ವಾರಸುದಾರರ ಕೈಸೇರಿದ ಕೋಟಿ ಮೌಲ್ಯದ ಕಳವು ವಸ್ತು
Team Udayavani, Apr 1, 2018, 12:55 PM IST
ಮಹದೇವಪುರ: ವೈಟ್‌ಫೀಲ್ಡ್ ಉಪವಿಭಾಗದ 8 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ವಾಹನ ಮತ್ತು ಆಭರಣ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಈ ಸಂಬಂಧ 49 ಆರೋಪಿಗಳನ್ನು ಬಂಧಿಸಿ, ಇವರಿಂದ ವಶಕ್ಕೆ ಪಡೆದಿದ್ದ 1.6 ಕೋಟಿ ವîೌಲ್ಯದ ವಸ್ತುಗಳನ್ನು ಶನಿವಾರ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಸಮೀಪದ ಕಾಡುಗೋಡಿ ಪೋಲಿಸ್ ಠಾಣೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ನಗರ ಪೋಲಿಸ್ ಆಯುಕ್ತ ಟಿ.ಸುನೀಲ್ ಕುಮಾರ್, ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದರು. ಕೆ.ಆರ್.ಪುರ, ಕಾಡುಗುಡಿ, ಮಾರತ್ತಹಳ್ಳಿ, ಮಹದೇವಪುರ, ಎಚ್‌ಎಎಲ್, ವರ್ತೂರು, ಬೆಳ್ಳಂದೂರು, ವೈಟ್‌ಫೀಲ್ಡ್ ಠಾಣೆಗಳ ಪೊಲೀಸರು ಸರಗಳವು, ಬೈಕ್, ಕಾರು ಕಳವು ಪ್ರಕರಣಗಳನ್ನು ಭೇದಿಸಿ,
140 ಬೈಕ್, 1 ಕೆ.ಜಿ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್, ಒಂದು ಕಾರು, ಟೆಂಪೋ ಸೇರಿ ಒಂದು ಕೋಟಿಗೂ ಅಧಿಕ ವîೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಇದರೊಂದಿಗೆ ಎಟಿಎಂಗೆ ಜಮಾ ಮಾಡಬೇಕಿದ್ದ 52 ಲಕ್ಷ ರೂ. ದೋಚಿದ್ದ ಆರೋಪಿ ಪರಮೇಶ ಎಂಬಾತನನ್ನು ಬಂಧಿಸಿದ ಮಾರತ್ತಹಳ್ಳಿ ಪೋಲಿಸರು, ಆತನಿಂದ ವಶಕ್ಕೆ ಪಡೆದ 51.50 ಲಕ್ಷ ರೂ. ನಗದನ್ನು ಈ ವೇಳೆ ಪ್ರದರ್ಶಿಸಲಾಯಿತು.
ಚುನಾವಣೆ ಭದ್ರತೆ: “ವಿಧಾನಸಭೆ ಚುನಾವಣೆ ಹಿನ್ನೆಲೆ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಈಗಾಗಲೇ ನಗರದಲ್ಲಿ ಪರವಾನಗಿ ಪಡೆದಿರುವ ಬಂದೂಕು ಮತ್ತಿತರ ಆಯುಧಗಳನ್ನು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸುವಂತೆ ಸೂಚಿಸಿದ್ದು, ಈವರೆಗೆ 8000 ಸಾವಿರ ಬಂದೂಕುಗಳನ್ನು ಠೇವಣಿ ಪಡೆಯಲಾಗಿದೆ.
ಉಳಿದವರು ಆಯಾ ಠಾಣೆ ವ್ಯಾಪ್ತಿಯಲ್ಲಿ ಆಯುಧಗಳನ್ನು ಠೇವಣಿ ಇರಿಸಲು ಸೂಚಿಸಲಾಗಿದೆ,’ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮಾಹಿತಿ ನೀಡಿದರು. ಕೆಲ ತಿಂಗಳ ಹಿಂದೆ ಮಾರತ್ತಹಳ್ಳಿಯ ಅಶ್ವತ್ಥ ನಗರದಲ್ಲಿ ವೃದ್ಧ ದಂಪತಿಯನ್ನು ಅವರ ಮೊಮ್ಮಗನೇ ಕೊಂದು ಚಿನ್ನಾಭರಣ ದೋಚಿದ್ದ. ಪ್ರಕರಣದ ಆರೋಪಿ ಹಾಗೂ ಆತನಿಗೆ ನೆರವಾದ ಸ್ನೇಹಿತರನ್ನು
ಬಂಧಿಸಿದ ಪೊಲೀಸರು ಅವರಿಂದ ವಶಕ್ಕೆ ಪಡೆದ ಆಭರಣಗಳನ್ನು, ಮೃತ ವೃದ್ಧ ದಂಪತಿಯ ಮಗಳು (ಬಂಧಿತನ ತಾಯಿ) ಹೇಮಾ ಅವರಿಗೆ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಹೇಮಾ, “ನನ್ನ ಅಪ್ಪ, ಅಮ್ಮನನ್ನು ನನ್ನ ಮಗನೇ ಹತ್ಯೆ ಮಾಡುತ್ತಾನೆ ಎಂಬುದನ್ನು ಕನಸಲ್ಲೂ ಊಹಿಸಿರಲಿಲ್ಲ. ಅದೊಂದು ಕೆಟ್ಟ ಘಳಿಗೆ. ಈಗ ಆಭರಣ ಸಿಕ್ಕಿವೆ, ಆದರೆ ಹೋದ ಅಪ್ಪ, ಅಮ್ಮ ಸಿಗುವುದಿಲ್ಲ,’ ಎನ್ನುತ್ತಾ ಭಾವುಕರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.