ಸಾಧಕರ ಸಮಾಧಿ ಸ್ಥಳ ಅನಾಥ


Team Udayavani, Sep 25, 2018, 12:04 PM IST

sadhakara.jpg

ಬೆಂಗಳೂರು: ಬದುಕಿದ್ದಾಗ ಕನ್ನಡಿಗರು, ಸಾಹಿತ್ಯಾಭಿಮಾನಿಗಳ ಹೃದಯ ಸಾಮ್ರಾಟರಾಗಿ ಮೆರೆದಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್‌.ಅನಂತಮೂರ್ತಿ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಅವರ ಅಂತ್ಯಕ್ರಿಯೆ ನಡೆದ ಸ್ಥಳವೀಗ ಅಕ್ಷರಶಃ ಅನಾಥ!

ಕನ್ನಡ ಸಾರಸ್ವತ ಲೋಕದ ಈ ಇಬ್ಬರು ಮುಕುಟ ಮಣಿಗಳ ಅಂತ್ಯಕ್ರಿಯೆ ಜ್ಞಾನಭಾರತಿ ಸಮೀಪದ ಕಲಾಗ್ರಾಮದ ಆವರಣದಲ್ಲಿ ನೆರವೇರಿತ್ತು. ಸದ್ಯ ಅಂತ್ಯಕ್ರಿಯೆ ಸ್ಥಳದಲ್ಲಿ ಆಯತಾಕಾರದ ಸಿಮೆಂಟ್‌ ಕಟ್ಟೆ ಹೊರತುಪಡಿಸಿದರೆ ಹೆಸರು, ಜನನ- ಮರಣ ದಿನಾಂಕ, ಒಂದಿಷ್ಟು ವಿವರವುಳ್ಳ ಪುಟ್ಟ ಫ‌ಲಕವೂ ಇಲ್ಲದಿರುವುದು ಅಭಿಮಾನಿಗಳಲ್ಲಿ ನೋವು ತಂದಿದೆ.

ಸಾಹಿತ್ಯ ಲೋಕದ ಈ ಮಹಾನ್‌ ಸಾಧಕರಿಗೆ ರಾಜ್ಯ ಮಾತ್ರವಲ್ಲದೇ ರಾಜ್ಯ, ದೇಶ ಗಡಿ ಮೀರಿ ಸಾಹಿತ್ಯಾಭಿಮಾನಿಗಳ ದಂಡೇ ಇದೆ. ಹೀಗಾಗಿ, ಮಹಾನ್‌ ಸಾಹಿತಿಗಳ ಜನನ, ಮರಣ ದಿನದ ಸ್ಮರಣೆಯೂ ಅವರಿಗೆ ತೋರುವ ಗೌರವವೆಂದೇ ಅಭಿಮಾನಿಗಳು, ಹಿಂಬಾಲಕರು ಭಾವಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಿಲ್ಲ.

ಆದರೆ, ಹೀಗೆ ಭೇಟಿ ನೀಡಿದವರಿಗೆ ನೆಚ್ಚಿನ ಸಾಹಿತಿಗಳ ಸ್ಮರಣೆಗಿಂತ ಅಲ್ಲಿನ ಅವಸ್ಥೆಯೇ ಇನ್ನಷ್ಟು ನೋವುಂಟು ಮಾಡಿದರೆ ಅಚ್ಚರಿಯಲ್ಲ. ಏಕೆಂದರೆ ಅಂತ್ಯಕ್ರಿಯೆ ನಡೆದ ಸ್ಥಳದ ಕುರುಹುಗಳನ್ನು ಹೊರತುಪಡಿಸಿದರೆ ಸಾಹಿತಿಗಳ ಕನಿಷ್ಠ ಮಾಹಿತಿಯಿರುವ ಫ‌ಲಕವೂ ಕಾಣುವುದಿಲ್ಲ.

ಹಾಗಾಗಿ ಇಬ್ಬರು ಸಾಹಿತಿಗಳ ಅಂತ್ಯಕ್ರಿಯೆ ನಡೆದ ಸ್ಥಳ ಗುರುತಿಸುವುದೇ ಸವಾಲಾಗುವಷ್ಟರ ಮಟ್ಟಿಗೆ ವ್ಯವಸ್ಥೆ ಇಲ್ಲದಿರುವುದು ಕಾಣುತ್ತದೆ. ಪರಿಣಾಮವಾಗಿ ಇಬ್ಬರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಕೆಲಕಾಲ ಸ್ಮರಿಸಿ, ಕೈಮುಗಿದು ಮೌನವಾಗಿ ನಡೆಯುತ್ತಿದ್ದಾರೆ ಅಭಿಮಾನಿಗಳು.

ಹಿಂದೆ ಅಗೌರವ ವಿವಾದ: ರಾಷ್ಟ್ರೀಯ ನಾಟಕ ಶಾಲೆಗೆ ಸೇರಿದ ಈ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ ಅಂತ್ಯಕ್ರಿಯೆ ನಡೆದ ಸ್ಥಳವೇ ಕಾಣದಷ್ಟರ ಮಟ್ಟಿಗೆ ಗಿಡಗಂಟಿ, ಮುಳ್ಳು ಪೊದೆ ಬೆಳೆದಿತ್ತು. ಆ ಭಾಗದಲ್ಲಿ ಖಾಲಿ ಮದ್ಯದ ಬಾಟಲಿ, ನೀರಿನ ಬಾಟಲಿ, ಲೋಟ ಇತರೆ ಕಸ ಬಿದ್ದಿತ್ತು. ಆ ವಾತಾವರಣ ಜಿಎಸ್‌ಎಸ್‌ ಮತ್ತು ಅನಂತಮೂರ್ತಿ ಅವರಿಗೆ ಅಗೌರವ ತೋರುವಂತಿತ್ತು. ಇದು ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಗ್ರಾಮದ ಸ್ವತ್ಛತೆಗೆ ಮುಂದಾಗಿತ್ತು.

ರಂಗಕಲೆಗೆ ಬಳಕೆ ಆಗಬೇಕು: ಕಲೆಯ ಉದ್ದೇಶಕ್ಕೆ ಬಳಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ರಾಷ್ಟ್ರೀಯ ನಾಟಕ ಶಾಲೆಗೆ ಬೆಂಗಳೂರಿನಲ್ಲಿ ಜಾಗ ನೀಡಿದೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ಕಲಾಗ್ರಾಮ ನಿರ್ಮಾಣವಾಗಿದ್ದು, ಇಲ್ಲಿ ರಾಷ್ಟ್ರೀಯ ಕಲಾ ಶಾಲೆಯ ರಂಗ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಪ್ರದೇಶ ಸದಾ ರಂಗ ಚಟುವಟಿಕೆಗಳಿಗೆ ಸೀಮಿತವಾಗಬೇಕೆ ಹೊರತು ಸಮಾಧಿ ಸ್ಥಳವಾಗಬಾರದು ಎಂದು ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೂವಿನ ತೋಟ ಬೆಳೆಸಲಿ: ಸರ್ಕಾರ ಈ ಹಿಂದೆ ರಾಷ್ಟ್ರಕವಿ ಜಿಎಸ್‌ಎಸ್‌ ಅವರ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿತ್ತು. ಕನಕಪುರ ರಸ್ತೆ ಬಳಿಯ ಜಂಬೂಸವಾರಿ ದಿಣ್ಣೆ  ಬಳಿ ಟ್ರಸ್ಟ್‌ಗೆಂದು ಜಾಮೀನು ಮಂಜೂರು ಮಾಡಿದೆ. ಆದರೆ ಆ ಜಾಗದ ವಿವರ, ವಿಸ್ತೀರ್ಣ ಇತರೆ ಯಾವ ಮಾಹಿತಿಯೂ ಇಲ್ಲ.

ಜಂಬೂಸವಾರಿ ದಿಣ್ಣೆ  ಪ್ರದೇಶ ಬೆಂಗಳೂರಿನ ಹೃದಯ ಭಾಗದಿಂದ ಬಹು ದೂರದಲ್ಲಿದೆ. ಹಾಗಾಗಿ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲೇ ಸ್ವಲ್ಪ ಜಾಗ ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಜಿ.ಎಸ್‌.ಎಸ್‌ ಕುಟುಂಬದ ಆಪ್ತರೊಬ್ಬರು ಹೇಳಿದ್ದಾರೆ.

ನಾನಾ ಉದ್ದೇಶ, ಕಾರ್ಯಗಳಿಗೆ ಭೂಮಿ ನೀಡುವ ಸರ್ಕಾರ ಜಿಎಸ್‌ಎಸ್‌ ಮತ್ತು ಅನಂತಮೂರ್ತಿ ಅವರ ಅಂತ್ಯಕ್ರಿಯೆ ನಡೆದ ಸ್ಥಳವನ್ನು ಒಗ್ಗೂಡಿಸಿ, ಅಲ್ಲೊಂದು ಪುಟ್ಟ ಮಾಹಿತಿಯುಳ್ಳ ನಾಮಫ‌ಲಕ ಅಳವಡಿಸಬಹುದು. ಜತೆಗೆ ಹುಲ್ಲುಹಾಸು, ಹೂವಿನ ತೋಟವನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಂತಿಸಬಹುದು ಎಂದು ತಿಳಿಸಿದ್ದಾರೆ.

ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಮತ್ತು ಡಾ.ಯು.ಆರ್‌.ಅನಂತಮೂರ್ತಿ ಅವರ ಅಭಿಮಾನಿಗಳಲ್ಲಿ ಬೇಸರ ಉಂಟಾಗಲು ಅವಕಾಶ ನೀಡಬಾರದು. ಜತೆ ಹಿರಿಯ ಕಾದಂಬರಿಕಾರ ಬಸವರಾಜ ಕಟ್ಟಿಮನಿ ಅವರ ಸಮಾಧಿ ಸ್ಥಳ ಕೂಡ ನಾಪತ್ತೆಯಾಗಿದ್ದು, ಇದರ ಉಳಿವಿಗೂ ಸರ್ಕಾರ ಮುಂದಾಗಬೇಕು.
-ಸಿದ್ಧಲಿಂಗಯ್ಯ, ಹಿರಿಯ ಕವಿ

ಈ ಇಬ್ಬರು ಮಹನಿಯರು ರಾಷ್ಟ್ರಮಟ್ಟದಲ್ಲಿ ಕನ್ನಡ ಸೊಗಡನ್ನು ಬಿಂಬಿಸಿದವರು. ಸರ್ಕಾರ ಈ ಬಗ್ಗೆ ಉಪೇಕ್ಷೆ ಮಾಡಬಾರದು. ಇವುಗಳನ್ನು ಅಚ್ಚುಕಟ್ಟಾಗಿ ಕಾಪಾಡುವುದು, ಪರಂಪರೆಯನ್ನು ಕಾಪಾಡಿದಂತೆ ಎಂಬುದನ್ನು ಅರಿಯಬೇಕು.
-ಹಂಪ ನಾಗರಾಜಯ್ಯ, ಹಿರಿಯ ಸಂಶೋಧಕ

* ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.