ದುರಂತವಾದರೂ ಗುತ್ತಿಗೆದಾರರಿಗೆ ಶಿಕ್ಷೆ ಇಲ್ಲ
Team Udayavani, May 26, 2017, 12:18 PM IST
ಬೆಂಗಳೂರು: ಕಳೆದ ಶನಿವಾರ ಕುರುಬರ ಹಳ್ಳಿಯ ಜೆ.ಸಿ.ನಗರ ಬಳಿ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಶಾಂತಕುಮಾರ್ ಈವರೆಗೆ ಪತ್ತೆಯಾಗಿಲ್ಲ. ಅಷ್ಟಾದರೂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ಧ ಪಾಲಿಕೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜೆ.ಸಿ.ನಗರದಲ್ಲಿ ನಡೆಯುತ್ತಿದ್ದ ಮಳೆ ನೀರುಗಾಲುವೆ ತಡೆಗೋಡೆ ಕಾಮಗಾರಿಯನ್ನು ಉಪಗುತ್ತಿಗೆ ನೀಡಲಾಗಿತ್ತು. ಆದರೂ ಸಹ ಗುತ್ತಿಗೆ ಪಡೆದ ಸಂಸ್ಥೆಯ ಎಂಜಿನಿಯರ್ ಸ್ಥಳದಲ್ಲಿ ಇರಬೇಕಿತ್ತು. ಅವರು ಸ್ಥಳದಲ್ಲಿದ್ದು ಕಾರ್ಮಿಕರಿಗೆ ಸೂಚನೆ ನೀಡಬೇಕು. ಸ್ಥಳದಲ್ಲಿ ಯಾರೂ ಘಟನೆ ನಡೆದ ದಿನ ಸ್ಥಳದಲ್ಲಿ ಯಾರು ಇರಲಿಲ್ಲ. ಈ ಅಜಾಗರೂಕತೆಯಿಂದಾಗಿಯೇ ದುರಂತ ಸಂಭವಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.
ಹೆಚ್ಚು ಪರಿಹಾರ ಕೊಟ್ಟ ಮೇಯರ್?
ಶಾಂತಕುಮಾರ್ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಮೇಯರ್ ಜಿ.ಪದ್ಮಾವತಿ ಅವರು 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ, ನೀರಿನಲ್ಲಿ ಕೊಚ್ಚಿ ಹೋಗಿರುವ ಶಾಂತ ಕುಮಾರ್ ಪಾಲಿಕೆಯ ನೌಕರನಲ್ಲ. ನಿರ್ಮಾಣ ಗುತ್ತಿಗೆ ಪಡೆದ ಸಂಸ್ಥೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅದರಂತೆ ಆ ಸಂಸ್ಥೆಯೇ ಆತನ ಕುಟುಂಬಕ್ಕೆ ಪರಿಹಾರ ನೀಡಬೇಕಾಗುತ್ತದೆ.
ನೈಸರ್ಗಿಕ ವಿಪತ್ತಿನಿಂದ ಕೊಚ್ಚಿ ಹೋಗಿರುವುದರಿಂದ ಬಿಬಿಎಂಪಿ ನಿಯಮಾವಳಿಗಳ ಪ್ರಕಾರ 1 ರಿಂದ 2 ಲಕ್ಷ ಪರಿಹಾರ ನೀಡುವ ಅಧಿಕಾರ ಮೇಯರ್‌ಗಿದೆ. ಆದರೆ, ಮೇಯರ್ ಅವರು 10 ಲಕ್ಷ ಪರಿಹಾರ ಘೋಷಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದೂ ಸಂಶಯ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.