ನಾಟಕ ಅಕಾಡೆಮಿಯ ಮಹಾಪ್ರಬಂಧ ಪ್ರಯಾಸ
Team Udayavani, Dec 20, 2017, 12:11 PM IST
ಬೆಂಗಳೂರು: ಉದ್ಯೋಗ ಆಧರಿತ ಶಿಕ್ಷಣ ವ್ಯವಸ್ಥೆಯಿಂದಾಗಿ ರಂಗಭೂಮಿ ಕುರಿತಂತೆ ಅಧ್ಯಯನ, ಸಂಶೋಧನೆಗಳಿಗೆ ಬರ ಬಂದಿದೆ. ಈ ನಡುವೆಯೂ ಆಳ ಅಧ್ಯಯನ, ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದವರು ರಚಿಸುವ ಮಹಾಪ್ರಬಂಧಗಳು ದಾಖಲೆಗಳಾಗಿ ಮೂಲೆ ಸೇರುತ್ತಿವೆ.
ಆದರೆ ಇಂಥ ಮಹಾಪ್ರಬಂಧಗಳು ಗ್ರಂಥಾಲಯದ ರ್ಯಾಕ್ ಸೇರುವ ಬದಲು ರಂಗಾಸ್ತಕರು ಮತ್ತು ರಂಗಾಧ್ಯಯನಶೀಲರಿಗೆ ಗತ್ಯ ಮಾಹಿತಿ ನೀಡಲು ನೆರವಾಗಲಿ ಎಂಬ ದ್ದೇಶದಿಂದ ರಂಗದಾಖಲೀಕರಣಕ್ಕೆ ಮುಂದಾಗಿರುವ ಕರ್ನಾಟಕ ನಾಟಕ ಅಕಾಡೆಮಿ, ರಂಗಭೂಮಿ ಕುರಿತ ಪಿಎಚ್‌ಡಿ ಥೀಸಿಸ್‌ಗಳ ಕ್ರೋಢೀಕರಣ ಮತ್ತು ಡಿಜಿಟಲೀಕರಣಕ್ಕೆ ಮುಂದಾಗಿದೆ.
ನಾಟಕ ಅಕಾಡೆಮಿ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 130ರಿಂದ 150 ಮಂದಿ ರಂಗಭೂಮಿಗೆ ಸಂಬಂಧಿಸಿದ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸಿದ್ದಾರೆ. ಅವರ ಅನುಮತಿ ಪಡೆದು ಮಹಾಪ್ರಬಂಧಗಳನ್ನು ಸಂಗ್ರಹಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಇರಾದೆ ಅಕಾಡೆಮಿಯದ್ದು.
ಮಾಹಿತಿ ನೀಡದ ವಿವಿಗಳು: “ರಂಗಭೂಮಿಗೆ ಸಂಬಂಧಿಸಿದ ಸಂಶೋಧನೆ, ಅಧ್ಯಯನಗಳು ಒಂದೇ ಕಡೆ ಸಿಗುವಂತೆ ಮಾಡುವ ಸಲುವಾಗಿ, ರಾಜ್ಯದ ಎಲ್ಲ ವಿವಿಗಳು, ರಂಗ ತಂಡಗಳಿಗೆ, ಅಕಾಡೆಮಿ ನೋಂದಾಯಿತ ಕಲಾವಿದರಿಗೆ ಪತ್ರ ಬರೆದು, ಮಹಾಪ್ರಬಂಧಗಳನ್ನು ಮಂಡಿಸಿದವರ ವಿವರ ಕೋರಿದ್ದೇವೆ. ಪತ್ರ ಬರೆದು ತಿಂಗಳಾದರೂ ಮೈಸೂರು ವಿವಿ ಮತ್ತು ತುಮಕೂರು ವಿವಿ ಹೊರತುಪಡಿಸಿ ಬೇರಾವ ವಿವಿಯೂ ಮಾಹಿತಿ ನೀಡುವ ಮನಸು ಮಾಡಿಲ್ಲ.
ಮೈಸೂರು ವಿವಿ, ತನ್ನಲ್ಲಿ ರಂಗಭೂಮಿ ಕುರಿತು ಪಿಎಚ್‌ಡಿ ಪಡೆದವರ ಪಟ್ಟಿ ಒದಗಿಸಿದೆ. ತನ್ನಲ್ಲಿ ಯಾರೂ ರಂಗಭೂಮಿ ಕುರಿತು ಸಂಶೋಧನೆ ನಡೆಸಿಲ್ಲ ಎಂದು ತುಮಕೂರು ವಿವಿ ಹೇಳಿದೆ. ಉಳಿದಂತೆ ರಾಜ್ಯದ ಯಾವ ವಿಶ್ವವಿದ್ಯಾಲಯವೂ ಪತ್ರಕ್ಕೆ ಪ್ರತಿಕ್ರಿಯಿಸಿಲ್ಲ,’ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಜಿ.ಲೋಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೂವರು ಸದಸ್ಯರ ಸಮಿತಿ: ಕೃತಿಗಳ ಡಿಜಿಟಲೀಕರಣಕ್ಕೆ ಎಚ್.ವಿ.ವೆಂಕಟಸುಬ್ಬಯ್ಯ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ. ಅಕಾಡೆಮಿ ಸದಸ್ಯ ವಿದ್ಯಾರಣ್ಯ ಮತ್ತು ರಾಮಕೃಷ್ಣ ಬೆಳೂ¤ರು ಸಮಿತಿಯಲ್ಲಿದ್ದು, ಡಿಜಿಟಲೀಕರಣ ಸಂಬಂಧ ಕಂಪ್ಯೂಟರ್ ತಜ್ಞರಾಗಿರುವ ಇಬ್ಬರು ಯೋಜನಾ ಸಹಾಯಕರನ್ನು ಕೂಡ ನೇಮಿಸಿಕೊಳ್ಳಲು ಅಕಾಡೆಮಿ ಮುಂದಾಗಿದೆ. ಕಣಜದ ತಜ್ಞರು ಕೂಡ ಮಹಾಪ್ರಬಂಧದ ಡಿಜಿಟಲೀಕರಣಕ್ಕೆ ಕೈಜೋಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಹಾಪ್ರಬಂಧ ನೀಡಿದರೆ ಗೌರವ ಧನ: ರಂಗಭೂಮಿ ಮೇಲೆ ಪಿಎಚ್‌ಡಿ ಪಡೆದವರು ತನಗೆ ಮಹಾಪ್ರಬಂಧ ನೀಡದರೆ, ಅಕಾಡೆಮಿಯು ಅವರಿಗೆ ತಲಾ ಎರಡು ಸಾವಿರ ರೂ. ಗೌರವ ಧನ ನೀಡಲಿದೆ. ಜತೆಗೆ ಕೃತಿಕಾರರ ಹೆಸರು, ಪಿಎಚ್‌ಡಿ ಪದವಿ ನೀಡಿದ ವಿಶ್ವವಿದ್ಯಾಲಯ, ಅಧ್ಯಯನ ವಿಷಯ, ಮಾರ್ಗದರ್ಶಕರು ಇತ್ಯಾದಿ ಮಾಹಿತಿಯನ್ನು ಕೂಡ ಅಕಾಡೆಮಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಮಹಾಪ್ರಬಂಧಗಳ ಡಿಜಿಟಲೀಕರಣಕ್ಕಾಗಿಯೇ ಸುಮಾರು 17 ಲಕ್ಷ ರೂ.ಗಳನ್ನು ಮೀಸಡಲಾಗಿದೆ.
ಕಣಜದಲ್ಲಿ ಪ್ರಬಂಧ ಪ್ರಕಟ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಅಂತಾರ್ಜಾಲ ತಾಣ “ಕಣಜ’ (kanaja.in) ಸುಮಾರು 2 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿದೆ. ಇದುವರೆಗೂ 44 ಲಕ್ಷ ಮಂದಿ ಕಣಜಕ್ಕೆ ಭೇಟಿ ನೀಡಿದ್ದಾರೆ. ರಂಗಭೂಮಿಯ ಪರಂಪರೆಯ ಶಾಶ್ವತ ದಾಖಲೀಕರಣಕ್ಕೆ ವೇದಿಕೆ ನಿರ್ಮಿಸಲು ಹೊರಟಿರುವ ಅಕಾಡೆಮಿ, ರಂಗಭೂಮಿಗೆ ಸಂಬಂಧಿಸಿದ ಎಲ್ಲ ಪ್ರಬಂಧಗಳನ್ನು “ಕಣಜ’ದಲ್ಲಿ ಪ್ರಕಟಿಸಲಿದೆ. ಜತೆಗೆ ಕಣಜದಿಂದ ಲಿಂಕ್ ಪಡೆದು ಅದನ್ನು ಅಕಾಡೆಮಿಯ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಿದೆ.
ಆರಂಭದಲ್ಲಿ ಮಹಾಪ್ರಬಂಧಗಳನ್ನು ಕಣಜದ ಡಿಜಿಟಲ್ ಗ್ರಂಥಾಲಯದಲ್ಲೇ ಪ್ರಕಟಿಸಿ, ಕೃತಿಕಾರರಿಂದ ಪ್ರಬಂಧ ಅಕಾಡೆಮಿಗೆ ಸಲ್ಲಿಕೆಯಾದ ಕೂಡಲೇ ಅದನ್ನು ಕಣಜದಲ್ಲಿ ಪ್ರಕಟಿಸುವ ಕಾರ್ಯ ನಡೆಯಲಿದೆ. ಪ್ರಸ್ತುತ ಡಿಜಿಟಲ್ ಲೈಬ್ರರಿಯಲ್ಲಿ ಪ್ರಬಂಧ ಪ್ರಕಟವಾಗುತ್ತಿದ್ದರೂ, ಹುಡುಕಾಟವನ್ನು ಸುಲಭವಾಗಿಸುವ ಉದ್ದೇಶದಿಂದ ಅದಕ್ಕಾಗಿ ಕಣಜದಲ್ಲಿ ಪ್ರತ್ಯೇಕ ವಿಭಾಗ ತೆರೆದುಕೊಳ್ಳಲಿದೆ.
ಕೆ.ಮರುಳಸಿದ್ದಪ್ಪ, ಡಾ.ವಿಜಯಮ್ಮ ಸೇರಿಹಲವರು ತಮ್ಮ ಮಹಾಪ್ರಬಂಧಗಳನ್ನು ನೀಡಿದ್ದಾರೆ. ಇದುವರೆಗೆ 10ಕ್ಕೂ ಥೀಸಿಸ್ ಬಂದಿದ್ದು, ವಿವಿಗಳೂ ಮಾಹಿತಿ ನೀಡಿದರೆ ಇತರರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆ, ರಂಗಾಸಕ್ತರು ಮತ್ತು ರಂಗಾಧ್ಯಯನಶೀಲರ ಉಪಯೋಗಕ್ಕಾಗಿ ಕೃತಿಕಾರರು ಸ್ವಯಂ ಪ್ರೇರಿತರಾಗಿ ಪ್ರಬಂಧಗಳನ್ನು ಅಕಾಡೆಮಿಗೆ ನೀಡಬೇಕು.
-ಜೆ.ಲೋಕೇಶ್, ಅಧ್ಯಕ್ಷರು, ನಾಟಕ ಅಕಾಡೆಮಿ
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Kannada: ಮಾತೃಭಾಷಾ ಹೊಳಪು
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.