ನಿದ್ರೆಯಲ್ಲಿದ್ದ ಸಿಎಂಗೆ ಈಗ ಎಚ್ಚರವಾಗಿದೆ
Team Udayavani, Aug 21, 2017, 11:28 AM IST
ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷ ರಾಜಕರಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಹೋರಾಟ ಆರಂಭಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ರಾಜಕೀಯ ಪ್ರೇರಿತ ದೂರ ದಾಖಲಿಸಿರುವುದನ್ನು ಖಂಡಿಸಿ ನಗರ ಜಿಲ್ಲಾ ಬಿಜೆಪಿ ವತಿಯಿಂದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಬಕರ್ಣನ ಅಣ್ಣ ಅಥವಾ ತಮ್ಮ ಇರಬೇಕು. ಸದಾ ನಿದ್ದೆಯಲ್ಲೇ ಇರುತ್ತಾರೆ. ಈಗ ಎಚ್ಚರಾಗಿ, ಎರಡೇ ನಿಮಿಷದಲ್ಲಿ ಬಿ.ಎಸ್.ವೈ ವಿರುದ್ಧ ರಾಜಕೀಯ ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿದ್ದರೂ, ಯಾಕೆ ತನಿಖೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಫಿಕ್ಸರ್ ಸಿದ್ದು ಆಗಿದ್ದಾರೆ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಅಭಿವೃದ್ಧಿ ಮೂಲಕ ಸಿಕ್ಸರ್ ಸಿದ್ದು ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ನಾಲ್ಕುವರೆ ವರ್ಷದ ನಂತರ ಫಿಕ್ಸರ್ ಸಿದ್ದು ಆಗಿದ್ದಾರೆ. ಬಿಜೆಪಿ ನಾಯಕರ ಮೇಲೆ ಹಲವು ಕೇಸ್ ದಾಖಲಿಸುವ ಮೂಲಕ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ತಾವು ಮಾಡಿದ ಅನ್ಯಾಯ, ಭ್ರಷ್ಟಾಚಾರ ಹಾಗೂ ತಪ್ಪುಗಳನ್ನು ಮುಚ್ಚಿಹಾಕಲು ತಿಂಗಳಿಗೊಂದು ಕೇಸ್ ಹೊರ ತರುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯದ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಅನುದಾನ ಎಲ್ಲಿಗೆ ಹೋಯ್ತು ಎಂದು ಪ್ರಶ್ನೆ ಕೇಳಿದರೆ, ಹಳೇ ಕೇಸ್ ಮರು ದಾಖಲಿಸುವ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇವರ ಗೊಡ್ಡು ಬೇದರಿಕೆಗೆ ನಾವು ಹೆದರುವುದಿಲ್ಲ. ಎಸಿಬಿ, ಪೊಲೀಸ್ ಹಾಗೂ ಲೋಕಾಯುಕ್ತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ಏಕೆ ಮುಚ್ಚಿದಿರಿ ಎಂಬುದರ ಬಗ್ಗೆ ರಾಜ್ಯದ ಜನತೆಗೆ ಸಿಎಂ ಉತ್ತರ ನೀಡಬೇಕು. ನಿಮ್ಮ ಮೇಲಿನ ಕೇಸು, ಕಾಂಗ್ರೆಸ್ ನಾಯಕರ ಮರಳು ದಂಧೆ, ಭೂ ದಂದೆ, ಮುಚ್ಚಿ ಹಾಕುತ್ತಿದ್ದಿರಿ. ನಿಮಗೆ ಸಿಎಂ ಖುರ್ಚಿ ಮೇಲೆ ಕುಳಿತುಕೊಳ್ಳುವ ಯಾವ ಅರ್ಹತೆಯೂ ಇಲ್ಲ ತಕ್ಷಣವೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
“ರಾಜ್ಯದಲ್ಲಿ ನಿಷ್ಟಾವಂತ ಅಧಿಕಾರಿಗಳಿಗೆ ಉಳಿಗಾಲ ಇಲ್ಲ. ತಮಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಹುದ್ದೆಗೆ ನೇಮಿಸುತ್ತಿದ್ದಾರೆ. ಹಲವು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರು ಕೇಂದ್ರದ ಸೇವೆಗೆ ಹೋಗುತ್ತಿದ್ದಾರೆ. ಬಸವರಾಜೇಂದ್ರ ಅವರ ಕೊಲೆ ಅಥವಾ ಆತ್ಮಹತ್ಯೆ ಮಾಡಿಸಲು ಸಿಎಂ ಯತ್ನಿಸುತ್ತಿದ್ದಾರೆ,’ ಎಂದು ಶೋಭಾ ಗಂಭೀರ ಆರೋಪ ಮಾಡಿದರು.
ಸೇಡಿಗೆ ಮತ್ತೂಂದು ಹೆಸರೇ ಸಿಎಂ: ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ ಮಾತನಾಡಿ, ಸೇಡಿಗೆ ಮತ್ತೂಂದು ಹೆಸರಾಗಿರುವ ಸಿದ್ದರಾಮಯ್ಯನವರು ಮಾಡಿರುವ ಕುತಂತ್ರ ಬಟ್ಟ ಬಯಲಾಗಿದೆ. ಎಸಿಬಿಯನ್ನು ದುರ್ಬಳಕೆ ಮಾಡಿ, ಲೋಕಾಯುಕ್ತಕ್ಕೆ ದಿಕ್ಕು ದೆಸೆ ಇಲ್ಲದಂತೆ ಮಾಡಿದ್ದೀರಿ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಅಪಾದನೆ ಮಾಡಿ, ಜನರ ಭಾವನೆಯನ್ನು ಕೆರಳಿಸುತ್ತಿದ್ದೀರಿ. 35 ವರ್ಷದಲ್ಲಿ ರಾಜ್ಯದ ಯಾವ ಮುಖ್ಯಮಂತ್ರಿಯೂ ಇಂಥ ಕೀಳು ಮಟ್ಟದ ರಾಜಕಾರಣ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಬಾಯಲ್ಲಿ ಹೇಳವುದು ಭಗದ್ಗೀತೆ, ಆದರೆ ಮಾಡುವುದು ಕೀಳುಮಟ್ಟದ ಕೆಲಸ ಎಂದು ದೂರಿದರು.
ಅರ್ಕವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ವರದಿ ನೀಡಿದ್ದೇನೆ. ಅದನ್ನು ತೀರ್ಮಾನಿಸಲು ಕಾಚಾಚಾರಕ್ಕೆ ಒಂದು ಆಯೋಗ ರಚನೆ ಮಾಡಲಾಗಿದೆ. ಎಸಿಬಿ ಅಧಿಕಾರಿಗಳಿಗೆ ಆಶ್ವಾಸನೆ ನೀಡಿ, ಅವರನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದಿರಿ. ಪೊಲೀಸ್ ಅಧಿಕಾರಿಗಳು ನಿಮ್ಮ ಮನೆಯ ಸೊತ್ತಾಗಿದ್ದಾರೆ. ನಿಮ್ಮ ಕೀಳು ನಡವಳಿಕೆ ಇನ್ನಾದರೂ ಬದಲಿಸಿಕೊಂಡು ರಾಜೀನಾಮೆ ನೀಡಿ, ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಶಿವರಾಮ ಕಾರಂತ ಬಡವಣೆಯೇ ಇಲ್ಲ ಎಂದು ಹೈ ಕೋರ್ಟ್ ದ್ವಿಸದಸ್ಯ ಪೀಠವೇ ಹೇಳಿದೆ. ಅರ್ಕಾವತಿ ಬಡವಾಣೆಗೆ 660 ಎಕರೆಗೆ ಸಿಎಂ ಸಿದ್ದರಾಮಯ್ಯ ಅವರೇ ಎನ್‌ಒಸಿ ನೀಡಿದ್ದಾರೆ. ಹಾಗೆಯೇ ಅವರ ಮೇಲೆ 16 ಕೇಸ್ ಇದೆ. ಕಾಂಗ್ರೆಸ್ ಪಟಾಲಂಗಳ ಮೇಲೆ ಇರುವ ಕೇಸ್ ಏನಾಯ್ತು? ಎಂದು ಪ್ರಶ್ನಿಸಿದರು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕ ವೈ.ಎ.ನಾರಾಯಣ ಸ್ವಾಮಿ ಸೇರಿದಂತೆ ಬಿಜೆಪಿನಾಯಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.