ಸಮೀಕ್ಷೆ ನಡೆಸದೆ ವಸತಿ ಶಾಲೆಗಳ ಸ್ಥಾಪನೆ
Team Udayavani, Mar 28, 2017, 3:45 AM IST
ವಿಧಾನಸಭೆ:ರಾಜ್ಯದಲ್ಲಿ ವಸತಿ ಶಾಲೆಗಳನ್ನು ಸ್ಥಾಪಿಸುವ ಮುನ್ನ ಸಮೀಕ್ಷೆ, ಅಗತ್ಯತೆ, ಹಿಂದುಳಿಯುವಿಕೆ, ಆಯಾ ಪ್ರವರ್ಗದ ಜನಸಂಖ್ಯೆಯ ಸಾಕ್ಷರತೆ ಪ್ರಮಾಣ ಮಾಹಿತಿ ಸಂಗ್ರಹಿಸದೆ ವಸತಿ ಶಾಲೆ ಸ್ಥಾಪಿಸಿರುವುದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ತಿಳಿಸಿದೆ.
ಸೋಮವಾರ ಸದನದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಆರ್.ಅಶೋಕ್ ವರದಿ ಮಂಡಿಸಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಉಲ್ಲೇಖೀಸಿ ವಸತಿ ಶಾಲೆಗಳ ಸ್ಥಾಪನೆಯಲ್ಲಿ ಭೌಗೋಳಿಕವಾಗಿ ಸಮಾನತೆ ಅನುಸರಿಸಿಲ್ಲ ಎಂದು ತಿಳಿಸಲಾಗಿದೆ.
ವಸತಿ ಶಾಲೆಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡ ನಂತರ ಶಾಲೆಗಳಿಗೆ ಕಲ್ಪಿಸಬೇಕಾದ ಮೂಲಸೌಕರ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಶಾಲಾ ಕಟ್ಟಡ, ವಿದ್ಯಾರ್ಥಿ ನಿಲಯ, ಶೌಚಾಲಯ, ಗ್ರಂಥಾಯ, ಪ್ರಯೋಗ ಶಾಲೆ, ಆಟದ ಮೈದಾನ, ಕುಡಿಯುವ ನೀರು, ಹಾಸಿಗೆ, ದಿಂಬು, ಹೊದಿಕೆ ನೀಡದೆ ಶಾಲೆಗಲನ್ನು ಬಾಡಿಗೆ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ.
ವಸತಿ ಶಾಲೆಗಳ ಸ್ಥಾಪನೆಗೆ ಭೂಮಿ ಲಭ್ಯತೆ ಮತ್ತು ಹಣಕಾಸಿನ ಲಭ್ಯತೆ ಖಚಿತಪಡಿಸಿಕೊಲÛದೆ ಮೂಲಸೌಕರ್ಯ ಒದಗಿಸಲು ಬಿಡುಗೆ ಮಾಡಿದ ಆನುದಾನದಲ್ಲಿ 3.47 ಕೋಟಿ ರೂ. ಬಳಸದೆ ಜಿಲ್ಲಾಧಿಕಾರಿಗಳ ಬಳಿ ಉಳಿದಿದೆ. ಬ್ಯಾಂಕುಗಳಲ್ಲಿ ಬಡ್ಡಿ ದರ ಪರಿಶೀಲಿಸದ ಕಾರಣ 39 ಲಕ್ಷ ರೂ. ನಷ್ಟವುಂಟಾಗಿದೆ.ಶಾಲೆಗಳ ಕಟ್ಟಡ ಕಾಮಗಾರಿ ಒಬ್ಬ ಗುತ್ತಿಗೆದಾರ ಮತ್ತು ಮೇಲ್ವಿಚಾರಣೆ ಒಬ್ಬರೇ ಸಮಾಲೋಚಕರಿಗೆ ನೀಡಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. 135.60 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲು ಪಾರದರ್ಶಕ ಕಾಯ್ದೆಯಂತೆ ಕ್ರಮ ಕೈಗೊಂಡಿಲ್ಲ
ವಸತಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದ್ದು ಕೆಲವು ಶಾಲೆಗಳಲ್ಲಿ ಒಂದೇ ವಿಷಯಕ್ಕೆ ಹಲವು ಶಿಕ್ಷಕರ ನಿಯೋಜನೆ ಹಾಗೂ ಬಾಲಕಿಯರ ರಕ್ಷಣೆ ಮತ್ತು ಭದ್ರತೆ ಖಚಿತಪಡಿಸಿಕೊಲುÛವ ಯಾವುದೇ ಮಾರ್ಗಸೂತ್ರ ಪಾಲಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕುಷ್ಠಗಿ ಅಕ್ರಮ
ಅದೇ ರೀತಿ ಸಣ್ಣ ನೀರಾವರಿ ಇಲಾಖೆಯ ಕುಷ್ಠಗಿ ವಿಭಾಗದಲ್ಲಿ ತುಂಡುಗುತ್ತಿಗೆ ಕಾಮಗಾರಿಯಲ್ಲಿ 34.55 ಕೋಟಿ ರೂ. ದುರ್ಬಳಕೆಯಾಗಿರುವುದನ್ನೂ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಪತ್ತೆ ಹಚ್ಚಿದೆ.
ತುಂಡು ಗುತ್ತಿಗೆ ಆಧಾರದ ಮೇಲೆ ನಿಯಮ ಬಾಹಿರವಾಗಿ 1 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 3,938 ಕಾಮಗಾರಿಗಳನ್ನು 39.38 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಲಲಾಗಿದೆ. ಕಾಮಗಾರಿಗಳ ಅಂದಾಜು, ತುಂಡು ಗುತ್ತಿಗೆ ಪ್ರಸ್ತಾವನೆ, ಬಿಲ್ಲು ಪಾವತಿಸುವ ಪ್ರಕ್ರಿಯೆಗಳನ್ನು ವಿಭಾಗ ಹಾಗೂ ಉಪ ವಿಭಾಗ ಕಚೇರಿಗಳಲ್ಲಿಯೇ ನಿರ್ವಹಿಸಲಾಗಿದೆ.
ಸಮಿತಿಯ ನಿರ್ದೇಶನಂದಂತೆ ಇಲಾಖೆಯ ಅಧಿಕಾರಿಗಳು 2,504 ಕಾಮಗಾರಿಗಳ ಅನುಷ್ಟಾನದ ಬಗ್ಗೆ ಸ್ಥಳ ಪರಿವೀಕ್ಷಣೆ ನಡೆಸಿದಾಗ ಯಾವುದೇ ಕಾಮಗಾರಿ ಕೈಗೊಂಡಿಲ್ಲದಿರುವುದು ಪತ್ತೆಯಾಗಿದೆ.
ಕಾಮಗಾರಿ ಕೈಗೊಳ್ಳದೆ ಬಿಲ್‌ಗಳನ್ನು ಬಂಡವಾಳ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ನಗದೀಕರಿಸಲಾಗಿದೆ. ಹಗರಣದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪಾತ್ರವಿದ್ದು, ಕಾಮಗಾರಿ ಅನುಷ್ಟಾನಗೊಳಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಹಣ ವಸೂಲಾತಿಗಾಗಿ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ಬಸನಗೌಡ ಪಾಟೀಲ್ ಯತ್ನಾಳ್ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.