕುರಿತ ಜಾಗತಿಕ ಸಮೀಕ್ಷೆ ಪ್ರಕಾರ, ಭಾರತದಲ್ಲಿ ಶೇ. 14.6 ಕ್ಕಿಂತಲೂ ಹೆಚ್ಚು ಹದಿಹರೆಯದವರು(13-15 ವರ್ಷದವರು) ತಂಬಾಕನ್ನು ಬಳಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.