ನೃಪತುಂಗ ರಸ್ತೆ ಟ್ರಾಫಿಕ್ ಬೇರೆಡೆಗೆ ಶಿಫ್ಟ್
Team Udayavani, Feb 28, 2017, 12:32 PM IST
ಬೆಂಗಳೂರು: ಟೆಂಡರ್ ಶ್ಯೂರ್ ಯೋಜನೆ ಅಡಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ನೃಪತುಂಗ ರಸ್ತೆಯಲ್ಲಿ ಸೋಮವಾರ ರಾತ್ರಿಯಿಂದಲೇ ಸಂಚಾರ ಸ್ಥಗಿತಗೊಂಡಿದ್ದು, ಮಂಗಳವಾರ ಬೆಳಿಗ್ಗೆಯಿಂದ ಇದರ ಬಿಸಿ ಈ ಮಾರ್ಗದ ವಾಹನ ಸವಾರರಿಗೆ ತಟ್ಟಲಿದೆ.
“ಪೀಕ್ ಅವರ್’ನಲ್ಲಿ ಪ್ರತಿ ಗಂಟೆಗೆ ನೃಪತುಂಗ ರಸ್ತೆಯಲ್ಲಿ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಮಂಗಳವಾರದಿಂದ ಆ ವಾಹನಗಳ ಓಟಕ್ಕೆ ಬಹುತೇಕ ಬ್ರೇಕ್ ಬೀಳಲಿದೆ. ಇದರಿಂದ ವಾಹನದಟ್ಟಣೆ ಈಗ ಪಕ್ಕದ ಕಬ್ಬನ್ ಉದ್ಯಾನಕ್ಕೆ ಸ್ಥಳಾಂತರಗೊಳ್ಳಲಿದೆ. ಮುಂದಿನ ಸುಮಾರು ಎರಡು ತಿಂಗಳ ಕಾಲ ಈ ಮಾರ್ಗದಲ್ಲಿನ ವಾಹನಸವಾರರು ಎಂದಿಗಿಂತ ತುಸು ಹೆಚ್ಚು ಟ್ರಾಫಿಕ್ ಸಮಸ್ಯೆ ಅನುಭವಿಸಲಿದ್ದಾರೆ.
ನೃಪತುಂಗ ರಸ್ತೆಯಲ್ಲಿ ರಾತ್ರಿಯಿಂದಲೇ ಬ್ಯಾರಿಕೇಡ್‌ಗಳನ್ನು ಹಾಕಿ, ವಾಹನ ಸವಾರರಿಗೆ ಅನುಕೂಲವಾಗುವಂತೆ ಪರ್ಯಾಯ ಮಾರ್ಗದ ಸೂಚನಾ ಫಲಕಗಳನ್ನು ಅಳವಡಿಕೆ ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 14 ಮೀ. ರಸ್ತೆಯಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ 7 ಮೀ.ನಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಭಾರಿ ವಾಹನಗಳು ಹಾಗೂ ಈ ಮಾರ್ಗದಲ್ಲಿರುವ ಕಚೇರಿ ಸಿಬ್ಬಂದಿ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕಚೇರಿ ವಾಹನಗಳಿಗೆ ಅವಕಾಶ ಬೆಸ್ಕಾಂ ಕಚೇರಿ, ಮಾರ್ಥಾಸ್ ಆಸ್ಪತ್ರೆ, ಕಾಲೇಜು, ಮಿಥಿಕ್ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಆರ್‌ಬಿಐ ಕಚೇರಿ, ಪೊಲೀಸ್ ಮಹಾನಿರ್ದೇಶಕ ಕಚೇರಿಗಳು ಈ ಮಾರ್ಗದಲ್ಲಿವೆ. ಅಲ್ಲಿಗೆ ಸ್ವಂತ ವಾಹನಗಳಲ್ಲಿ ಬರುವವರು ದೂರದಲ್ಲೇ ನಿಲುಗಡೆ ಮಾಡಿ, ಬರುವುದು ಅನಿವಾರ್ಯ. ಆಸ್ಪತ್ರೆಗೆ ಬರುವ ರೋಗಿಗಳಿಗೆ ನಿಯಮದಲ್ಲಿ ತುಸು ಸಡಿಲಿಕೆ ಆಗಬಹುದು.
ಕೆ.ಆರ್. ರಸ್ತೆ ಕಡೆಯಿಂದ ಬರುವವರು ನೃಪತುಂಗ ರಸ್ತೆಗೆ ಪರ್ಯಾಯವಾಗಿ ಕಬ್ಬನ್ ಉದ್ಯಾನದೊಳಗೆ ತೆರಳಿ, ಸೆಂಚುರಿ ಕ್ಲಬ್ ಮುಂದೆ ಹಾದು, ಕೇಂದ್ರ ಗ್ರಂಥಾಲಯದ ಮೂಲಕ ಹಡ್ಸನ್ ವೃತ್ತ ಸೇರಬೇಕಾಗುತ್ತದೆ. ಕಸ್ತೂರ ಬಾ ರಸ್ತೆಯ ಸಿದ್ದಲಿಂಗಯ್ಯ ವೃತ್ತದ ಮುಖಾಂತರ ಕಬ್ಬನ್ ಪಾರ್ಕ್‌ನ ನಗರ ಕೇಂದ್ರ ಗ್ರಂಥಾಲಯಕ್ಕೆ ಸಂಚರಿಸಬಹುದು. ಕಬ್ಬನ್ ಪಾರ್ಕ್ ರಸ್ತೆಯಲ್ಲಿ ಜೆ.ಎಂ.ಎಂ ನ್ಯಾಯಲಯಕ್ಕೆ ಬರುವ ವಾಹನಗಳ ನಿಲುಗಡೆ ಮಾಡುತ್ತಿದ್ದು, ಇದನ್ನು ತಾತ್ಕಾಲಿಕವಾಗಿ ಕೆ.ಜಿ. ರಸ್ತೆಯ ಬನ್ನಪ್ಪ ಪಾರ್ಕ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾತ್ರಿ 10ರವರೆಗೆ ಮಾತ್ರ ಸಂಚಾರ?
ನೃಪತುಂಗ ರಸ್ತೆಗೆ ಪರ್ಯಾಯ ಮಾರ್ಗ ಕಬ್ಬನ್ ಉದ್ಯಾನದಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ನಾಲ್ಕು ವಾರಗಳ ಮಟ್ಟಿಗೆ ಲಘುವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಆಯುಕ್ತ ಪಿ.ಸಿ. ರೇ ಸ್ಪಷ್ಟಪಡಿಸಿದ್ದಾರೆ. ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ಈ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದು. ಇನ್ನು ಉದ್ಯಾನದಲ್ಲಿ ನಿಲುಗಡೆ ಆಗುತ್ತಿರುವ ಜೆಎಂಎಂ ನ್ಯಾಯಾಲಯದ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.
ಭಾನುವಾರ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ನಾಲ್ಕು ವಾರಗಳ ನಂತರ ಕಾಮಗಾರಿ ಮುಂದುವರಿದಿದ್ದರೆ, ಅಗತ್ಯತೆಯನ್ನು ನೋಡಿಕೊಂಡು ಅವಕಾಶ ಕಲ್ಪಿಸಲಾಗುವುದು ಎಂದು ರೇ ತಿಳಿಸಿದ್ದಾರೆ. ರಾತ್ರಿ 10ರ ನಂತರವೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ, ಉದ್ಯಾನದಲ್ಲಿರುವ ಪಕ್ಷಿಗಳಿಗೆ, ಗಿಡಗಳ ಉಸಿರಾಟ ಕ್ರಿಯೆಗೆ ತೊಂದರೆ ಆಗುತ್ತದೆ.
ಅಲ್ಲದೆ, ರಾತ್ರಿ ಅಕ್ರಮ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ 10ರ ನಂತರ ಉದ್ಯಾನದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬಿಬಿಎಂಪಿ ಪ್ರಕಟಣೆಯಲ್ಲಿ 24 ಗಂಟೆಗಳೂ ಉದ್ಯಾನದಲ್ಲಿ ಸಂಚರಿಸಬಹುದು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.