9 ತಿಂಗಳಲ್ಲಿ ಉಕ್ಕಿನ ಸೇತುವೆ ಪೂರ್ಣ
Team Udayavani, Feb 7, 2018, 12:12 PM IST
ಬೆಂಗಳೂರು: ಬಿಬಿಎಂಪಿ ನಿರ್ಮಿಸುತ್ತಿರುವ ಉಕ್ಕಿನ ಸೇತುವೆ ಕಾಮಗಾರಿಯನ್ನು ಒಂಬತ್ತು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಮೇಯರ್ ಆರ್.ಸಂಪತ್‌ರಾಜ್ ತಿಳಿಸಿದ್ದಾರೆ.
ಉಕ್ಕಿನ ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಅವರು, ಜನರಿಗೆ ಅನುಕೂಲಕ್ಕಾಗಿ ಉಕ್ಕಿನ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಅದರಂತೆ ಶಿವಾನಂದ ವೃತ್ತದಲ್ಲಿ 483 ಮೀ. ಉದ್ದ ಹಾಗೂ 15 ಮೀ. ಅಗಲದ 4 ಪಥಗಳ ಉಕ್ಕಿನ ಸೇತುವೆಯನ್ನು 19.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸೇತುವೆಯು 16 ಕಂಬಗಳನ್ನು ಒಳಗೊಂಡಿರಲಿದೆ.
ಯೋಜನೆ ಪೂರ್ಣಗೊಂಡರೆ ಶೇಷಾದ್ರಿಪುರ ರೈಲ್ವೆ ಕೆಳಸೇತುವೆಯಿಂದ ರೇಸ್‌ಕೋರ್ಸ್ ಜಂಕ್ಷನ್‌ವರೆಗೆ ಒಟ್ಟು ಮೂರು ಮಾರ್ಗಗಳಲ್ಲಿ ಸಿಗ್ನಲ್ ಮುಕ್ತ ಸಂಚಾರ ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು. ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ
Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ
Bengaluru: ನಗರದ ಐಬಿಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಗ್ರಾಹಕರ ಆತಂಕ
Bengaluru: ಕುಡಿದು ಸ್ಕೂಲ್ ಬಸ್ ಓಡಿಸಿದ ಚಾಲಕರ ಲೈಸೆನ್ಸ್ ಅಮಾನತು
Bengaluru: ಬಸ್ ಚೇಸ್ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ
Controversy: ಅಂಬೇಡ್ಕರ್ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ
By-election: ರಾಹುಲ್ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?
Jamaica: ನಗ್ನವಾಗಿ ಲಗ್ನವಾದ 29 ಜೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.