![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 19, 2019, 3:07 AM IST
ಬೆಂಗಳೂರು: ಸಂಚಾರದಟ್ಟಣೆ ಸಮಸ್ಯೆಗೆ ಸಂಬಂಧಿಸಿದ ಪರಿಹಾರ ಕ್ರಮಗಳು ಬದಲಾಗಬೇಕಿದ್ದು, ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ “ಸಮಗ್ರ ಸಮೂಹ ಸಾರಿಗೆ ವ್ಯವಸ್ಥೆ’ ಬಲಪಡಿಸುವುದು ಸರ್ಕಾರದ ಆದ್ಯತೆ ಆಗಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್ ವರ್ಮ ಅಭಿಪ್ರಾಯಪಟ್ಟರು.
“ಉದಯವಾಣಿ’ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ “ದಾರಿ ಯಾವುದಯ್ಯ ಸಂಚಾರಕೆ…’ ಕುರಿತ ಸಂವಾದದಲ್ಲಿ ತಮ್ಮ ವಿಚಾರಗಳನ್ನು ಮುಂದಿಟ್ಟ ಅವರು, “ನಗರದಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೆ ರೂಪಿಸುತ್ತಿರುವ ಯೋಜನೆಗಳು ಬದಲಾಗಬೇಕಿವೆ. ಮೆಟ್ರೋ ಜಾಲ ತ್ವರಿತಗತಿಯಲ್ಲಿ ವಿಸ್ತರಣೆ ಆಗಬೇಕು. ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಲ್ಪಿಸಬೇಕು. ಜತೆಗೆ ಸೈಕಲ್ ಬಳಕೆ, ಪಾದಚಾರಿಗಳಿಗೆ ಅವಕಾಶ ಕಲ್ಪಿಸಬೇಕಿದೆ ಎಂದರು.
ಜನರು ಸಮೂಹ ಸಾರಿಗೆ ವ್ಯವಸ್ಥೆಯಿಂದ ಮಾತ್ರ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಶೀಘ್ರ ಹಾಗೂ ಸುರಕ್ಷಿತವಾಗಿ ತಲುಪಬಹುದು. ಒಂದು ನಿರ್ದಿಷ್ಟ ಸ್ಥಳಕ್ಕೆ ನಿಯಮಿತವಾಗಿ ಬಸ್‌ಗಳು ಸಂಚರಿಸಿದಾಗ ಜನ ಸ್ವಂತ ವಾಹನಗಳನ್ನು ಬಿಟ್ಟು ಬಸ್‌ಗಳಲ್ಲಿ ಸಂಚರಿಸುತ್ತಾರೆ. ಅದೇ ರೀತಿ, ಮೆಟ್ರೋ, ಸೈಕಲ್ ಪಥ ಹಾಗೂ ಉತ್ತಮ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿದರೆ ಶೇ. 80-90ರಷ್ಟು ಜನ ಸಮೂಹ ಸಾರಿಗೆಯತ್ತ ಮುಖಮಾಡುತ್ತಾರೆ. ಇದರಿಂದ ನಗರದ ಸಂಚಾರದಟ್ಟಣೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಪ್ರತಿಪಾದಿಸಿದರು.
ನೂರು ಮೀಟರ್‌ಗೆ ನೂರೆಂಟು ವಿಘ್ನ!: ವಿದೇಶಗಳಲ್ಲಿ ವಾಹನ ಬಳಕೆಗಿಂತಲೂ ಕಾಲ್ನಡಿಗೆಗೆ ಜನ ಇಚ್ಛಿಸುತ್ತಾರೆ. ಆದರೆ, ಬೆಂಗಳೂರಿನಲ್ಲಿ 100 ಮೀಟರ್ ನಡೆಯಲು ನೂರೆಂಟು ವಿಘ್ನಗಳು ಎದುರಾಗುತ್ತವೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್, ಮರ, ವಿದ್ಯುತ್ ಕಂಬ, ಓಎಫ್ಸಿ ಕೇಬಲ್, ಪಾದಚಾರಿ ರಸ್ತೆಯ ಸ್ಲಾéಬ್‌ಗಳು ಮುರಿದಿರುತ್ತವೆ. ಹೀಗಿರುವಾಗ, ಯಾರು ನಡೆದುಹೋಗಲು ಇಷ್ಟಪಡುತ್ತಾರೆ ಎಂದು ಆಶಿಶ್ ವರ್ಮ ತಿಳಿಸಿದರು.
ಮೂರನೇ ಹಂತಕ್ಕೆ ಬೇಸರ: ವಿದೇಶಗಳಲ್ಲಿ ಸಮೂಹ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ 100-200 ಮೀಟರ್‌ಗೆ ಮೆಟ್ರೋ ನಿಲ್ದಾಣ ಸಿಗುತ್ತದೆ. ನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆದ್ಯತೆ ಮೇರೆಗೆ “ನಮ್ಮ ಮೆಟ್ರೋ’ ಮಾರ್ಗ ನಿರ್ಮಿಸಬೇಕಾಗಿತ್ತು. ಆದರೆ, ಈ ಯೋಜನೆಯನ್ನು 3ನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.