ಬೊಕ್ಕಸ ಬರಿದಾಗಿ ರಾಜ್ಯ ಸರ್ಕಾರ ದಿವಾಳಿ
Team Udayavani, Oct 15, 2017, 11:41 AM IST
ಬೆಂಗಳೂರು: “ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡಿದ್ದ ಸರ್ಕಾರ, ಆ
ಮೊತ್ತವನ್ನು ಅಪೆಕ್ಸ್ ಬ್ಯಾಂಕ್‌ಗೆ ಭರಿಸಲು ಹಣವಿಲ್ಲದೆ ಮೈಸೂರು ಮಿನರಲ್ಸ್‌ನ (ಎಂಎಂಎಲ್) 1,400 ಕೋಟಿ ರೂ. ಅಪೆಕ್ಸ್ ಬ್ಯಾಂಕ್‌ನಲ್ಲಿ ಠೇವಣಿ ಇಡಲು ಆದೇಶಿಸಿದೆ.
ನಿಯಮಾವಳಿಗಳಲ್ಲಿ ಅವಕಾಶವಿಲ್ಲದ ಕಾರಣ ಅದು ಸಾಧ್ಯವಿಲ್ಲ ಎಂದು ಎಂಎಂಎಲ್ ಹೇಳಿದ್ದರೂ ಒಪ್ಪದ ಸರ್ಕಾರ ಹಣ ಠೇವಣಿ ಇಡುವಂತೆ ಒತ್ತಡ ಹೇರುತ್ತಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, “ಸಂಸ್ಥೆಯ ಹಣವನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಠೇವಣಿಯಿಡಲು ನಿಯಮಗಳಲ್ಲಿ ಅವಕಾಶವಿಲ್ಲವೆಂದು ಎಂಎಂಎಲ್ ಹೇಳುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಆ ನಿಟ್ಟಿನಲ್ಲಿ ಒತ್ತಡ ಹೇರುತ್ತಿದ್ದು, ಇದು ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ’ ಎಂದು ಆರೋಪಿಸಿದರು.
ಭ್ರಷ್ಟಾಚಾರ, ಅವ್ಯವಹಾರಗಳ ಮೂಲಕ ಸರ್ಕಾರದ ಬೊಕ್ಕಸ ಲೂಟಿ ಮಾಡಿರುವ ಸರ್ಕಾರ, ಇದೀಗ ಯಾವುದಕ್ಕೂ ಹಣವಿಲ್ಲದೆ ಪರದಾಡುತ್ತಿದೆ. ಸಾಲಮನ್ನಾ ಮಾಡಿ 100 ದಿನ ಕಳೆದರೂ ಸಹಕಾರ ಬ್ಯಾಂಕ್‌ಗಳ ಖಾತೆಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಸೆಪ್ಟೆಂಬರ್ 3ರವರೆಗೆ ಸಾಲಮನ್ನಾ ಕುರಿತಂತೆ ಸರ್ಕಾರ ಸಹಕಾರ ಬ್ಯಾಂಕ್‌ಗಳಿಗೆ ಸುಮಾರು 2,500 ಕೋಟಿ ರೂ. ಮರುಪಾವತಿ ಮಾಡಬೇಕಿದ್ದು, ಇದುವರೆಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಇದರ ಪರಿಣಾಮ ರೈತರಿಗೆ ಸಾಲ ಮನ್ನಾದ ಅನುಕೂಲ ಇನ್ನೂ ಸಿಕ್ಕಿಲ್ಲ ಮತ್ತು ಹೊಸ ಸಾಲ ಪಡೆಯಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ತನ್ನ ದಿವಾಳಿತನ ತೋರಿಸಿಕೊಳ್ಳಲು ಮುಖವಿಲ್ಲದೆ ಎಂಎಂಎಲ್‌ನ ಹೆಚ್ಚುವರಿ ಹಣವನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಒತ್ತಡ ಹೇರುತ್ತಿದೆ ಎಂದು ಟೀಕಿಸಿದರು.
ಏನಿದು ವಿವಾದ?: ರೈತರ ಸಾಲಮನ್ನಾ ಯೋಜನೆ ಅತಿ ತುರ್ತಿನ ಯೋಜನೆಯಾಗಿದ್ದು, ಸಂಪನ್ಮೂಲ ಕ್ರೋಢೀಕರಿಸವುದು ಅತ್ಯಗತ್ಯವಾಗಿದೆ. ಆದ್ದರಿಂದ ಎಂಎಂಎಲ್‌ನ ಹೂಡಿಕೆ ಹೆಚ್ಚುವರಿ ಮೊತ್ತದಲ್ಲಿ 1,400 ಕೋಟಿ ರೂ.ಗಳನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವಂತೆ 2017ರ ಆ. 5ರಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಎಂಎಂಎಲ್‌ಗೆ ಆದೇಶಿಸಿದ್ದರು. ಆದರೆ, ಸಹಕಾರಿ ಸಂಸ್ಥೆಯಾದ ಅಪೆಕ್ಸ್ ಬ್ಯಾಂಕ್‌ನಲ್ಲಿ ಇಷ್ಟೊಂದು ಮೊತ್ತ ಹೂಡಿಕೆ ಮಾಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ.
ಆದ್ದರಿಂದ ಈ ಆದೇಶವನ್ನು ಮರುಪರಿಶೀಲಿಸುವಂತೆ ಎಂಎಂಎಲ್ ಸರ್ಕಾರವನ್ನು ಕೋರಿತ್ತು. ಈ ಮಧ್ಯೆ ಷರತ್ತುಗಳನ್ನು ಸಡಿಲಗೊಳಿಸಿದ ಸರ್ಕಾರ, ಎಂಎಂಎಲ್ ಇತರೆ ಬ್ಯಾಂಕ್‌ಗಳಲ್ಲಿ ಹೂಡಿದ್ದ ಠೇವಣಿ ಹಿಂಪಡೆದಾಗ ಉಂಟಾದ ನಷ್ಟವನ್ನು ಸರ್ಕಾರ ಭರಿಸುತ್ತದೆ. ಅಲ್ಲದೆ, ಬಡ್ಡಿದರ ಕೊರತೆಯನ್ನೂ ಸರ್ಕಾರ ತುಂಬುತ್ತದೆ. ಆದ್ದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ 1,400 ಕೋಟಿ ರೂ. ಅಪೆಕ್ಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವಂತೆ ಮತ್ತೂಮ್ಮೆ (ಸೆ. 26) ಆದೇಶ ಹೊರಡಿಸಿದೆ. ಅದರಂತೆ ಈ ಮೊತ್ತವನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಬೇಕೆಂದು ನಿರ್ದೇಶಿಸಿ ಎಂಎಂಎಲ್‌ಗೆ ಆದೇಶಿಸಿದ್ದ (ಅ. 9) ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು, ಇದರ ಜತೆ ಮುಖ್ಯಮಂತ್ರಿಗಳ ಅನುಮೋದನೆಯ ಪತ್ರವನ್ನೂ ಲಗತ್ತಿಸಿದ್ದಾರೆ ಎಂದು ಯಡಿಯೂರಪ್ಪ ವಿವರಿಸಿದರು.
ಬಂದ ಹಣವೆಲ್ಲ ಲೂಟಿ ಮಾಡಿದರು: ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆ ಎಂದು ಆರೋಪಿಸಿದ ಯಡಿಯೂರಪ್ಪ, ಇದುವರೆಗೆ ಕೇಂದ್ರದಿಂದ ಬಂದ ಅನುದಾನ ಸೇರಿ ತೆರಿಗೆ ಹಣವೆಲ್ಲ ಎಲ್ಲಿ ಹೋಯಿತು ಎಂಬುದಕ್ಕೆ ಹಣಕಾಸು ಇಲಾಖೆ ಹೊಣೆಯನ್ನೂ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕೆಂದು ಆಗ್ರಹಿಸಿದರು.
14ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ ಕೇಂದ್ರದಿಂದ 2,19,506 ಕೋಟಿ ರೂ. ಮಂಜೂರಾಗಿದ್ದು, ಕಳೆದ ಮೂರು ವರ್ಷದಲ್ಲಿ 1,13,478 ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಪ್ರಸ್ತುತ 1,33,409 ಕೋಟಿ ರೂ. ಸಾಲ ಪಡೆದಿದೆ. ಜತೆಗೆ ಪ್ರತಿ ವರ್ಷ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತಿದ್ದು,
ವಿಧಾನಸೌಧವನ್ನೂ ಮಾರ್ತಾರೆ
ಲಾಭದಲ್ಲಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನೂ (ಬಿಡಿಎ) ರಾಜ್ಯದ ಸರ್ಕಾರ ಸಾಲದ ಸುಳಿಗೆ ನೂಕಿದೆ. ಬಿಡಿಎ ತನ್ನ ಮೂಲ ನಿವೇಶನಗಳನ್ನು ಅಡವಿಟ್ಟು ಕೆನರಾ ಬ್ಯಾಂಕ್ ಮತ್ತು ಹುಡ್ಕೊà ಸಂಸ್ಥೆಯಿಂದ 573.23 ಕೋಟಿ ರೂ. ಸಾಲ ಪಡೆದಿದೆ. ವಿವಿಧ ಬಡಾವಣೆಯ ಜಮೀನುಗಳನ್ನು ಅಡವಿಟ್ಟು ಮತ್ತೆ 400 ಕೋಟಿ ರೂ. ಸೇರಿ ಇದುವರೆಗೆ ಒಟ್ಟು 973.23 ಕೋಟಿ ರೂ. ಸಾಲ ಪಡೆದಿದೆ. ಇಷ್ಟಾದರೂ ಬಾಕಿ ಬಿಲ್ ಪಾವತಿಸಲು ಸಾಧ್ಯವಾಗದೆ ಬಿಡಿಎ ಮತ್ತೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಇದರಿಂದ ಪಾರಾಗಲು 800 ಕೋಟಿ ರೂ. ಸಾಲ ಪಡೆಯುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ಸರ್ಕಾರ ಅಧಿಕಾರದಲ್ಲಿ ಮುಂದುವರಿದರೆ ಸಾಲ ತೀರಿಸಲು
ವಿಧಾನಸೌಧವನ್ನೂ ಮಾರಾಟ ಮಾಡಿಬಿಡುತ್ತಾರೆ.ಅದಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಯಡಿಯೂರಪ್ಪ ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.