ಸಂಶೋಧಕರಿಗೆ ಆಕರ ಗ್ರಂಥಗಳೇ ಅಲಭ್ಯ
Team Udayavani, Feb 25, 2017, 12:13 PM IST
ಬೆಂಗಳೂರು: ಅನುವಾದ ಕೃತಿಗಳು ವಿಷಯಾಂತರವಾಗದೆ ವೈವಿಧ್ಯ ಹಾಗೂ ಸಾಂಸ್ಕೃತಿಕ ಪ್ರಸ್ತುತತೆ ಹೊಂದಿರಬೇಕು ಎಂದು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ 211 ಕೃತಿಗಳನ್ನು ನಗರದ ನಯನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಂಶೋಧಕರಿಗೆ ಆಕರ ಗ್ರಂಥಗಳೇ ಸಿಗದಂತಾಗಿರುವುದು ಆತಂಕ ಮೂಡಿಸಿದೆ ಎಂದರು.
ಅನ್ಯ ರಾಷ್ಟ್ರ, ಸಮುದಾಯ ಹಾಗೂ ಜಗತ್ತಿನ ಬಗ್ಗೆ ತಿಳಿಸುವ ಅನ್ಯ ಭಾಷೆಯ ಅನುವಾದ ಕೃತಿಗಳು ವೈಜ್ಞಾನಿಕವಾಗಿ ಕ್ರಿಯಾಶೀಲತೆಯಿಂದ ಕೂಡಿರಬೇಕೆ ಹೊರತು ಯಥಾವತ್ತಾಗಿ ಭಟ್ಟಿ ಇಳಿಸಿದಂತಿರಬಾರದು. ಭಾರತೀಯ ಆಧುನಿಕತೆ ಏನು ಎಂಬುದನ್ನು ಈವರೆಗೆ ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗಿಲ್ಲ. ಈ ನಡುವೆ ದಲಿತ ಮತ್ತು ಬಂಡಾಯದ ನಂತರವೂ ಕುವೆಂಪು ಭಿನ್ನ ರೀತಿಯಲ್ಲಿ ಆಧುನಿಕತೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ವಿ. ನಾರಾಯಣ, ಸಾಮಾನ್ಯ ಓದುಗರನ್ನೇ ಪ್ರಧಾನ ಗುರಿಯಾಗಿಸಿಕೊಂಡು ಹೊಸ ಅನುವಾದ ಕೃತಿಗಳನ್ನು ಪ್ರಕಟಿಸಲಾಗಿದೆ. ಮುಂದಿನ 25 ವರ್ಷಗಳ ಕಾಲ ಸಂಶೋಧಕರು ಸಹ ಇವುಗಳನ್ನು ಮಾದರಿಯಾಗಿ ಉಲ್ಲೇಖೀಸಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರದ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು. ಪ್ರಾಧಿಕಾರದ ಸದಸ್ಯ ಡಾ. ನಟರಾಜ ಹುಳಿಯಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.