ಸೋಂಕು ತಡೆ ಸಾಧನಕ್ಕೆ ಬೇಕೇ ಮಾನದಂಡ


Team Udayavani, Apr 16, 2020, 12:24 PM IST

ಸೋಂಕು ತಡೆ ಸಾಧನಕ್ಕೆ ಬೇಕೇ ಮಾನದಂಡ

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ – 19 ತಡೆಗೆ ಲಾಕ್‌ ಡೌನ್‌ ಜಾರಿಯಲ್ಲಿದ್ದರೂ ಅಗತ್ಯ ವಸ್ತುಗಳ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ
ನೈರ್ಮಲ್ಯ ಕಾಪಾಡಿಕೊಳ್ಳುವ ಸಲುವಾಗಿ ಜನ ಸಮೂಹ ಸೇರುವ ಕಡೆ ಸೋಂಕು ನಿರೋಧಕ (ಡಿಸ್‌ಇನ್‌ಫೆಕ್ಟಂಟ್‌ ಟನ್ನಲ್‌) ದ್ವಾರ ಸಾಧನ ನಿರ್ಮಾಣ ಹೆಚ್ಚಾಗುತ್ತಿದೆ. ರಾಜಧಾನಿಯ ಯಶವಂತಪುರ ಎಪಿಎಂಸಿ ಮಾರುಕಟ್ಟೆ, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಹಲವೆಡೆ ಸೋಂಕು ನಿರೋಧಕ ದ್ವಾರ ಸಾಧನ ಅಳವಡಿಸಲಾಗುತ್ತಿದೆ. ಈ ಸಾಧನದಲ್ಲಿ ಸೋಡಿಯಂ ಹೈಪೋಕ್ಲೋರೈಟ್‌ ರಾಸಾಯನಿಕ ಬಳಸಲಾಗುತ್ತಿದ್ದು, ಇದರ ಮಿಶ್ರಣದಲ್ಲಿ ಏರುಪೇರಾದರೆ ಚರ್ಮಸಮಸ್ಯೆ, ಅಲರ್ಜಿ, ಕಣ್ಣಿಗೂ ಹಾನಿಕರವಾಗಿ ಪರಿಣಮಿಸುವ ಅಪಾಯವಿದೆ. ಹಾಗಾಗಿ ಸಾಧನ ಅಳವಡಿಕೆಗಳಿಗೆ ಕೆಲ ನಿರ್ದಿಷ್ಟ ಮಾನದಂಡ
ವಿಧಿಸಿ ಪಾಲಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬರುತ್ತಿದೆ.

ಲಾಕ್‌ಡೌನ್‌ ಜಾರಿಯಾದರೂ ಜನರಿಗೆ ದಿನನಿತ್ಯ ಬಳಸುವ ತರಕಾರಿ, ಆಹಾರ ಧಾನ್ಯ ಸೇರಿದಂತೆ ಎಪಿಎಂಪಿ ಮಾರುಕಟ್ಟೆ ವ್ಯಾಪಾರ- ವಹಿವಾಟಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಮಾರುಕಟ್ಟೆಗೆ ಸಾಕಷ್ಟು ಮಂದಿ ಭೇಟಿ ನೀಡುವ ಕಾರಣ ಸಾಮಾಜಿಕ ಅಂತರ ಹಾಗೂ ನೈರ್ಮಲ್ಯತೆ ಕಾಪಾಡುವ ಸಲುವಾಗಿ ಸೋಂಕು ನಿರೋಧಕ ದ್ವಾರ ಸಾಧನಗಳ ಬಳಕೆಗೆ ಅನಿವಾರ್ಯವಾಗಿದೆ. ಈ ದ್ವಾರದಲ್ಲಿ ಹಾದು ಹೋದಾಗ ರಾಸಾಯನಿಕ ದ್ರಾವಣವು ಇಡೀ ದೇಹಕ್ಕೆ ಸಿಂಪಡಣೆಯಾಗಲಿದೆ. ಇದರಿಂದ ಒಂದು ಹಂತದ ನೈರ್ಮಲ್ಯ ಕಾಪಾಡಲು ಅನುಕೂಲ ವಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ದೊಡ್ಡ ಜನ ಸಮೂಹಕ್ಕೆ ಸರಳವಾಗಿ ನೈರ್ಮಲ್ಯ ಕಾಯ್ದುಕೊಳ್ಳಬಹುದಾದ ವಿಧಾನ ಎಂಬುದಾಗಿ ಬಳಸಲಾಗುತ್ತಿದೆ.

ನೈರ್ಮಲ್ಯ ರಕ್ಷಣೆ ಜತೆಗೆ ಆ ದ್ವಾರದ ಮೂಲಕ ಹಾದು ಹೋದರೆ ಒಂದಿಷ್ಟು ಶುಚಿಯಾಗುತ್ತೇವೆ ಎಂಬ ಭಾವನೆಯ ಕಾರಣಕ್ಕೂ ಜನರೂ ಉತ್ಸಾಹದಿಂದಲೇ ಈ ದ್ವಾರಗಳನ್ನು ಬಳಸುತ್ತಿದ್ದಾರೆ. ಇದರಿಂದ ಉತ್ತೇಜಿತರಾಗಿರುವ ಜನಪ್ರತಿನಿಧಿಗಳು ಕೆಲವೆಡೆ ತಮ್ಮ ಸ್ವಂತ ಖರ್ಚಿನಲ್ಲಿ ಈ ಸಾಧನೆಗಳ ಅಳವಡಿಸಲು ಮುಂದಾಗಿದ್ದಾರೆ.

ಮಿಶ್ರಣ ಪ್ರಮಾಣ ಮುಖ್ಯ: ಸೋಂಕು ನಿರೋಧಕ ಸಾಧನದಲ್ಲಿ ಬಳಸುವ ಸೋಡಿಯಂ ಹೈಪೋಕ್ಲೋರೈಟ್‌ ಶೇ.0.5ರಿಂದ ಶೇ. 1ರಷ್ಟು ದುರ್ಬಲ ದ್ರಾವಣ ವಾಗಿರಬೇಕು. ದ್ರಾವಣವು ಈ ಪ್ರಮಾಣಕ್ಕಿಂತ ಹೆಚ್ಚಿನ ಪ್ರಬಲತೆಯಿಂದ ಕೂಡಿದ್ದರೆ ಚರ್ಮ ಸಮಸ್ಯೆ, ಅಲರ್ಜಿ ಕಾಣಿಸಿಕೊಳ್ಳಬಹುದು. ಜತೆಗೆ ಕಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಂಪಡಣೆಯಾದರೂ ತೊಂದರೆ ಉಂಟಾಗುವ ಅಪಾಯವಿರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಬಳಸಬೇಕು ಎನ್ನುತ್ತಾರೆ ರಾಜೀವ್‌ ಗಾಂಧಿ  ಎದೆರೋಗಗಳ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಶಶಿಧರ ಬುಗ್ಗಿ.

ಸಾವಯವ ದ್ರಾವಣ ಸಿಂಪಡಣೆ: ರಾಸಾಯನಿಕ ದ್ರಾವಣದ ಬದಲಿಗೆ ಸಾವಯವ ದ್ರಾವಣ ಬಳಸಿ ನೈರ್ಮಲ್ಯ ಕಾಪಾಡುವ ಪ್ರಯತ್ನ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಯಶಸ್ವಿಯಾಗಿ ನಡೆದಿದೆ. ಕಿತ್ತಲೆ ಹಣ್ಣು, ನಿಂಬೆ ಹಣ್ಣಿನ ರಸದಿಂದ ತೆಗೆದ ಸಿಟ್ರಿಕ್‌ ಆಮ್ಲವನ್ನು ನೀರಿನೊಂದಿಗೆ ಬೆರೆಸಿ ದುರ್ಬಲಗೊಳಿಸಿದ ದ್ರಾವಣ ಸಿದ್ಧಪಡಿಸಿ ಸಿಂಪಡಣೆ ಮೂಲಕ ಸಾವಯವ ವಿಧಾನದಲ್ಲೇ ನೈರ್ಮಲ್ಯಕ್ಕೆ ಒತ್ತು ನೀಡಿರುವುದು ಕಂಡುಬಂದಿದೆ. ಗಡಿ ಭಾಗದ ಗೌರಿಬಿದನೂರಿನಲ್ಲಿ
ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿದೆ. ಸರಳ ವಿಧಾನದಲ್ಲೇ ಸೋಂಕು ನಿರೋಧಕ ದ್ವಾರ ನಿರ್ಮಿಸಿದ್ದು, ಸಾವಯವ ದ್ರಾವಣವನ್ನೇ ಸಿಂಪಡಿಸಲಾಗುತ್ತಿದೆ. ಅಲ್ಲದೇ ಕಡಿಮೆ ವೆಚ್ಚದಲ್ಲಿ ಬಳಸಬಹುದಾಗಿದೆ.

ರಾಸಾಯನಿಕ ದ್ರಾವಣ ಬಳಸುವ ಸಾಧನದ ವೆಚ್ಚ ಒಂದು ಲಕ್ಷ ರೂ.ಗಳಾದರೆ ಸಾವಯವ ದ್ರಾವಣ ಬಳಸುವ ಸಾಧನದ ವೆಚ್ಚ 20ರಿಂದ 25 ಸಾವಿರ ರೂ. ಆಗಲಿದೆ. ಒಟ್ಟಾರೆ “ಮೇಕ್‌ ಇನ್‌ ಗೌರಿಬಿದನೂರು’ ಮಾದರಿಗೆ ಉತ್ತಮ ಸ್ಪಂದನೆ ಇದೆ ಎಂದು ಸೇವಾಸಿಂಧು ಯೋಜನಾ ನಿರ್ದೇಶಕ ವರಪ್ರಸಾದ ರೆಡ್ಡಿ ತಿಳಿಸಿದರು.

ಯಶವಂತಪುರ, ಕೋಲಾರ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವು ಎಪಿಎಂಸಿ ಮಾರುಕಟ್ಟೆಗಳಲ್ಲಿ 20ಕ್ಕೂ ಹೆಚ್ಚು ಸೋಂಕು ನಿರೋಧಕ ಸಾಧನಗಳನ್ನು ಅಳವಡಿಸಲಾಗಿದೆ. ಇದರಿಂದ ಮಾರುಕಟ್ಟೆ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಸಹಕಾರಿಯಾಗಿದೆ. ದ್ರಾವಣವನ್ನು ಸೂಕ್ತ ರೀತಿಯಲ್ಲೇ ಎಚ್ಚರಿಕೆಯಿಂದ ಬಳಸುವ ವ್ಯವಸ್ಥೆ ಕಲ್ಪಿಸಲಾಗಿದೆ.
● ಕರೀಗೌಡ, ಕೃಷಿ ಮಾರುಕಟ್ಟೆ ನಿರ್ದೇಶಕ

ಸೋಂಕು ನಿರೋಧಕ ದ್ವಾರ ಸಾಧನದಲ್ಲಿ ಬಳಸುವ ಸೋಡಿಯಂ ಹೈಪೋಕ್ಲೋರೈಟ್‌  ದ್ರಾವಣವನ್ನು ಶೇ.0.5ರಿಂದ ಶೇ. 1ರಷ್ಟು ದುರ್ಬಲ ದ್ರಾವಣವಾಗಿಸಿ
ಬಳಸುವುದು ಬಹಳ ಮುಖ್ಯ. ಈಚಿನ ದಿನಗಳಲ್ಲಿ ಈ ಸಾಧನಗಳ ಅಳವಡಿಕೆ ಹೆಚ್ಚಾಗಿದೆ. ಹಾಗಾಗಿ ಈ ಸಾಧನಗಳ ಬಳಕೆಗೆ ನಿರ್ದಿಷ್ಟ ಮಾನದಂಡ ರೂಪಿಸಿದರೆ
ಉಪಯುಕ್ತ.
● ಡಾ. ಶಶಿಧರ ಬುಗ್ಗಿ, ರಾಜೀವ್‌ ಗಾಂಧಿ ಸಂಸ್ಥೆಯ ಮಾಜಿ ನಿರ್ದೇಶಕ

ಟಾಪ್ ನ್ಯೂಸ್

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

3

Bengaluru: ಕ್ಯಾಬ್‌ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.